Advertisement
ಬೀಚ್ ಸಮೀಪದ ಬಂಕ್ ವೊಂದರಲ್ಲಿ ಸ್ನಾನ ಮಾಡಿರುವುದಾಗಿ ಸೋಂಕಿತ ವ್ಯಕ್ತಿ ಹೇಳಿದಂತೆ ಶಿರೂರಿನಿಂದ ಕುಂದಾಪುರದವರೆಗಿನ ಪೆಟ್ರೋಲ್ ಬಂಕ್ ಗಳ ಪೈಕಿ ತ್ರಾಸಿಯಲ್ಲಿರುವ ಪೆಟ್ರೋಲ್ ಬಂಕ್ ಮಾತ್ರವಿದ್ದು, ತಪಾಸಣೆ ನಡೆಸಿದಾಗ ಅಲ್ಲಿಗೆ ಬರಲಿಲ್ಲ. ಅಲ್ಲಿಂದ ಹೆದ್ದಾರಿಯಲ್ಲಿ ಎ.21 ರ ಸಂಜೆ 5.19 ಕ್ಕೆ ಸಂಚರಿಸಿದ್ದು, ತಲ್ಲೂರಿನ ಪೆಟ್ರೋಲ್ ಬಂಕ್ ಕೂಡ ಅಲ್ಲವೆಂದು ತಿಳಿದು ಬಂದಿದ್ದು, ಅಲ್ಲಿ ಸಂಜೆ 6.10ರ ಸುಮಾರಿಗೆ ಸಂಚರಿಸಿದ್ದು, ಕುಂದಾಪುರದ ಸಂಗಮ್ ಬಳಿಯ ಪೆಟ್ರೋಲ್ ಬಂಕ್ ನಲ್ಲಿಯೂ ತಪಾಸಣೆ ನಡೆಸಲಾಗಿದ್ದು, ಅಲ್ಲಿಯೂ ಪೆಟ್ರೋಲ್ ಹಾಕಿಲ್ಲ. ಆದರೆ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಆ ವಾಹನ ಸಾಸ್ತಾನ ಟೋಲ್ ಗೇಟ್ ನಿಂದ ಮುಂದಕ್ಕೆ ಸಂಚರಿಸಿದ್ದು, ಅಂದರೆ ಸಂಜೆ 6 ಗಂಟೆಯಿಂದ ಬೆಳಗ್ಗಿನ ಜಾವ 3ಗಂಟೆಯವರೆಗೆ ಆ ವಾಹನ ಕುಂದಾಪುರ, ಕೋಟೇಶ್ವರ, ತೆಕ್ಕಟ್ಟೆ, ಕೋಟ, ಸಾಸ್ತಾನವರೆಗಿನ ಎಲ್ಲಿಯಾದರೂ ಒಂದು ಕಡೆ ನಿಲ್ಲಿಸಿರಬಹುದು. ಈ ವ್ಯಾಪ್ತಿಯಲ್ಲಿ ಬರುವ ಪೆಟ್ರೋಲ್ ಬಂಕ್ ಗಳಲ್ಲಿ ಎಲ್ಲಿಯಾದರೂ ಒಂದು ಕಡೆ ಸ್ನಾನ ಮಾಡಿರಬಹುದು ಎನ್ನಲಾಗುತ್ತಿದೆ.
ಕುಂದಾಪುರ ಭಾಗ ಯಾವ ಪೆಟ್ರೋಲ್ ಬಂಕ್ ಗಳನ್ನು ಕೂಡ ಸೀಲ್ ಡೌನ್ ಮಾಡಿಲ್ಲ. ಶಿರೂರಿನಿಂದ ಕುಂದಾಪುರ ವರೆಗಿನ ಪೆಟ್ರೋಲ್ ಬಂಕ್ ಗಳ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
-ಹರಿರಾಂ ಶಂಕರ್, ಕುಂದಾಪುರ ಎಎಸ್ ಪಿ