Advertisement
ಕುಂದಾಪುರ ವಲಯದ 130 ಶಾಲೆಗಳ ಸುಮಾರು 470 ಶಿಕ್ಷಕರು ಹಾಗೂ ಬೈಂದೂರು ವಲಯದ 200 ಶಾಲೆಗಳ 700 ಮಂದಿ ಶಿಕ್ಷಕರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಮುಷ್ಕರದಲ್ಲಿ ಭಾಗವಹಿಸಿದ್ದು, ಇದಕ್ಕೆ ಕುಂದಾಪುರ ತಾಲೂಕು ಶಿಕ್ಷಕರ ಸಂಘವು ಕೂಡ ಬೆಂಬಲ ವ್ಯಕ್ತಪಡಿಸಿತ್ತು.
ಬಸ್ರೂರು: ಬಸ್ರೂರು, ಕಂದಾವರ, ಮೂಡ್ಲಕಟ್ಟೆ , ಕಂಡ್ಲೂರು, ಆನಗಳ್ಳಿ, ಬಳ್ಕೂರು ಮುಂತಾದೆಡೆ ಮಕ್ಕಳು ಶಾಲೆಗೆ ಬಾರದೆ ಬಾಗಿಲೇ ತೆಗೆಯಲಿಲ್ಲ. ಆದರೆ ಈ ಪ್ರತಿಭಟನೆ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಅನ್ವಯಿಸಲಿಲ್ಲ. ಉನ್ನತೀಕರಿಸಿದ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರು ಮಾತ್ರ ಇಂದಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ. ಉಳಿದಂತೆ ಎಲ್ಲ ಶಿಕ್ಷಕರು ಭಾಗವಹಿಸಿ ಪ್ರತಿಭಟನೆ ಯಶಸ್ವಿಯಾಗಿದೆ.