Advertisement
ಕೆರಾಡಿಯಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
Related Articles
ಪಂ. ಅಧ್ಯಕ್ಷ ರಾಘವೇಂದ್ರ ಕೊಠಾರಿ ಮಾತನಾಡಿ, ಇಲ್ಲಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲ. ಎಎನ್‌ಎಂಗಳು ಜನರ ಸಂಪರ್ಕಕ್ಕೆ 15 ಕಿ.ಮೀ. ಕಾಲ್ನಡಿಗೆಯಲ್ಲಿ ಹೋಗಬೇಕು. ಅನಾರೋಗ್ಯ ಪೀಡಿತರು 25 ಕಿಮೀ. ದೂರದ ವಂಡ್ಸೆ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಆದರ್ಶ ಗ್ರಾಮ ಯೋಜನೆಯಡಿ ಉಪ ಆರೋಗ್ಯ ಕೇಂದ್ರ ಮಂಜೂರಾಗಿದ್ದು ಸಹಕಾರಿಯಾಗಿದೆ. ತತ್‌ಕ್ಷಣ ವೈದ್ಯರ ನೇಮಕವಾದರೆ ಉತ್ತಮ ಎಂದು ತಿಳಿಸಿದರು.
Advertisement
ಜಿ.ಪಂ. ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ ಉಪಸ್ಥಿತರಿದ್ದರು.
ಮೊದಲ ಸಚಿವೆಕೆರಾಡಿ ಗ್ರಾಮಕ್ಕೆ ಆಗಮಿಸಿದ ಮೊದಲ ಸಚಿವೆ ಡಾ| ಜಯಮಾಲಾ ಅವರು. ಈ ತನಕ ಯಾವುದೇ ಸಚಿವರು ಈ ಗ್ರಾಮಕ್ಕೆ ಭೇಟಿ ಕೊಟ್ಟಿಲ್ಲ ಎಂದು ಪಂ. ಅಧ್ಯಕ್ಷರು ಹೇಳಿದರು.ಪಿಡಿಒ ಗುರುಮೂರ್ತಿ ಸ್ವಾಗತಿಸಿ, ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ವಿಶ್ರಾಂತ್ ಶೆಟ್ಟಿ ನಿರ್ವಹಿಸಿದರು. ಹಟ್ಟಿಯಂಗಡಿ ಪ್ರಾ.ಆರೋಗ್ಯ ಕೇಂದ್ರ ಉದ್ಘಾಟನೆ
ಕುಂದಾಪುರ: ಹಟ್ಟಿಯಂಗಡಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಚಿವೆ ಜಯಮಾಲಾ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಸುಮಾರು 15 ವರ್ಷಗಳ ಹಿಂದಿನ ಕನಸು ಈಗ ನನಸಾಗುತ್ತಿದೆ. ಹಟ್ಟಿಯಂಗಡಿ ಬಾಗದ ಜನರಿಗೆ ಆರೋಗ್ಯ ಸೇವೆಗಾಗಿ ಸುಸಜ್ಜಿತ ಆಸ್ಪತ್ರೆ ಸೌಲಭ್ಯ ದೊರೆಯುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಈ ಆಸ್ಪತ್ರೆಯಿಂದ ಜನರಿಗೆ ಅನುಕೂಲವಾಗಲಿದೆ. ಉತ್ತಮ ವೈದ್ಯಾಧಿಕಾರಿಯಿದ್ದು ತಾಲೂಕು ಆರೋಗ್ಯಾಧಿಕಾರಿಗಳು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ವಂಡ್ಸೆ ಹಾಗೂ ಹಟ್ಟಿಯಂಗಡಿಗೆ 108 ಅಂಬುಲೆನ್ಸ್ ವ್ಯವಸ್ತೆ ಕಲ್ಪಿಸಿದಲ್ಲಿ ಉತ್ತಮ ಎಂದರು.
ಅಪರ ಜಿಲ್ಲಾಧಿಕಾರಿಗಳು, ಜಿ.ಪಂ. ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ, ಸದಸ್ಯರಾದ ಜ್ಯೋತಿ ಎಂ. ಕಾವ್ರಾಡಿ, ಶಂಕರ ಪೂಜಾರಿ ಬೈಂದೂರು, ತಾ.ಪಂ. ಸದಸ್ಯ ಕರಣ್ ಪೂಜಾರಿ, ಹಟ್ಟಿಯಂಗಡಿ ಪಂ. ಅಧ್ಯಕ್ಷ ರಾಜೀವ ಶೆಟ್ಟಿ, ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ಕ್ಷೇತ್ರದ ಪ್ರಧಾನ ಅರ್ಚಕ ಬಾಲಚಂದ್ರ ಭಟ್ ಉಪಸ್ಥಿತರಿದ್ದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರೋಹಿಣಿ ಸ್ವಾಗತಿಸಿದರು. ಆಸ್ಪತ್ರೆ ವೈದ್ಯಾಧಿಕಾರಿ ಡಾ| ರಂಗನಾಥ ಪ್ರಸ್ತಾವಿಸಿದರು. ರಮೇಶ್ ಗುಲ್ವಾಡಿ ನಿರ್ವಹಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ ವಂದಿಸಿದರು. ಸಭೆಗೆ ಶಾಲಾ ಮಕ್ಕಳು ಬೇಡ
ಸಚಿವರು ಬರುವ ಸಭೆ ತುಂಬಿರಬೇಕೆಂದು ಶಾಲಾ ಮಕ್ಕಳನ್ನು ಕರೆತರುವುದು ತಪ್ಪು. ಬಿಸಿಲಿನಲ್ಲಿ ಕೂರಿಸುವುದು ಇನ್ನೂ ದೊಡ್ಡ ತಪ್ಪು. ಆದ್ದರಿಂದ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಬಾರದು ಎಂದು ಉಸ್ತುವಾರಿ ಸಚಿವೆ ಹೇಳಿದರು. ಕೆರಾಡಿ ನೂತನ ಆರೋಗ್ಯ ಉಪಕೇಂದ್ರ ಕಟ್ಟಡ ಉದ್ಘಾಟನೆ ಸಂದರ್ಭ ಶಾಲಾ ಮಕ್ಕಳು ಹಾಜರಿದ್ದುದನ್ನು ಕಂಡು ಈ ವಿಷಯ ತಿಳಿಸಿದರು. ಮಕ್ಕಳು ದೇವರಂತೆ, ಅವರನ್ನು ಜನ ಕಾಣಿಸಬೇಕೆಂದು ಕರೆತರುವುದು ಸರಿಯಲ್ಲ. ಶಿಕ್ಷಣ ಎನ್ನುವುದು ಪವಿತ್ರ ಕೆಲಸ. ಅಂತಹ ಕೆಲಸಕ್ಕೆ ಅಡ್ಡಿ ಮಾಡಬಾರದು. ಮಕ್ಕಳ ದಿನಾಚರಣೆಗೆ ಮಾತ್ರ ಕರೆತನ್ನಿ. ಶಾಸಕರು ಇದನ್ನು ಗಮನಿಸಬೇಕು. ನನಗೆ ಈ ಘಟನೆ ತುಂಬ ಬೇಸರ ತರಿಸಿದೆ. ಮಕ್ಕಳೇ ನಿಮ್ಮ ಜತೆಗೆ ನಾನಿದ್ದೇನೆ ಎಂದು ಹೇಳಿದರು.