Advertisement

ಕುಂದಾಪುರ: ಬಿಜೆಪಿಯ ಕಿರಣ್‌ ಕೊಡ್ಗಿಯಿಂದ ವಿವಿಧ ಪೇಟೆಗಳಲ್ಲಿ ಪ್ರಚಾರ

02:42 PM May 03, 2023 | Team Udayavani |

ಕುಂದಾಪುರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಿರಣ್‌ ಕುಮಾರ್‌ ಕೊಡ್ಗಿ ಅವರು ಮಂಗಳವಾರ ವಿವಿಧ ಪೇಟೆಗಳಲ್ಲಿ ಮತಯಾಚನೆ ನಡೆಸಿದರು. ಗೋಳಿಯಂಗಡಿ, ಮಂದರ್ತಿ, ಸಾಯಿಬ್ರಕಟ್ಟೆ, ಕೋಟ, ಕೋಟೇಶ್ವರ ನಗರದಲ್ಲಿ ಅಂಗಡಿಗಳಿಗೆ ತೆರಳಿ, ರಿಕ್ಷಾ ಚಾಲಕರ ಬಳಿ ಸಾರಿ, ಹೋಟೆಲ್‌ಗ‌ಳಲ್ಲಿ ಇರುವವರ ಬಳಿ ಮತ ಯಾಚಿಸಿದರು.

Advertisement

ರಾಜ್ಯದಲ್ಲಿ ಈಗಾಗಲೇ ಬಿಜೆಪಿ ತನ್ನ ಅಭಿವೃದ್ಧಿ ಪರ, ದೂರದೃಷ್ಟಿಯ, ಸರ್ವಸ್ಪರ್ಶಿ ಸರ್ವವ್ಯಾಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಸಮಾಜದ ಸರ್ವಜನರಿಗೂ ಅಭಿವೃದ್ಧಿಯ ಮುನ್ನಲೆಗೆ ಕೊಂಡೊಯ್ಯುವ ಸಂಕಲ್ಪ ಮಾಡಿದೆ. ಸಮಾಜದಲ್ಲಿ ಒಡಕುಂಟು ಮಾಡದೇ ಬದುಕಲು ಕೊಡುವ ಭರವಸೆಯನ್ನು ನೀಡಿದೆ. ಈ ನಿಟ್ಟಿನಲ್ಲಿ ಜನತೆ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ಇದೆ. ಬಿಜೆಪಿ ಸರಕಾರ ಪೂರ್ಣ ಬಹುಮತದಲ್ಲಿ ಅಸ್ತಿತ್ವಕ್ಕೆ ಬರುವುದು ನಿಶ್ಚಿತ ಎಂದರು.

ಗೋಳಿಯಂಗಡಿಯಲ್ಲಿ ಅಭ್ಯರ್ಥಿ ಕಿರಣ್‌ ಕುಮಾರ್‌ ಕೊಡ್ಗಿ, ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಬಿಜೆಪಿ ಮಾಜಿ ಅಧ್ಯಕ್ಷ ಕಾಡೂರು ಸುರೇಶ್‌ ಶೆಟ್ಟಿ, ಆವರ್ಸೆ ಪಂಚಾಯತ್‌ ಅಧ್ಯಕ್ಷ ಪ್ರಮೋದ್‌ ಹೆಗ್ಡೆ, ಬೆಳ್ವೆ ಪಂಚಾಯತ್‌ ಅಧ್ಯಕ್ಷ ಸೂರ್ಗೋಳಿ ಚಂದ್ರಶೇಖರ ಶೆಟ್ಟಿ, ಸದಸ್ಯ ಸಂತೋಷ್‌ ಹೆಗ್ಡೆ, ಸಂತೋಷ್‌ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಪ್ರತಾಪ್‌ ಹೆಗ್ಡೆ ಮಾರಾಳಿ ಮೊದಲಾದವರಿದ್ದರು.

ಮಂದರ್ತಿಯಲ್ಲಿ ಪಂಚಾಯತ್‌ ಮಾಜಿ ಅಧ್ಯಕ್ಷ ಗಣೇಶ್‌ ಶೆಟ್ಟಿ, ಸದಸ್ಯ ಗುರುಪ್ರಸಾದ್‌, ಪ್ರವೀಣ್‌ ಶೆಟ್ಟಿ, ಸಂತೋಷ್‌ ಶೆಟ್ಟಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ವಿಖ್ಯಾತ್‌ ಶೆಟ್ಟಿ, ಮಂಡಲ ಕಾರ್ಯದರ್ಶಿ ವಂಡಾರು ಪ್ರವೀಣ್‌ ಶೆಟ್ಟಿ ಮೊದಲಾದವರಿದ್ದರು.

