ಕುಂದಾಪುರ: ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಮಕ್ಕಳ ಜತೆಗಿನ ಒಡನಾಟ ಅದ್ಭುತ ಶಕ್ತಿ ಒದಗಿಸಬಲ್ಲದು. ಆದ್ದರಿಂದ ಶಿಕ್ಷಕರು ದೀರ್ಘ ಆಯುಷಿಗಳಾಗಿರುತ್ತಾರೆ. ನಮ್ಮ ಬೋಧನೆ, ಪಾಠಕ್ಕಿಂತಲೂ ಕಣ್ಣಿನಲ್ಲಿಯೇ, ವರ್ತನೆಯಿಂದಲೇ ಮಕ್ಕಳನ್ನು ಬದ ಲಾಯಿಸಬಹುದು ಎಂದು ಶಿವಮೊಗ್ಗ ಡಯಟ್ ಹಿರಿಯ ಉಪನ್ಯಾಸಕ ಜಿ.ವಿ. ಹರಿಪ್ರಸಾದ್ ಹೇಳಿದ್ದಾರೆ.
ಅವರು ಬುಧವಾರ ಇಲ್ಲಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.
ಉದ್ಘಾಟಿಸಿದ ಜಿ.ಪಂ. ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ವಿದ್ಯೆ ಕಲಿಸಿದ ಗುರು ಪೂಜಾರ್ಹ. ಇದು ಉತ್ಪ್ರೇಕ್ಷೆಯಲ್ಲ. ಉದ್ಯೋಗ, ಕರ್ತವ್ಯ ಎಂದು ತಿಳಿಯದೇ ತಮ್ಮಲ್ಲಿರುವ ವಿದ್ಯೆಯನ್ನು ಧಾರೆ ಎರೆಯುತ್ತಾರೆ. ವಿದ್ಯಾರ್ಥಿ, ಸಂಸ್ಥೆ ತಮ್ಮದು ಎಂದು ಭಾವಿಸಿ ಭಾವನಾತ್ಮಕ ಸಂಬಂಧ ಹೊಂದಿ ಉನ್ನತಿಯನ್ನು ಅಪೇಕ್ಷಿಸುತ್ತಾರೆ ಎಂದರು.
ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ಪೆಡೆ°àಕರ್ ಅಧ್ಯಕ್ಷತೆ ವಹಿಸಿದ್ದರು. ಎಸೆಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಕಂಡ್ಲೂರು ರಾಮ್‌ಸನ್ ಪ್ರೌಢಶಾಲೆಯ ಆದಿತ್ಯ, ಹೆಸ್ಕತ್ತೂರು ಪ್ರೌಢಶಾಲೆಯ ಶ್ರೀಪತಿ, ಬಿದ್ಕಲ್‌ಕಟ್ಟೆ ಪ್ರೌಢಶಾಲೆಯ ಅಭಿಜಿತ್ ಕಿಣಿ ಅವರಿಗೆ ಸರಕಾರದಿಂದ ನೀಡಿದ ಲ್ಯಾಪ್‌ಟಾಪ್‌ನ್ನು ವಿತರಿಸಲಾಯಿತು. ನಿವೃತ್ತ ಹಾಗೂ ಸಾಧಕ ಶಿಕ್ಷಕರನ್ನು ಸಮ್ಮಾನಿಸಲಾಯಿತು.
ಅಕ್ಷರದಾಸೋಹ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಸದಾರಾಮ ಶೆಟ್ಟಿ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ದಿನಕರ ಶೆಟ್ಟಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಚನ್ನಯ್ಯ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಸೂರಪ್ಪ ಹೆಗ್ಡೆ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ನಾರಾಯಣ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸದಾನಂದ ಬೈಂದೂರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಸ್ವಾಗತಿಸಿದರು. ವೇಣುಗೋಪಾಲ ಹೆಗ್ಡೆ, ಸಂತೋಷ್ ಕುಮಾರ್ ಶೆಟ್ಟಿ ನಿರ್ವಹಿಸಿದರು.