Advertisement

ಕುಂದಾಪುರ: 18,250 ಹೆಕ್ಟೇರ್‌ ಬಿತ್ತನೆ ಗುರಿ​​​​​​​

06:00 AM Jun 03, 2018 | Team Udayavani |

ಕುಂದಾಪುರ: ಮುಂಗಾರು ನಿಧಾನಕ್ಕೆ ಆರಂಭವಾಗುತ್ತಿದ್ದಂತೆ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಈ ಹಂಗಾಮಿನಲ್ಲಿ 3 ಹೋಬಳಿಯಿಂದ ಒಟ್ಟು 18,250 ಹೆಕ್ಟೇರ್‌ ಭತ್ತದ ಬಿತ್ತನೆ ಗುರಿಯನ್ನು ಹೊಂದಲಾಗಿದೆ.

Advertisement

ಈಗಾಗಲೇ ಒಂದೆರಡು ಮಳೆಯಾಗಿದ್ದರಿಂದ ಕುಂದಾಪುರ ಭಾಗದಲ್ಲಿ ರೈತರು ಗದ್ದೆಗಳನ್ನು ಉಳುಮೆ ಮಾಡಿ, ಹದ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬೀಜಗಳನ್ನು ಬಿತ್ತಲಾಗಿದ್ದು, ಇನ್ನೊಂದು ವಾರದಲ್ಲಿ ಕೃಷಿ ಕಾರ್ಯ ಮತ್ತಷ್ಟು ಚುರುಕು ಪಡೆದುಕೊಳ್ಳಲಿದೆ. ಕಳೆದ ಬಾರಿ ಮುಂಗಾರಿನಲ್ಲಿ 17,850 ಹೆಕ್ಟೇರ್‌ ಬಿತ್ತನೆ ಕಾರ್ಯ ನಡೆದರೆ, ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಭತ್ತದ ಬಿತ್ತನೆಯ ಗುರಿಯನ್ನು ಹೊಂದಲಾಗಿದೆ.

ಬದಲಿ ಭತ್ತದ ಬೀಜ ಬಳಕೆ
ಎಂ.ಒ. 4 ಭತ್ತದ ಬೀಜದ ಕೊರತೆ ನೀಗಿಸಲು ಕೇರಳದಿಂದ ಈ ಬಾರಿ ಕುಂದಾಪುರ ಕೃಷಿ ಕೇಂದ್ರಕ್ಕೆ ತಲಾ 160 ಕೆ.ಜಿ. ಯಷ್ಟು ಎಂ.ಒ. 21 ಬೀಜ ಹಾಗೂ ಎಂ.ಒ. 22 ಭತ್ತದ ಬೀಜವನ್ನು ತರಿಸಲಾಗಿದೆ. 

ಎಂ.ಒ. 4 ಭತ್ತದ ಬೀಜಗಳಿಗೆ ಪರ್ಯಾಯ ವ್ಯವಸ್ಥೆ
ಕರಾವಳಿ ಭಾಗದಲ್ಲಿ ಹೆಚ್ಚಿನ ರೈತರು ಹೆಚ್ಚು ಫಸಲು ತರುವ ಎಂ.ಒ. 4 ಭತ್ತದ ಬೀಜವನ್ನು ಬಳಸುತ್ತಿದ್ದು, ಆದರೆ ಈ ಬಾರಿ ಶಿವಮೊಗ್ಗದಲ್ಲಿ ಹವಾಮಾನ ವೈಪರೀತ್ಯ ಇನ್ನಿತರ ಕಾರಣದಿಂದ ಅಲ್ಲಿ ಉತ್ಪಾದನೆ ಕಡಿಮೆಯಾಗಿತ್ತು. ಆ ಕಾರಣದಿಂದ ಉಡುಪಿ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಎಂ.ಒ. 4 ಬೀಜಗಳ ಕೊರತೆಯಿದೆ. ಆದರೆ ಅದಕ್ಕೆ ಪರ್ಯಾಯವಾಗಿ ಜ್ಯೋತಿ, ಉಮಾ, ಎಂ.ಒ.21, ಎಂ.ಒ. 22 ಭತ್ತದ ಬೀಜಗಳನ್ನು ತರಿಸಲಾಗಿದೆ.

ಬಿತ್ತನೆ ಗುರಿ  ಅಂಕಿ-ಅಂಶ
ವರ್ಷ    ಗುರಿ    ಆಗಿರುವ ಬಿತ್ತನೆ
2017    18,250    17,850
2016    18250    17,550
2015    18,250    17,250
(ಗುರಿ ಹಾಗೂ ಆಗಿರುವ ಬಿತ್ತನೆ ಹೆಕ್ಟೇರ್‌ಗಳಲ್ಲಿ )

Advertisement

ಬಿತ್ತನೆ ಬೀಜಗಳ ಕೊರತೆಯಿಲ್ಲ
ಕುಂದಾಪುರ ತಾಲೂಕು ವ್ಯಾಪ್ತಿಯ ವಂಡ್ಸೆ, ಬೈಂದೂರು ಹಾಗೂ ಕುಂದಾಪುರದ 3 ವಲಯಗಳಲ್ಲಿ ಎಲ್ಲಿಯೂ ಬಿತ್ತನೆ ಬೀಜದ ಕೊರತೆಯಿಲ್ಲ. ಈಗಾಗಲೇ ಎಲ್ಲ ರೈತರ ಸೇವಾ ಕೇಂದ್ರಗಳಿಗೆ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲಾಗಿದೆ. ಎಂ.ಒ.4 ಬೀಜ 320 ಕ್ವಿಂಟಾಲ್‌ ನಷ್ಟು ಬಂದಿದೆ. ಅದನ್ನು ವಿತರಿಸಲಾಗಿದೆ. ಕೊರತೆಯಾಗುವುದಕ್ಕೆ ಬದಲಿಯಾಗಿ ಬೇರೆ ತಳಿಯ ಬೀಜಗಳನ್ನು ತರಿಸಲಾಗಿದೆ.
– ವಿಟಲ್‌ ರಾವ್‌, ಸಹಾಯಕ ಕೃಷಿ ನಿರ್ದೇಶಕರು, ಕುಂದಾಪುರ ತಾಲೂಕು

Advertisement

Udayavani is now on Telegram. Click here to join our channel and stay updated with the latest news.

Next