Advertisement
ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿರು ಅನಧಿಕೃತ ಅಂಗಡಿಗಳ ತೆರವುಗೊಳಿಸಲು ಈಗಾಗಲೇ ನ್ಯಾಯಾಲಯ ಆದೇಶ ನೀಡಿದ್ದರೂ ಈ ತನಕ ತೆರವುಗೊಳಿಸದೇ ಇರುವ ಬಗ್ಗೆ ಸದಸ್ಯ ಸತೀಶ್ ಶೆಟ್ಟಿ ಸಭೆಯ ಗಮನಕ್ಕೆ ತಂದರು. ನ್ಯಾಯಾಲಯದ ಆದೇಶದಂತೆ ತುರ್ತು ತೆರವುಗೊಳಿಸಲು ಆದೇಶ ನೀಡಿದ್ದರಿಂದ ಯಾವುದೇ ಮೀನಮೇಷ ಮಾಡದೇ ತೆರವುಗೊಳಿಸಿ, ಜತೆಗೆ ನ್ಯಾಯಾಲಯದಿಂದ ಆದೇಶ ಬಂದಿರುವ ಇತರ ಅಂಗಡಿಗಳ ತೆರವುಗೊಳಿಸುವ ಪ್ರಕ್ರಿಯೆ ನಡೆಯಲಿ ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸದಸ್ಯ ಶ್ರೀಧರ್ ಸೇರುಗಾರ್ ಈಗಾಗಲೇ ಪುರಸಭಾ ವ್ಯಾಪ್ತಿಯಲ್ಲಿ ಹಲವು ಹೊಸ ಕಟ್ಟಡಗಳು ಆಗಿವೆ. ಅವುಗಳಿಗೆ ಯಾವುದೇ ನೀತಿ ನಿಯಮವನ್ನು ರೂಪಿಸಿದೇ ಆದೇಶ ನೀಡಲಾಗಿದೆ. ಅವುಗಳನ್ನು ಸಹ ತೆರವುಗೊಳಿಸಬೇಕಾಗಿದೆ. ಶಾಸ್ತ್ರೀ ವೃತ್ತದ ಬಳಿಯಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಲು ತೆರವುಗೊಳಿಸುವಾಗ ಅವರಿಗೆ ಬೇರೆ ಪರ್ಯಾಯ ವ್ಯವಸ್ಥೆ ಮಾಡಿದ ಹಾಗೇ ಇತರ ಅಂಗಡಿಗಳಿಗೂ ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು. ಸದಸ್ಯ ಪ್ರಭಾಕರ್ ಕೋಡಿ ಹಾಗೂ ಚಂದ್ರ ಅಮೀನ್ ಅವರಿಗೆ ಧ್ವನಿಯಾಗಿ ಮಾತನಾಡಿದರು.
Related Articles
Advertisement
ಸದ್ರಿ ಜಾಗದಲ್ಲಿ ರಂಗಭೂಮಿ ನಿರ್ಮಾಣ ಮಾಡುವ ಪ್ರಸ್ತಾವವನ್ನು ಕೈಬಿಟ್ಟು ಈ ಜಾಗದಲ್ಲಿ ಕುಂದಾಪುರದಲ್ಲಿರದ ಪ್ರಥಮ ದರ್ಜೆ ಕಾಲೇಜನ್ನು ನಿರ್ಮಿಸುವ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸುವುದು ಉತ್ತಮ ಎಂದು ಸದಸ್ಯ ರವಿರಾಜ್ ಖಾರ್ವಿ ಹೇಳಿದರೆ, ಸದಸ್ಯ ಶಿವರಾಮ ಪುತ್ರನ್ ಪ್ರತಿಕ್ರಿಯಿಸಿ ಕುಂದಾಪುರದಲ್ಲಿ ಪುರಭವನ ನಿರ್ಮಾಣಕ್ಕೆ ಈ ಜಾಗವನ್ನು ಮೀಸಲಾಗಿಡುವುದು ಸೂಕ್ತ ಎಂದರು. ಈ ನಡುವೆ ಮಾತನಾಡಿದ ಸದಸ್ಯ ವಿಜಯ ಎಸ್. ಪೂಜಾರಿ ಮೊದಲು ಈ ಜಾಗ ಕುಂದಾಪುರ ಪುರಸಭೆಗೆ ಹಸ್ತಾಂತರವಾಗಲಿ ಉಳಿದದ್ದನ್ನು ನಂತರ ಚರ್ಚೆ ನಡೆಸೋಣ ಎಂದರು. ವಿಟuಲ ಕುಂದರ್ ಹಾಗೂ ಉದಯ ಮೆಂಡನ್ ಧ್ವನಿಗೂಡಿಸಿದರು.
ಅಂಗನವಾಡಿ ದುರಸ್ತಿಗೆ ಆಗ್ರಹಪುರಸಭಾ ವ್ಯಾಪ್ತಿಯಲ್ಲಿರುವ ಕೋಡಿಯ ಅಂಗನವಾಡಿ ಕಟ್ಟಡ ನಾದುರಸ್ತಿಯಲ್ಲಿದ್ದು ಅದನ್ನು ತುರ್ತಾಗಿ ದುರಸ್ತಿ ಮಾಡಿಕೊಡುವಂತೆ ಮನವಿ ಮಾಡಿದ್ದರೂ ಈ ತನಕ ದುರಸ್ತಿ ನಡೆಸಿಲ್ಲ ಎಂದು ಸದಸ್ಯ ಸಂದೀಪ್ ಪೂಜಾರಿ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಈಗಾಗಲೇ ಅಂಗನ ವಾಡಿಯನ್ನು ಪರಿಶೀಲನೆ ಮಾಡಿದ್ದು ಕೂಡಲೇ ದುರಸ್ತಿ ಕಾರ್ಯವನ್ನು ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಹೇಳಿದರು. ಅಧ್ಯಕ್ಷೆ ವಸಂತಿ ಸಾರಂಗ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೇಶ್ ಕಾವೇರಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಸಿಸಿಲಿ ಕೋಟ್ಯಾನ್, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.