Advertisement

Kumbale: ಎರಡು ಮನೆಗಳಿಂದ ಕಳವು: ಬಂಧನ

07:46 PM Sep 30, 2024 | Team Udayavani |

ಕುಂಬಳೆ: ಎರಡು ಮನೆಗಳಿಂದ ಅಡಿಕೆ, ಚಿನ್ನಾಭರಣ ಹಾಗೂ ವಿವಿಧ ಸಾಮಗ್ರಿಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ವಿಟ್ಲ ಸಾಲೆತ್ತೂರು ಕೊಡ್ಲಮೊಗರಿನ ಮೊಹಮ್ಮದ್‌ ಜಾಬೀರ್‌(37)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

Advertisement

ಆ. 3ರಂದು ರಾತ್ರಿ ಮಣಿಯಂಪಾರೆ ದಾರುಲ್‌ ಮೊಫಾಸ್‌ ಮಂಜಿಲ್‌ನ ಅಬ್ದುಲ್‌ ಲತೀಫ್‌ ಅವರ ಪತ್ನಿ ಫಾತಿಮತ್‌ ಸುಮೈನ ಅವರ ಮನೆಯಿಂದ ನಾಲ್ಕೂವರೆ ಕ್ವಿಂಟಾಲ್‌ ಅಡಿಕೆ, ಟಿವಿ, ಕೆಮರಾ, ಟ್ಯಾಬ್‌ ಮೊದಲಾದ ಎಲೆಕ್ಟ್ರಾನಿಕ್‌ ಸಾಮಗ್ರಿಗಳನ್ನು ಕದಿಯಲಾಗಿತ್ತು. ನೆಕ್ರಾಜೆ ಚೇಡಿಕ್ಕಾನದ ನಬೀಸಾ ಅವರ ಮನೆಯಿಂದ 15 ಪವನ್‌ ಚಿನ್ನಾಭರಣ ಕಳವು ಮಾಡಲಾದಿತ್ತು. ಚೇಡಿಕ್ಕಾನದ ಇನ್ನೆರಡು ಮನೆಗಳಿಂದ ಕಳವು ಯತ್ನ ನಡೆದಿತ್ತು. ಈ ಎಲ್ಲ ಪ್ರಕರಣಗಳಲ್ಲಿ ಬಂಧಿತ ಸಹಿತ ಮೂವರು ಇದ್ದರೆಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ಇತರರ ಬಂಧನಕ್ಕಾಗಿ ಶೋಧ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next