Advertisement

ಕುಂಚಿಟಿಗರ ಮಠದಲ್ಲಿ4 ಕೋಟಿ ರೂ. ವೆಚ್ಚದ ಸಮುದಾಯ ಭವನ ಲೋಕಾರ್ಪಣೆ

09:44 PM Feb 16, 2023 | Team Udayavani |

ಕೊರಟಗೆರೆ: ತಾಲೂಕಿನ ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಶ್ರೀನರಸಿಂಹಗಿರಿ ಸುಕ್ಷೇತ್ರದಲ್ಲಿ ನೂತನವಾಗಿ 4 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸುಸರ್ಜಿತ ಶ್ರೀಮತಿ ರಂಗಲಕ್ಷ್ಮೀ ಶ್ರೀ ಎನ್. ದೇವರಾಜಯ್ಯ ಸಮುದಾಯ ಭವನವನ್ನು ಫೆ.24 ರಂದು ಲೋಕಾರ್ಪಣಾ ಕಾರ್ಯಕ್ರಮ ಏರ್ಪಡಿಸಿರುವುದಾಗಿ ಶ್ರೀಮಠದ ಪೀಠಾಧ್ಯಕ್ಷ ಶ್ರೀ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದ್ದಾರೆ.

Advertisement

ಅವರು ಏಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಶ್ರಿಮಠದ ಅಭಿವೃದ್ದಿಗೆ ಕಾರಣರಾದ ಹಾಗೂ ಶ್ರೀಮಠದ ಗೌರವಾಧ್ಯಕ್ಷರಾದ ಎನ್.ದೇವರಾಜಯ್ಯ ನವರ ನೇತೃತ್ವದಲ್ಲಿ ಭಕ್ತಾಧಿಗಳ ಸಹಕಾರದಿಂದ ೪ ಕೋಟಿ ವೆಚ್ಚದ ೧೫ ಕೊಠಡಿಗಳುಳ್ಳ ೬೦೦ ಮಂದಿ ಏಕಕಾಲದಲ್ಲಿ ಊಟಕ್ಕೆ ಕೂರುವ ಹಾಗೂ ಸಭಾಭವನ ಉಳ್ಳ ಸುಸರ್ಜಿತವಾಗಿ ನಿರ್ಮಾಣ ಮಾಡಿರುವ “ಶ್ರೀಮತಿ ರಂಗಲಕ್ಷ್ಮೀ ಶ್ರೀ ಎನ್, ದೇವರಾಜಯ್ಯ” ಸಮುದಾಯ ಭವನವನ್ನು ಫೆ.೨೪ ರಂದು ಶುಕ್ರವಾರ ಲೋಕಾರ್ಪಣೆ ಮಾಡಲಿದ್ದು ಈ ಸಮುದಾಯ ಭವನ ಎಲ್ಲಾ ವರ್ಗದ ಜಾತಿ ಭೇದವಿಲ್ಲದೆ ಗ್ರಾಮೀಣ ಬಡಜನತೆಯ ಹಾಗೂ ರೈತರ ಕಾರ್ಯಕ್ರಮಗಳಿಗೆ ಅನುಕೂಲವಾಗಲೆದು ನಿರ್ಮಾಣ ಮಾಡಿರುವ ಸಮುದಾಯ ಭವನದ ಉದ್ದೇಶವಾಗಿದೆ, ಲೋಕಾರ್ಪಣಾ ಕಾರ್ಯಕ್ರಮದೊಂದಿಗೆ ಶ್ರೀನರಸಿಂಹಗಿರಿ ಕ್ಷೇತ್ರದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ೭ನೇ ವರ್ಷದ ವಾರ್ಷಿಕೋತ್ಸವ ಏರ್ಪಡಿಸಲಾಗಿದ್ದು ವಾರ್ಷಿಕೋತ್ಸವ ಅಂಗವಾಗಿ ಶ್ರೀಮಠದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ ಹೋಮ ಹವನ, ಪೂಜಾ ಕೈಂಕರ್ಯಗಳನ್ನು ಏರ್ಪಡಿ ಸಲಾಗಿದೆ ಎಂದ ಅವರು ಸಮುದಾಯ ಭವನ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಧುಗಿರಿ ಕ್ಷೇತ್ರದ ಶಾಸಕ ವೀರಭದ್ರಯ್ಯ, ತುಮಕೂರುನಗರ ಶಾಸಕ ಜ್ಯೋತಿಗಣೇಶ್, ಗ್ರಾಮಾಂತರ ಶಾಸಕ ಗೌರಿಶಂಕರ್, ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಸಂಸದರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಶ್ರೀಮಠದ ಧರ್ಮದರ್ಶಿ ಹಾಗೂ ಗೌರವಾಧ್ಯಕ್ಷ ಎನ್.ದೇವರಾಜಯ್ಯ ಮಾತನಾಡಿ ಶ್ರೀಮಠದಲ್ಲಿ ನಿರ್ಮಾಣ ಮಾಡಿರುವ ಸಮುದಾಯಭವನ ನಿರ್ಮಾಣ ಕಾರ್ಯದಲ್ಲಿ ಅಡೆ-ತಡೆ ಬಂದರೂ ಲೆಕ್ಕಿಸದೆ ಹಗಲು ಇರುಳು ತಾವೇ ನಿಂತು ನಿರ್ಮಾಣ ಮಾಡಿದ ಶ್ರೀಮಠದ ಪೀಠಾಧ್ಯಕ್ಷ ಶ್ರೀ ಡಾ.ಹನುಮಂತನಾಥಸ್ವಾಮೀಜಿ ಕಾರ್ಯ ಶ್ಲಾಘನೀಯವಾಗಿದ್ದು ಸಮುದಾಯ ಭವನ ನಿರ್ಮಾಣ ಉದ್ದೇಶ ಗ್ರಾಮೀಣ ಭಾಗದ ಎಲ್ಲಾ ಸಮುದಾಯದ ಕಡು ಬಡವರ ಅನುಕೂಲಕ್ಕಾಗಿ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳ ಯೋಜನೆ ಮಾಡುವ ಉದ್ದೇಶವಾಗಿದ್ದು, ಶ್ರೀಮಠದಲ್ಲಿ ಜಾತಿ ಬೇದವಿಲ್ಲದೆ ಶೈಕ್ಷಣಿಕವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ಎಲ್ಲರ ಉದ್ದೇಶವಾಗಿದೆ ಎಂದು ತಿಳಿಸಿದರು.

