Advertisement

ಕುಂದಾಪುರ: ಪುರಸಭೆಯಲ್ಲಿ ಮಳೆನೀರು ಕೊಯ್ಲು ಕಾರ್ಯಾಗಾರ

10:40 PM Jul 29, 2019 | Sriram |

ಕುಂದಾಪುರ: ಎಷ್ಟೇ ಮಳೆ ಬಿದ್ದರೂ ಕರಾವಳಿಯಲ್ಲಿ ಮಳೆಕೊಯ್ಲು ಬೇಕು. ಈಗಾಗಲೇ ಮಹಾದಾಯಿ, ಕೃಷ್ಣಾ, ಕಾವೇರಿ, ಭೀಮಾ ನದಿಗಳ ವಿಚಾರದಲ್ಲಿ ನೆರೆ ಹೊರೆ ರಾಜ್ಯಗಳ ಜತೆ ಜಗಳ ನಡೆಯುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನೀರಿಗಾಗಿ ಯುದ್ಧ ನಡೆಯದಂತೆ ತಡೆಯಲು ಜಲಸಂರಕ್ಷಣೆ ಮಾಡಲೇಬೇಕು ಎಂದು ಬಾರ್ಕೂರು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸೀತಾರಾಮ ಶೆಟ್ಟಿ ಹೇಳಿದರು.

Advertisement

ಸೋಮವಾರ ಸಂಜೆ ಇಲ್ಲಿನ ಪುರಸಭೆಯ ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ಮಳೆಕೊಯ್ಲು ಕಾರ್ಯಾಗಾರದಲ್ಲಿ ಮಾತನಾಡಿದರು.

ಕರಾವಳಿಯಲ್ಲಿ 4 ಸಾವಿರ ಮಿ.ಮೀ. ಮಳೆಯಾಗುತ್ತದೆ. ಆದ್ದರಿಂದ ಮಳೆನೀರು ಸಂಗ್ರಹ ಇಂದಿನ ದಿನಗಳಲ್ಲಿ ಅಗತ್ಯ. ಮನುಷ್ಯ ಸಕಲ ಜೀವರಾಶಿಗೂ ನೀರು ಬೇಕೇ ಬೇಕು ಎಂದರು.

ಮಾಬುಕಳದ ಐರೋಡಿಯ ಜೀವಜಲ ಎಂಟರ್‌ಪ್ರೈಸಸ್‌ನ ಜಲಸಂರಕ್ಷಣ ಸಲಹೆಗಾರ್ತಿ ಜ್ಯೋತಿ ಸಾಲಿಗ್ರಾಮ, ನೀರಿನ ಬೇಜವಾಬ್ದಾರಿ ಬಳಕೆ, ನಿರ್ಲಕ್ಷéವೇ ಕೊರತೆಯಾಗಲು ಕಾರಣ. ಭೂಮಿಯ ನೀರು ಇಂಗಿಸಿ ಅಂತರ್ಜಲ ಹೆಚ್ಚಿಸಿ. ನೀರಿನ ವಿಷಯದಲ್ಲಿ ಸ್ವಾವಲಂಬನೆ ಅಗತ್ಯ. ಬೇರೆ ಬೇರೆ ವಿಧಾನಗಳ ಮೂಲಕ ನೀರಿಂಗಿಸಬಹುದು ಎಂದರು.

ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಮನೆ ಮನೆಗಳಲ್ಲಿ ಮಳೆಕೊಯ್ಲು ನಡೆಯಬೇಕು. ನೀರಿನ ಸಮಸ್ಯೆ ನಿವಾರಣೆಗೆ ನಮ್ಮ ಕೈಲಾದ ಕೊಡುಗೆ ನೀಡೋಣ ಎಂದರು.

