ಕಾರವಾರ: ಉತ್ತರ ಕನ್ನಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕುಮಟಾ ಮತ್ತು ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಚುನಾವಣೆ ಅಂತಿಮ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್ ಕೆ. ವೀಕ್ಷಿಸಿದರು.
ನಂತರ ಅವರು, ಏ.21 ರಂದು ಸಂಜೆ 6ಕ್ಕೆ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತೀವ್ರ ಎಚ್ಚರ ವಹಿಸಬೇಕು. ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್, ಮತಗಟ್ಟೆ ಅಧಿಕಾರಿಗಳ ಜವಾಬ್ದಾರಿ ನಿರ್ವಹಣೆ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು. ಚುನಾವಣಾ ಸಂಬಂಧಿ ಗೊಂದಲಗಳಿದ್ದಲ್ಲಿ ತಕ್ಷಣ ಮಾಹಿತಿ ರವಾನಿಸಬೇಕು ಹಾಗೂ ಸಂಬಂಧಿಸಿದ ಪರ್ಯಾಯ ವ್ಯವಸ್ಥೆ ಮಾಡುವುದು ಸಹಾಯಕ ಚುನಾವಣಾಧಿಕಾರಿಗಳ ಜವಾಬ್ದಾರಿ ಎಂದು ಅವರು ಹೇಳಿದರು.
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ವಿಶೇಷವಾಗಿ ರೂಪಿಸಿರುವ ವಿಕಲಚೇತನ ಮತದಾರರ ಸೌಲಭ್ಯ ಕಲ್ಪಿಸುವ ಸಂಬಂಧ ವಿಶೇಷ ಗಮನ ಹರಿಸಬೇಕು. ಚುನಾವಣಾ ವೀಕ್ಷಕರು ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಕೋರುವ ಮಾಹಿತಿಯನ್ನು ತಕ್ಷಣ ಕೊಡಲು ತಯಾರಿರಬೇಕು ಎಂದರು.
ಕುಮಟಾ ಸಹಾಯಕ ಕಮಿಷನರ್ ಪ್ರೀತಿ ಗೆಹ್ಲೂಟ್, ಐಎಎಸ್ ಪ್ರಭಾರಿ ದಿಲೀಶ್ ಸಸಿ ಉಪಸ್ಥಿತರಿದ್ದರು.
Advertisement
ಶುಕ್ರವಾರ ಕುಮಟಾ ಮತ್ತು ಭಟ್ಕಳ ವ್ಯಾಪ್ತಿಯ ವಿವಿಧೆಡೆ ಪ್ರವಾಸ ಮಾಡಿದ ಜಿಲ್ಲಾಧಿಕಾರಿ, ಮತಗಟ್ಟೆಯಲ್ಲಿ ನಡೆದಿರುವ ಪೂರ್ವ ತಯಾರಿಯನ್ನು ಖುದ್ದು ಪರಿಶೀಲಿಸಿದರು. ಅಲ್ಲದೆ ಕುಮಟಾದ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ಅಲ್ಲದೆ ತಾಲೂಕು ಕೇಂದ್ರ ಸ್ಥಾನದಲ್ಲಿ ಸಹಾಯಕ ಚುನಾವಣಾಧಿಕಾರಿಗಳು, ಸಂಚಾರಿ ಜಾಗೃತಿ ದಳದ ನೋಡಲ್ ಅಧಿಕಾರಿಗಳು, ಮಾದರಿ ನೀತಿ ಸಂಹಿತೆ ಸಹಾಯಕ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮ ಸಿದ್ಧತೆ ಬಗ್ಗೆ ಮಾಹಿತಿ ಪಡೆದರು.
Related Articles
Advertisement