ಮುರಳೀಧರ ಹಾಲಪ್ಪ ಮಾತನಾಡಿ ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಶ್ರೀನರಸಿಂಹಗಿರಿ ಸುಕ್ಷೇತ್ರ ಧಾರ್ಮಿಕ ಕ್ಷೇತ್ರವಾಗಿ ಅಲ್ಲದೇ ಶೈಕ್ಷಣಿಕ ಕೇಂದ್ರವಾಗಿ ಬೆಳೆದು ವಿವಿಧ ತಾಂತ್ರಿಕ ಸೇರಿದಂತೆ ಇನ್ನಿತರ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಾರಂಭಿಸಬೇಕಾಗಿದೆ ಶ್ರೀಮಠ ಪ್ರಾರಂಭವಾಗಿ ಕೆಲವೇ ವರ್ಷಗಳಾಗಿದ್ದು ಕಡಿಮೆ ಅವಧಿಯಲ್ಲಿ ಶ್ರೀಗಳು ಮಠದ ಅಭಿವೃಧ್ದಿಗೆ ಹೆಚ್ಚು ಒತ್ತುನೀಡಿದ ಹಿನ್ನೆಲೆಯಲ್ಲಿ ಮಠ ಅಭಿವೃದ್ದಿಯಲ್ಲಿ ಸಾಗುತ್ತಿದ್ದು ಶ್ರೀ ಮಠದ ಯೋಜನೆಗಳು ಸಾಕಾರಗೊಳಿಸಲು ಸರ್ಕಾರದಿಂದ ಜಮೀನು ಮಂಜೂರು ಮಾಡಲು ಮನವಿ ಮಾಡಲಾಗಿದ್ದು ಶ್ರೀಘ್ರದಲ್ಲಿ ಮಂಜೂರು ಮಾಡುವ ಭರವಸೆ ಇದೆ ಎಂದರು.

