Advertisement

ನಿರ್ದೇಶಕ ಕುಂದನ್‌ ಷಾ ನಿಧನ

06:15 AM Oct 08, 2017 | |

ಮುಂಬೈ: ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಾಲಿವುಡ್‌ ಸಿನಿಮಾ ನಿರ್ದೇಶಕ ಕುಂದನ್‌ ಷಾ ಶನಿವಾರ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. “ಜಾನೇ ಭಿ ದೋ ಯಾರೋಂ’, “ಕಭಿ ಹಾ ಕಭಿ ನಾ’ ದಂಥ ಜನಪ್ರಿಯ ಸಿನಿಮಾಗಳನ್ನು ನಿರ್ದೇ ಶಿಸಿದ್ದ ಷಾ, ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಷಾ ನಿಧನಕ್ಕೆ ಬಾಲಿವುಡ್‌ ನಟರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ಮೋದಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಅನೇಕ ಗಣ್ಯರೂ ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

Advertisement

1983ರಲ್ಲಿ ನಿರ್ದೇಶಿಸಿದ ಮೊದಲನೇ ಸಿನಿಮಾ “ಜಾನೇ ಭಿ ದೋ ಯಾರೋಂ’ಗೆ ರಾಷ್ಟ್ರಪ್ರಶಸ್ತಿ ಗಳಿಸಿದ್ದ ಕುಂದನ್‌ ಷಾ, ಹಲವು ನಟರನ್ನು ಈ ಸಿನಿಮಾದ ಮೂಲಕ ಬಾಲಿವುಡ್‌ಗೆ ಪರಿಚಯಿಸಿದ್ದರು. ಅಲ್ಲದೆ ನಂತರ ಟಿವಿ ಧಾರಾವಾಹಿಗಳನ್ನೂ ನಿದೇಶಿಸಿದ್ದ ಅವರು, ಜನಪ್ರಿಯ ವ್ಯಂಗ್ಯ ಚಿತ್ರಕಾರ ಆರ್‌.ಕೆ.ಲಕ್ಷ್ಮಣ್‌ರ ಕಾಮನ್‌ ಮ್ಯಾನ್‌ ಪಾತ್ರವನ್ನು ಬಳಸಿಕೊಂಡು “ವಾಗ್ಲೆ ಕಿ ದುನಿಯಾ’ ಎಂಬ ಧಾರಾವಾಹಿ ನಿರ್ದೇಶಿಸಿದ್ದರು. ಇದು ಭಾರಿ ಜನಪ್ರಿಯತೆ ಗಳಿಸಿತ್ತು. ಶಾರುಖ್‌ ಖಾನ್‌ ಅಭಿನಯದ ಜನಪ್ರಿಯ ಸಿನಿಮಾ “ಕಭೀ ಹಾ ಕಭೀ ನಾ’ ಹಾಗೂ ಪ್ರೀತಿ ಜಿಂಟಾ ಅಭಿನಯದ “ಕ್ಯಾ ಕೆಹನಾ’ ಸಿನಿಮಾವನ್ನೂ ಷಾ ನಿರ್ದೇಶಿಸಿದ್ದರು. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ವಿಡಂಬನೆ, ವಾಸ್ತವ ಹಾಗೂ ತಿಳಿಹಾಸ್ಯ ಮಿಶ್ರಣದ ಕಥೆಗಳಿಗೆ ಅವರು ಜನಪ್ರಿಯವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next