Advertisement
ಶುಕ್ರವಾರ ರಾತ್ರಿ ಮಳೆ ತುಸು ಹೆಚ್ಚಿದ್ದರೆ, ಶನಿವಾರ ಸಂಜೆಯವರೆಗೆ ಬಿಟ್ಟು – ಬಿಟ್ಟು ಮಳೆಯಾಗುತ್ತಿತ್ತು. ಕೋಣಿ ಗ್ರಾಮದ ನಾಗಪ್ಪ ಪೂಜಾರಿ ಅವರ ವಾಸ್ತವ್ಯದ ಮನೆಗೆ ಗಾಳಿ – ಮಳೆಯಿಂದಾಗಿ ಹಾನಿಯಾಗಿದ್ದು, ಸುಮಾರು 40 ಸಾವಿರ ರೂ. ನಷ್ಟ ಸಂಭವಿಸಿದೆ. ಹಂಗಳೂರು ಗ್ರಾಮದ ಕೃಷ್ಣ ದೇವಾಡಿಗ ಅವರ ಮನೆಯ ಶೌಚಾಲಯದ ಗೋಡೆ ಕುಸಿದು ಬಿದ್ದು, ಸುಮಾರು 20 ಸಾವಿರ ರೂ. ನಷ್ಟ ಉಂಟಾಗಿದೆ. ಹೊಂಬಾಡಿ – ಮಂಡಾಡಿ ಗ್ರಾಮದ ಸುಮನಾ ನಾಯ್ಕ ಅವರ ಅಡಿಕೆ ತೋಟಕ್ಕೆ ನೀರು ನುಗ್ಗಿ, ಸುಮಾರು 25 ಸಾವಿರ ರೂ. ನಷ್ಟ ಸಂಭವಿಸಿದೆ.
Related Articles
Advertisement
ಕುಂದಾಪುರ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಿದ್ದರೂ, ಮಲೆನಾಡು ಭಾಗಗಳಲ್ಲಿ ಮಳೆಯಬ್ಬರ ಹೆಚ್ಚಾಗಿರುವುದರಿಂದ ವಾರಾಹಿ ಯೋಜನೆಯ ಎತ್ತಣಕಟ್ಟೆ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಆದರೆ ಜಲಾಶಯ ಭರ್ತಿಯಾಗಲು ಇನ್ನೂ ಸುಮಾರು 11 ಮೀ. ನೀರಿನ ಅಗತ್ಯವಿದ್ದು, ನೀರು ಹೊರಬಿಡುವುದಾದರೆ ಅದಕ್ಕೂ ಮೊದಲು ಇದರ ಆಸುಪಾಸಿನ ಜನರಿಗೆ ಮಾಹಿತಿ ನೀಡಲಾಗುವುದು. ಈ ಬಗ್ಗೆ ಯಾವುದೇ ರೀತಿಯ ಭಯ ಪಟ್ಟುಕೊಳ್ಳುವ ಅಗತ್ಯವಿಲ್ಲ ಎಂದು ಕುಂದಾಪುರದ ತಹಶೀಲ್ದಾರ್ ತಿಪ್ಪೇಸ್ವಾಮಿ ‘ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.