Advertisement
ಪುತ್ತೂರು: ಒಂದೂವರೆ ಶತಮಾನದಿಂದ ಅವಿಭಜಿತ ಜಿಲ್ಲೆಯ 4.38 ಲಕ್ಷ ಕೃಷಿಕರ ಅನುಭೋಗದಲ್ಲಿರುವ ಕುಮ್ಕಿ ಭೂಮಿಯ ಹಕ್ಕು ನೀಡುವ ಸಂಬಂಧ ಆ. 23ರೊಳಗೆ ಕೋರ್ಟ್‌ಗೆ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ.
Related Articles
Advertisement
1885 ರ ಮಾರ್ಚ್ 10ರಿಂದ ಕುಮ್ಕಿ ಹಕ್ಕು ಉಡುಪಿ, ದ.ಕ. ಭಾಗದಲ್ಲಿ ನೀಡಲಾ ಗಿದೆ. ವರ್ಗಕ್ಕೆ ಲಗ್ತಿàಕರಿಸಿದ ಕುಮ್ಕಿಯನ್ನು ಹಕ್ಕಾಗಿ ನೀಡಬೇಕೆಂಬುದು ಕುಮ್ಕಿ ಹಕ್ಕು ಪರ ಹೋರಾಟಗಾರರ ಆಗ್ರಹ. ಆದರೆ ಈ ವಾದಕ್ಕೆ ಸರಕಾರ ಇನ್ನೂ ಮನ್ನಣೆ ನೀಡಿಲ್ಲ. ಪರಿಣಾಮ ಹೋರಾಟಗಾರರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.
1905ರಲ್ಲಿ ಮೊದಲ ಬಾರಿಗೆ ಸಮಗ್ರ ಭೂಮಿ ಅಳತೆ ಪ್ರಕ್ರಿಯೆ ನಡೆದಿತ್ತು. ಸರಕಾರಿ, ಖಾಸಗಿ, ಅರಣ್ಯ, ಕುಮ್ಕಿ ಇತ್ಯಾದಿಗಳನ್ನು ವರ್ಗೀಕರಿಸಲಾಗಿತ್ತು. 1934ರಲ್ಲಿ ಎರಡನೇ ಸರ್ವೆ ನಡೆಯಿತು. ಪ್ರತೀ 30 ವರ್ಷಕ್ಕೊಮ್ಮೆ ಸರ್ವೆ ಮಾಡಬೇಕೆಂದು 1886ರ ಭೂ ಕಂದಾಯ ಕಾನೂನು ಹೇಳಿತ್ತಾದರೂ 1934ರ ಅನಂತರ ಆಗಿಲ್ಲ ಎನ್ನಲಾಗಿದೆ.
ನ್ಯಾಯಾಲಯಕ್ಕೆ ಮೊರೆ2016ರ ಜನವರಿ 25ರಂದು ಭಾರತೀಯ ಕಿಸಾನ್ ಸಂಘ ಹೈಕೋರ್ಟ್ ನಲ್ಲಿ ಕುಮ್ಕಿದಾರರ ಪರ ದಾವೆ ಮಂಡಿಸಿತ್ತು. 2017ರ ಮೇ 25ರಂದು ಯಥಾಸ್ಥಿತಿ ಆದೇಶ ನೀಡಿ ರುವ ಕೋರ್ಟ್ ಸರಕಾರದ ಉತ್ತರ ಕೇಳಿತ್ತು. ಸರಕಾರಿ ನ್ಯಾಯವಾದಿಗಳು ಜೂ. 23ರಂದು 2 ತಿಂಗಳ ಸಮಯ ಕೇಳಿದ್ದರು. ಈಗಿನ ಸರಕಾರ ಕುಮ್ಕಿ ಹಕ್ಕು ನೀಡುವ ವಿಚಾರದಲ್ಲಿ ಯಾವ ನಿರ್ಧಾರ ತಳೆಯಲಿದೆ ಎಂಬುದು ಆಗಸ್ಟ್ 23ರೊಳಗೆ ಬಹಿರಂಗಗೊಳ್ಳಲಿದೆ. ಈ ಮಧ್ಯೆ 1905ರಿಂದ 2004ರ ವರೆಗೆ ತೀರುವೆ ಕಟ್ಟಿದ ರಶೀದಿಗಳನ್ನು ಸುಳ್ಯದ 21 ಗ್ರಾಮಗಳ ರೈತರು ಹೈಕೋರ್ಟ್‌ಗೆ ದಾಖಲೆ ಸಲ್ಲಿಸಿದ್ದಾರೆ. ಇದು ನ್ಯಾಯಾಲಯದ ವಿಚಾರಣೆ ಸಂದರ್ಭ ಮಹತ್ವದ ದಾಖಲೆಯಾಗಬಹುದು ಎನ್ನಲಾಗಿದೆ.