Advertisement

ಕುಂದಾಪುರ: 8 ಮಂದಿಗೆ ಪಾಸಿಟಿವ್‌

08:14 AM Jul 24, 2020 | mahesh |

ಕುಂದಾಪುರ: ವಂಡ್ಸೆ ಗ್ರಾಮದ ಒಂದೇ ಮನೆಯ ಮೂವರ ಸಹಿತ ಆಜ್ರಿ, ಕುಂದಾಪುರ ಪುರಸಭೆ ವ್ಯಾಪ್ತಿಯ ತಲಾ ಇಬ್ಬರು, ಗಂಗೊಳ್ಳಿಯ ಒಬ್ಬರಿಗೆ ಕೋವಿಡ್ ಸೋಂಕು ತಗಲಿದ್ದು, ಕುಂದಾಪುರ ತಾಲೂಕಿನಲ್ಲಿ ಗುರುವಾರ ಒಟ್ಟು 8 ಮಂದಿಗೆ ಪಾಸಿಟಿವ್‌ ದೃಢವಾಗಿದೆ.

Advertisement

ಕೋಟೇಶ್ವರ: ವೈದ್ಯ, ದಾದಿಗೆ ಪಾಸಿಟಿವ್‌
ಕೋಟೇಶ್ವರ: ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ದಾದಿಗೆ ಕೊರೊನಾ ತಗಲಿದೆ. ಆರೋಗ್ಯ ಕೇಂದ್ರವನ್ನು 2 ದಿನಗಳ ಕಾಲ ಸೀಲ್‌ಡೌನ್‌ ಮಾಡಲಾ ಗಿದೆ. ಬೀಜಾಡಿಯಲ್ಲಿ 2 ಪ್ರತ್ಯೇಕ ಪ್ರಕರಣಗಳು ಪತ್ತೆಯಾಗಿವೆ.

ತಾಯಿ, ಮಗಳಿಗೆ ಸೋಂಕು
ಬಸ್ರೂರು: ಬಸ್ರೂರು ಗ್ರಾ.ಪಂ. ವ್ಯಾಪ್ತಿಯ ಮಾರ್ಗೋಳಿಯ ತಾಯಿ, ಮಗಳನ್ನು ಕೋವಿಡ್ ಬಾಧಿಸಿದೆ. ಗ್ರಾ.ಪಂ. ಪ್ರವೇಶ ನಿರ್ಬಂಧ ಸಿದ್ದಾಪುರ ಗ್ರಾ.ಪಂ.ನ ಆಡಳಿತ ಅಧಿಕಾರಿಯೊಬ್ಬ ರಿಗೆ ಗುರುವಾರ ಪಾಸಿಟಿವ್‌ ದೃಢಪಟ್ಟಿರುವ ಹಿನ್ನೆಲೆ ಯಲ್ಲಿ ಜು. 27ರ ತನಕ ಗ್ರಾ.ಪಂ.ಗೆ  ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಶಂಕರನಾರಾಯಣ: 7 ಮಂದಿಗೆ ಪಾಸಿಟಿವ್‌
ಸಿದ್ದಾಪುರ: ಹಾಲಾಡಿಯ ಮೀನು ಮಾರುವ ಮಹಿಳೆ 13 ದಿನಗಳ‌ ಹಿಂದೆ ಕೋವಿಡ್ ಬಾಧಿಸಿ ಗುಣಮುಖರಾಗಿದ್ದು, ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮನೆಯ 6 ಮಂದಿಗೆ ಬುಧವಾರ ಪಾಸಿಟಿವ್‌ ದೃಢಪಟ್ಟಿದೆ. 13 ದಿನಗಳ ಹಿಂದೆ ಬೆಂಗಳೂರಿನಿಂದ ಬಂದ ಮೂವರು ಯುವಕರು ಶಂಕರನಾರಾಯಣ ಗ್ರಾಮದ ಅಬ್ಯಾಡಿಗೆ ಬಂದು ಮನೆಯಲ್ಲಿ ಕ್ವಾರಂಟೈನ್‌ ಇದ್ದು, ಅವರಲ್ಲಿ ಓರ್ವನಿಗೆ ಬುಧವಾರ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next