Advertisement

ಕುಂಬಳೆ : ಅನುಮಾನಾಸ್ಪದವಾಗಿ ಪತ್ತೆಯಾದ ಕಾರಿನೊಳಗೆ ಇತ್ತು ಸುತ್ತಿಗೆ

12:29 AM Jul 05, 2022 | Team Udayavani |

ಕುಂಬಳೆ : ಎಡನೀರು ಎದ್ರುತೋಡು ಬದರ್‌ನಗರ ಎನ್ನುವಲ್ಲಿ ರಾತ್ರಿ ಕಾರೊಂದು ನಿಯಂತ್ರಣ ತಪ್ಪಿ ಮನೆಯೊಂದರ ಬಳಿ ನಿಂತು ಹೋಗಿತ್ತು.

Advertisement

ಎಚ್ಚರಗೊಂಡ ಮನೆಯವರು ಎದ್ದು ನೋಡಿದಾಗ ಇಬ್ಬರು ಅಪರಿಚಿತರು ಕಾರಿನಿಂದ ಇಳಿದು ಯಾರಿಗಾದರೂ ತಿಳಿಸಿದಲ್ಲಿ ಜಾಗ್ರತೆ ಎಂಬುದಾಗಿ ಮನೆಯವರಿಗೆ ಎಚ್ಚರಿಸಿ ತೆರಳಿದ್ದರು.

ಮಾಹಿತಿ ತಿಳಿದ ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರನ್ನು ಠಾಣೆಗೆ ಒಯ್ದು ನೋಡಿದಾಗ ಕಾರಿನೊಳಗೆ ಸುತ್ತಿಗೆ ಮತ್ತು ಕೆಲವೊಂದು ಉಪಕರಣಗಳು ಪತ್ತೆಯಾಗಿದೆ. ಕಾರು ಕೋಟ್ಟಯಂ ಜಿಲ್ಲೆಯಲ್ಲಿ ದಾಖಲಾತಿ ಹೊಂದಿದ್ದರೂ ತಪಾಸಣೆ ನಡೆಸಿದಾಗ ಇದು ನಕಲಿ ಎಂಬುದಾಗಿ ತಿಳಿದು ಬಂದಿತ್ತು. ಇದರಲ್ಲಿ ಏನೋ ನಿಗೂಢತೆ ಇರುವುದಾಗಿ ಸಂಶಯ ವ್ಯಕ್ತಪಡಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next