Advertisement
ಫೆ. 19ರಂದು ಸರ್ವೋಚ್ಚ ನ್ಯಾಯಾ ಲಯದ ನ್ಯಾಯಮೂರ್ತಿ ಗಳಿಂದ ಉದ್ಘಾಟನೆಯಾಗಲಿದೆ. ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಾಸ್ತಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಅಂಗಾರ ಅವರು ಭಾಗವಹಿಸಲಿದ್ದಾರೆ.
6 ಕೋ. ರೂ. ವೆಚ್ಚದಲ್ಲಿ ನಿರ್ಮಾಣ ವಾದ ಈ ಕಟ್ಟಡಕ್ಕೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರು 2019ರ ಜೂ. 8ರಂದು ಶಿಲಾನ್ಯಾಸ ಮಾಡಿ ದ್ದರು. ಈಗ ಉದ್ಘಾಟನೆಗೂ ಅವರೇ ಆಗಮಿಸಲಿದ್ದಾರೆ.
ಕೋವಿಡ್ ಲಾಕ್‌ಡೌನ್ ಇತ್ಯಾದಿ ಎಲ್ಲ ಸಂಕಷ್ಟಗಳ ನಡುವೆಯೂ ಬೃಹತ್ ಸಂಕೀರ್ಣ 3 ವರ್ಷಗಳ ಒಳಗೆ ನಿರ್ಮಾಣವಾಗಿದೆ. ಕೆಂಬಣ್ಣದ ಬೃಹತ್ ಕಟ್ಟಡ ಈ ಪರಿಸರದಲ್ಲಿ ತಲೆ ಎತ್ತಿದ್ದು ನಗರಕ್ಕೊಂದು ಮಕುಟಮಣಿಯಂತೆ ಕಾಣುತ್ತಿದೆ. ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರ, ವಕೀಲರ ವಾಹನಗಳು ನಿಲ್ಲುವಲ್ಲಿ ಈಗಾಗಲೇ ಪುರಸಭೆ ಇಂಟರ್‌ಲಾಕ್ ಅಳವಡಿಸಿದೆ. ಹಳೆ ಕಟ್ಟಡ
ಈಗ ಇರುವ ಕಟ್ಟಡದಲ್ಲಿ ಪ್ರಸ್ತುತ 5 ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ವಕೀಲರ ಸಂಘವೂ ಇದೇ ಕಟ್ಟಡದಲ್ಲಿದೆ. ಈ ಕಟ್ಟಡದಿಂದ 2 ನ್ಯಾಯಾಲಯಗಳು ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ. ಉಳಿಕೆ 3 ಕೋರ್ಟ್ ಗಳು ಹಳೆ ಕಟ್ಟಡದಲ್ಲೇ ಕಾರ್ಯಭಾರ ಮುಂದುವರಿಸಲಿವೆ. ಬೈಂದೂರು ತಾ| ನ್ಯಾಯಾಲಯ ಪ್ರತ್ಯೇಕ ಆದ ಕಾರಣ ಕುಂದಾಪುರದಲ್ಲಿ ಅಲ್ಲಿನ ಪ್ರಕ ರ ಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಒಟ್ಟಿನಲ್ಲಿ ಎರಡೂ ಕಟ್ಟಡಗಳಲ್ಲಿ ನ್ಯಾಯಾಲಯಗಳು ಕಾರ್ಯನಿರ್ವಹಿಸಲಿವೆ.
Related Articles
ಕುಂದಾಪುರಕ್ಕೆ ಕೌಟುಂಬಿಕ ನ್ಯಾಯಾ ಲಯದ ಅಗತ್ಯ ಇದ್ದು ಮಂಜೂರು ಮಾಡಬೇಕೆಂದು ಬೇಡಿಕೆ ಸಲ್ಲಿಸಲಾಗಿದೆ. ಅಷ್ಟಲ್ಲದೇ ಸಿವಿಲ್ ಜಡ್ಜ್ ಸೀನಿಯರ್ ಡಿವಿಜನ್ ಕೋರ್ಟ್ ಕೂಡ ಬೇಕೆಂದು ಬೇಡಿಕೆ ಇಡಲಾಗಿದೆ. ಈ ಪೈಕಿ ಒಂದು ನ್ಯಾಯಾಲಯ ಮಂಜೂರಾಗುವ ನಿರೀಕ್ಷೆಯಿದೆ. ಯಾವುದು ಮಂಜೂ ರಾಗಲಿದೆ ಎನ್ನುವ ಕುರಿತು ಖಚಿತ ಇಲ್ಲ.
Advertisement
ಏನೆಲ್ಲ ಇದೆನೆಲ ಅಂತಸ್ತು ಹಾಗೂ ಅದರ ಮೇಲೆ 2 ಅಂತಸ್ತುಳ್ಳ ವಿಶಾಲ ಕಟ್ಟಡ ಇದಾಗಿದೆ. ಸುಮಾರು 6,500 ಚದರ ಅಡಿ ವಿಸ್ತೀರ್ಣ ಹೊಂದಿದೆ. ಕೆಳ ಅಂತಸ್ತಿನಲ್ಲಿ ವಕೀಲರ ಸಂಘದ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. ಮೇಲಂತಸ್ತಿನಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಹಾಗೂ ಸೀನಿಯರ್ ಸಿವಿಲ್ ಕೋರ್ಟ್, ನ್ಯಾಯಾಧೀಶರ ಕಚೇರಿ ಕಾರ್ಯನಿರ್ವಹಿಸಲಿದೆ. ಮಹಡಿಗೆ ಹೋಗಲು 2 ಲಿಫ್ಟ್ ವ್ಯವಸ್ಥೆ ಇದೆ. ಹಳೆ ನ್ಯಾಯಾಲಯದಲ್ಲಿ ಲಿಫ್ಟ್ ಇಲ್ಲ. ಸಿದ್ಧವಾಗಿದೆ
ಎಲ್ಲರ ಬೇಡಿಕೆಯಂತೆ ಕಟ್ಟಡ ಮಂಜೂರಾಗಿದ್ದು ಕಾಮಗಾರಿ ಪೂರ್ತಿಯಾಗಿ ಉದ್ಘಾಟನೆಗೆ ಸಜ್ಜಾಗಿದೆ. ನ್ಯಾಯಾಲಯ ಹಾಗೂ ವಕೀಲರ ಸಂಘ ಈ ವಿಶಾಲವಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ.
-ಸಳ್ವಾಡಿ ನಿರಂಜನ ಹೆಗ್ಡೆ, ಅಧ್ಯಕ್ಷ, ಕುಂದಾಪುರ ತಾ| ವಕೀಲರ ಸಂಘ