Advertisement

ಪುರಸಭೆ ಪರಿಸರ ಎಂಜಿನಿಯರ್‌ ಮಂಜುನಾಥ ಶೆಟ್ಟಿ, ಶುದ್ಧನೀರು ಇಂದಿನ ತುರ್ತು. ಮಳೆ ಏರಿಳಿತವಾಗುತ್ತಿದ್ದು ಪ್ರಕೃತಿ ವೈಪರೀತ್ಯ ಎದುರಿಸಲು ಅಸಾಧ್ಯ. ಬದುಕುವ ಕ್ರಮದಿಂದ ನೀರಿನ ಬಳಕೆಗೆ ಮಿತಿಯೊಡ್ಡಬೇಕು. ನೈಸರ್ಗಿಕವಾಗಿ ದೊರೆಯುವ ನೀರಿನ ಸಂರಕ್ಷಣೆ ಹಾಗೂ ಸದ್ಬಳಕೆ ಇಂದಿನ ಅಗತ್ಯ ಎಂದರು.

ನೊಂದಾಯಿತ ಎಂಜಿನಿಯರ್‌ಗಳು, ಪುರಸಭೆ ಸದಸ್ಯರು, ಮಾಜಿ ಸದಸ್ಯರು, ಸಾರ್ವಜನಿಕರು ಕಾರ್ಯಾಗಾರದಲ್ಲಿದ್ದರು.

ಮಿತವ್ಯಯ ಮಾಡಿ
ಈಗಾಗಲೇ ಹೊಸಮನೆ ಕಟ್ಟಲು ಅನುಮತಿಗೆ ನೀರಿಂಗಿಸುವಿಕೆ ಕಡ್ಡಾಯ ಎಂಬ ನಿಯಮ ಬಂದಿದೆ. ಆದ್ದರಿಂದ ನಮ್ಮ ಮನೆ ಬಾವಿಯಲ್ಲಿ ನೀರಿದೆ ಎಂಬ ಹುಂಬತನ ಸಲ್ಲದು. ನಮ್ಮ ಮನೆ ಬಾವಿಗೆ ನೀರಿಂಗಿಸಿದರೆ ಇತರರಿಗೆ ಪ್ರಯೋಜನ ಎಂಬ ದುರಾಲೋಚನೆಯೂ ಸಲ್ಲದು. ಡ್ರಮ್‌ ಪದ್ಧತಿ ಮೂಲಕ ಸರಳವಾಗಿ ನೀರಿಂಗಿಸಬಹುದು.

ನೀರು ಸಂಗ್ರಹಿಸಲು ಟ್ಯಾಂಕ್‌ಗಳನ್ನು ಬಳಸಬಹುದು. ಇಬ್ಬರಿಗೆ 135 ಲೀ. ನೀರು ಸಾಕಾಗುತ್ತದೆ. ಆದರೆ ನಾವು 300 ಲೀ.ಗಿಂತ ಹೆಚ್ಚು ಬಳಸುತ್ತಿದ್ದೇವೆ. ಆದ್ದರಿಂದ ನೀರಿನ ಮಿತವ್ಯಯ ಕೂಡಾ ನಮಗೆ ಕಲಿಯಬೇಕಾದ ಅಗತ್ಯವಿದೆ ಎಂದು ಐರೋಡಿಯ ಜೀವಜಲ ಎಂಟರ್‌ಪ್ರೈಸಸ್‌ನ ಜಲಸಂರಕ್ಷಣ ಸಲಹೆಗಾರ್ತಿ ಜ್ಯೋತಿ ಸಾಲಿಗ್ರಾಮ ತಿಳಿಸಿದರು.

ಅನುಸರಣೀಯ
ಉದಯವಾಣಿ ಪತ್ರಿಕೆಯಲ್ಲಿ ಮಳೆನೀರು ಕೊಯ್ಲು ಕುರಿತು ಉತ್ತೇಜಕ ಮಾಹಿತಿಗಳು ಬರುತ್ತಿವೆ. ಇವುಎಲ್ಲರಿಗೂ ಅನುಸರಣೀಯ ಹಾಗೂ ಮಾರ್ಗದರ್ಶಿಯಾಗಿವೆ.
-ಗಿರೀಶ್‌ ಜಿ.ಕೆ.,
ಸದಸ್ಯರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next