ವಾರ್ಷಿಕೋತ್ಸವ ಅಂಗವಾಗಿ ಫೆ.೨೩ ರಂದು ಗುರುವಾರ ಸಂಜೆ ೪ ಗಂಟೆಗೆ ಗಣಪತಿ ಪ್ರಾರ್ಥನೆ, ಶ್ರೀ ನಾರಾಯಣ ಸ್ವಸ್ತಿ ಪುಣ್ಯಾಹ ವಾಚನ, ಕಳಶಾರಾಧನೆ, ರಕ್ಷಾಬಂಧನ, ವಾಸ್ತುಪೂಜೆ, ವಾಸ್ತುಹೋಮ, ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ, ಧನ್ವಂತರಿಹೋಮ, ಲಘು ಪೂರ್ಣಾಹುತಿ ಆರತಿ, ಬಲಿಹರಣ ತೀರ್ಥಪರಸಾದ ವಿನಿಯೋಗ ಮಾಡಲಾಗುವುದು ಫೆ.೨೪ ರಂದು ಶುಕ್ರವಾರ ಬೆಳಿಗ್ಗೆ ೮-೩೦ಕ್ಕೆ ಕಳಶಪೂಜೆ, ಮಹಾ ಸದರ್ಶನ ಮಂಡಲ ಪೂಜೆ, ಮಹಾ ಸುದರ್ಶನ, ನಾರಸಿಂಹ ಹೋಮ,ಅಷ್ಟ ಲಕ್ಷ್ಮೀ ಹೋಮ, ಶ್ರೀ ಪುರುಪ ಸೂಕ್ತ, ಶ್ರೀ ಸೂಕ್ತ ಹೋಮ, ಮಾಹಾಪೂರ್ಣಾಹುತಿ, ಶ್ರೀ ನಾರಾಯಣ ಸ್ವಸ್ತಿ ಪುಣ್ಯಾಹ ವಾಚನ, ಕಳಶಾರಾದನೆ, ರಕ್ಷಾಬಂಧನ, ವಾಸ್ತುಪೂಜೆ, ವಸ್ತು ಹೋಮ, ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ, ಧನ್ವಂತರಿ ಹೋಮ, ಮಹಾಪುಣಾಹುತಿ ಆರತಿ ಬಲಿಹರಣ ತೀರ್ಥಪ್ರಸಾದ ನಿವಿಯೋಗದೊಂದಿಗೆ ೧೧ ಗಂಟೆಗೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣ ಮಹೋತ್ಸವ ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾರತಿ, ಅಷ್ಟಾವಧಾನ ಸೇವೆ, ತೀರ್ಥಪ್ರಸಾದ ವಿನಿಯೋಗ ಮಾಡಲಾಗುವುದು ಎಂದು ತಿಳಿಸಿದರು.

Advertisement

ಪ್ರತಿಕಾ ಗೋಷ್ಠಿಯಲ್ಲಿ ಶ್ರೀಮಠದ ಪೀಠಾಧ್ಯಕ್ಷ ಶ್ರೀ ಡಾ.ಹನುಮಂತನಾಥಸ್ವಾಮೀಜಿ ಯೋಂದಿಗೆ ಧರ್ಮದರ್ಶಿ ಎನ್.ದೇವರಾಜಯ್ಯ, ಮುರಳೀಧರ ಹಾಲಪ್ಪ, ತಾ.ಪಂ. ಮಾಜಿ ಸದಸ್ಯ ರಂಗಅರಸಪ್ಪ, ಹನುಮಂತರಾಯಪ್ಪ, ಗರಗದೊಡ್ಡಿ ನಟರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next