Advertisement

Kumbhamela; ನಕಲಿ ಬಾಬಾಗಳ ಹಾವಳಿ: ಪ್ರಯಾಗ್‌ರಾಜ್‌ನಲ್ಲಿ ಸಾಧುಗಳಿಗೆ ಐಡಿ ಕಾರ್ಡ್‌?

02:03 AM Oct 14, 2024 | Team Udayavani |

ಲಕ್ನೋ: ಮುಂದಿನ ವರ್ಷದ ಜನವರಿಯಲ್ಲಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಲಿರುವ ಸಾಧುಗಳಿಗೆ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ. ವಿವಿಧ ಸಾಧು ಪಂಥಗಳ 13 ಅಖಾಡಗಳ ಮೇಲ್ವಿಚಾರಣೆ ನಡೆಸುವ ಅಖೀಲ ಭಾರತೀಯ ಅಖಾಡ ಪರಿಷತ್‌ (ಎಬಿಎಪಿ) ಈ ತೀರ್ಮಾನ ಕೈಗೊಂಡಿದೆ. ಸನಾತನ ಧರ್ಮಕ್ಕೆ ಕೆಟ್ಟ ಹೆಸರು ತರುತ್ತಿರುವ ನಕಲಿ ಬಾಬಾಗಳ ಪ್ರವೇಶ ತಡೆಯುವುಕ್ಕಾಗಿ ಈ ನಿರ್ಣಯ ಕೈಗೊಂಡಿದೆ ಎಂದು ಪರಿಷತ್‌ ತಿಳಿಸಿದೆ. ಪ್ರತಿಯೊಂದು ಅಖಾಡಗಳು ತಮ್ಮ ವ್ಯಾಪ್ತಿಯ ಸಾಧುಗಳಿಗೆ ಗುರುತಿನ ಚೀಟಿ ಒದಗಿಸಲು ಮುಂದಾಗಿವೆ.

Advertisement

ಹೀಗಾಗಿ, ಆಧಾರ್‌ ಕಾರ್ಡ್‌ ಅಥವಾ ಸಾಧುಗಳಿಗೆ ನಿಗದಿತ ಅಖಾಡದಿಂದ ನೀಡಲಾಗುವ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಪರಿಷತ್‌ನ ಮುಖ್ಯಸ್ಥ ರವೀಂದ್ರ ಪುರಿ ತಿಳಿಸಿದ್ದಾರೆ. ಜುಲೈನಲ್ಲಿ ಕೂಡ ಅಖಡಾ ಪರಿಷತ್‌ ನಕಲಿ ಬಾಬಾಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿತ್ತು. ಜ.13ರಂದು ನಡೆಯುವ ಪ್ರಯಾಗ್‌ ಕುಂಭ ಮೇಳ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next