Advertisement
ಜನವರಿ 15ರಂದು ಆರಂಭವಾಗಿರುವ ಮಹಾ ಕುಂಭ ಮೇಳ ಮಾರ್ಚ್ 4 ರ ವರೆಗೆ ನಡೆಯಲಿದೆ. 12 ವರ್ಷಗಳಿಗೆ ಒಮ್ಮೆ ಮಾತ್ರ ನಡೆಯುವ ಈ ಮಹಾ ಕುಂಭ ಮೇಳಕ್ಕೆ ಉತ್ತರ ಪ್ರದೇಶ ಸರಕಾರ ಭಾರಿ ಖರ್ಚು ಮಾಡಿ ಅದ್ದೂರಿಯಾಗಿಯೇ ಆಯೋಜನೆ ಮಾಡಲಾದೆ. ಈ 50 ದಿನಗಳ ಕುಂಭಮೇಳಕ್ಕಾಗಿ ಯೋಗಿ ಸರಕಾರ ಸುಮಾರು 4200 ಕೋಟಿ ಖರ್ಚು ಮಾಡಿದ್ದಾರೆ.
ಕೋಟ್ಯಾಂತರು ಜನರು ಭಾಗವಹಿಸುವ ಈ ಕುಂಭ ಮೇಳದಲ್ಲಿ ಸುಮಾರು 6 ಲಕ್ಷ ಉದ್ಯೋಗ ಸೃಷ್ಠಿಯಾಗಿದೆ ವರದಿಯಲ್ಲಿ ತಿಳಿಸಿಲಾಗಿದೆ. ಇದಲ್ಲದೆ ಅಸಂಘಟಿತ ವಲಯಗಳಾದ ಪ್ರವಾಸಿ ಮಾರ್ಗದರ್ಶಿಗಳು, ಟ್ಯಾಕ್ಸಿಗಳು, ವಾಹನ ಚಾಲಕರು, ಸ್ವಯಂ ಸೇವಕರು ಹೀಗೆ ಸುಮಾರು 55 ಸಾವಿರ ಉದ್ಯೋಗ ಸೃಷ್ಠಿಯಾಗಲಿದೆ.