Advertisement

ಸಾಯಿಬ್ರಕಟ್ಟೆಯಲ್ಲಿ ಬಿಜೆಪಿ ಪ್ರಮುಖರಾದ ಅಶೋಕ್‌ ಪ್ರಭು, ಪ್ರದೀಪ್‌ ಬಲ್ಲಾಳ್‌, ರವಿರಾಜ್‌ ಶೆಟ್ಟಿ ಕೊಳ್ಕೆಬೈಲು, ಬಿಲ್ಲಾಡಿ ಪೃಥ್ವಿರಾಜ್‌ ಶೆಟ್ಟಿ, ವಡ್ಡರ್ಸೆ ಪಂಚಾಯತ್‌ ಸದಸ್ಯರ ಹರೀಶ್‌ ಶೆಟ್ಟಿ ಬಿಲ್ಲಾಡಿ, ಶಿರಿಯಾರ ಪಂಚಾಯತ್‌ ಅಧ್ಯಕ್ಷ ಸುಧೀಂದ್ರ ಶೆಟ್ಟಿ, ಶಿರಿಯಾರ ಪಂಚಾಯತ್‌ ಸದಸ್ಯ ಹರಿಪ್ರಸಾದ್‌, ಮೊಳಹಳ್ಳಿ ಶ್ರೀಧರ ಶೆಟ್ಟಿ ಮೊದಲಾದವರಿದ್ದರು.

ಕೋಟದಲ್ಲಿ ಸಚಿವ ಶ್ರೀನಿವಾಸ ಪೂಜಾರಿ, ಪಂಚಾಯತ್‌ ಅಧ್ಯಕ್ಷ ಅಜಿತ್‌ ದೇವಾಡಿಗ, ಮಾಜಿ ತಾಲೂಕು ಪಂಚಾಯತ್‌ ಸದಸ್ಯೆ ಲಲಿತಾ, ಕೋಟತಟ್ಟು ಪಂಚಾಯತ್‌ ಸದಸ್ಯ ಪ್ರಕಾಶ್‌ ಹಂದಟ್ಟು, ಸತೀಶ್‌ ಬಾರಿಕೆರೆ, ಮಾಜಿ ಅಧ್ಯಕ್ಷ ನ್ಯಾಯವಾದಿ ಪ್ರಮೋದ್‌ ಹಂದೆ, ಸುರೇಶ್‌ ಕುಂದರ್‌, ಅಜಿತ್‌ ಶೆಟ್ಟಿ ವಡ್ಡರ್ಸೆ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅವಿನಾಶ್‌ ಉಳೂ¤ರು, ಗಿಳಿಯಾರು ಭರತ್‌ ಶೆಟ್ಟಿ ಮೊದಲಾದವರಿದ್ದರು.

ಕೋಟೇಶ್ವರದಲ್ಲಿ ರಾಜೇಶ್‌ ಉಡುಪ, ಪಂಚಾಯತ್‌ ಅಧ್ಯಕ್ಷ ಕೃಷ್ಣ ಗೊಲ್ಲ, ಸದಸ್ಯರಾದ ಲೋಕೇಶ್‌ ಅಂಕದಕಟ್ಟೆ, ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಪೈ, ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುಧೀರ್‌ ಕುಂದಾಪುರ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್‌ ಪೂಜಾರಿ ವಕ್ವಾಡಿ, ಸುರೇಶ್‌ ಶೆಟ್ಟಿ ಗೋಪಾಡಿ ಮೊದಲಾದವರಿದ್ದರು.

ಅಭ್ಯರ್ಥಿ ಕಿರಣ್‌ ಕುಮಾರ್‌ ಕೊಡ್ಗಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಅವರ ಮಾರ್ಗದರ್ಶನದಲ್ಲಿ ಮುಂದುವರಿಸುತ್ತಾ ಕ್ಷೇತ್ರದ ಜನರ ಜತೆ ನಿಕಟ ಸಂಪರ್ಕದಲ್ಲಿ ಇರುತ್ತೇನೆ. ಸಾಮಾಜಿಕ ನ್ಯಾಯ ಕಾಪಾಡುತ್ತೇನೆ ಎನ್ನುವ ಮಾತಿಗೆ ಸದಾ ಬದ್ಧನಾಗಿರುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next