Advertisement

ಕುಮಾರಸ್ವಾಮಿಯವರ ಜನಪರ ಕೆಲಸಗಳೇ ಶ್ರೀರಕ್ಷೆ

12:51 PM Jun 12, 2017 | |

ಮಹದೇವಪುರ: ರಾಜ್ಯದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಅಧಿಕಾರದಲ್ಲಿದಾಗ ಮಾಡಿದ ಅಭಿವೃದ್ಧಿ ಪೂರಕ ಯೋಜನೆಗಳು ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಶ್ರೀರಕ್ಷೆಯಾಗಲಿವೆ ಎಂದು ಮಹದೇವಪುರ ಕ್ಷೇತ್ರ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಕೆ.ಸತೀಶ್‌ ಹೇಳಿದರು.

Advertisement

ಮಹದೇವಪುರ ಕ್ಷೇತ್ರದ ಗರುಡಾಚಾರ್‌ಪಾಳ್ಯದಲ್ಲಿ ಜೆಡಿಎಸ್‌ ಪಕ್ಷ ಹಮ್ಮಿಕೊಂಡಿದ್ದ ಮನೆಮನೆಗೂ ಕುಮಾರಣ್ಣ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಇದುವರೆಗೂ ಆಡಳಿತ ನಡೆಸಿದ ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಸಮಗ್ರ ಅಭಿವೃದ್ಧಿ ಮಾಡುವಲ್ಲಿ ವಿಪಲವಾಗಿವೆ. 20 ತಿಂಗಳ ಅಡಳಿತ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಹಲವು ಜನಪ್ರಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರು.

ಅವುಗಳು ಈಗಲೂ ಜನರ ಮನಸಿನಲ್ಲಿವೆ. ರಾಜ್ಯದ ಅಭಿವೃದ್ಧಿ ಪ್ರಾದೇಶಿಕ ಪಕ್ಷ ಜೆಡಿಎಸ್‌ನಿಂದ ಮಾತ್ರ ಸಾಧ್ಯ ಎಂದರು. ರಾಷ್ಟ್ರೀಯ ಪಕ್ಷಗಳ ಅಡಳಿತ ವೈಖರಿ ಕಂಡು ಜನ ಬೇಸತ್ತಿದ್ದಾರೆ. ಇದೀಗ ಪ್ರಾದೇಶಿಕ ಪಕ್ಷದತ್ತ ಜನರ ಒಲವು ಮೂಡಿದೆ ಎಂಬುದು ಸ್ಪಷ್ಟವಾಗಿದ್ದು, ಮುಂಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾಕ್ಕೆ ಬರುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ರಾಜ್ಯವನ್ನು ಸರ್ವತೋಮುಖ ಅಭಿವೃದ್ದಿಯತ್ತ ಕೊಂಡೊಯ್ಯಲು ಮುಂಬರುವ ಚುನಾವಣೆಯಲ್ಲಿ ಪ್ರಾದೇಶಿಕವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂಧ¸‌ìದಲ್ಲಿ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಆರ್‌.ಪ್ರಕಾಶ್‌, ಸೇವಾದಳ ರಾಜ್ಯಾಧ್ಯಕ್ಷ ಬಸವರಾಜ್‌ ಪಾದಯಾತ್ರೆ, ಸೇವಾದಳ ಅಧ್ಯಕ್ಷ ಮಹೇಶ್‌, ನಾರಾಯಣಸ್ವಾಮಿ, ರಮೇಶ್‌, ಅಶ್ವತ್ಥಯ್ಯ, ವಿಜಿಕುಮಾರ್‌, ಸುರೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next