Advertisement

ಕುಮಾರಸ್ವಾಮಿ ಮುಂದಿನ ಸಿಎಂ: ಭರತ್‌ 

07:50 AM Aug 01, 2017 | Team Udayavani |

ಮಡಿಕೇರಿ: ನರೇಂದ್ರ ಮೋದಿಯಂತೆ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಪ್ರಸ್ತುತ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರ ಸ್ವಾಮಿ ಜನಪ್ರಿಯರಾಗುತ್ತಿದ್ದು ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂಬುದಾಗಿ ಕೊಡಗು ಜಿಲ್ಲಾ ಜೆಡಿಎಸ್‌ ವಕ್ತಾರ ಪಿ.ಎಸ್‌. ಭರತ್‌ ಕುಮಾರ್‌ ಭವಿಷ್ಯ ನುಡಿದಿದ್ದಾರೆ.

Advertisement

ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬುದರ ಬಗ್ಗೆ ಇತ್ತೀಚೆಗೆ ನಡೆದ “ಆನ್‌ಲೈನ್‌’ ಸಮೀಕ್ಷೆಯಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಅವರು ಶೇ. 60ರಷ್ಟು ಜನತೆಯ ಒಲವು ಹಾಗೂ ಬೆಂಬಲಿಸಿರುವುದು ಕುತೂಹಲ ಹಾಗೂ ಅಚ್ಚರಿ ಮೂಡಿಸಿದೆ. ಇದುವರೆಗೆ ರೈತರ, ಅಲ್ಪಸಂಖ್ಯಾಕರ, ಹಿಂದುಳಿದವರ ಬೆಂಬಲಿತ ಪಕ್ಷವೆಂದು ಬಿಂಬಿತವಾಗಿತ್ತು. ಈಗ ಯುವ ಜನತೆ ಕೂಡ ಜೆಡಿಎಸ್‌ನತ್ತ ಆಕರ್ಷಿಸಿರುವುದು ರಾಜ ಕಾರಣದಲ್ಲಿ ಕೋಲಾಹಲ ಸೃಷ್ಟಿಸಿದೆ. 

ಕರ್ನಾಟಕದ ಉದ್ದಗಲಕ್ಕೂ ಜೆಡಿಎಸ್‌ ಬಲಿಷ್ಠವಾಗಿ ನಾಗಾಲೋಟದಲ್ಲಿ ಬೆಳೆಯುತ್ತಿದೆ, ರಾಜ್ಯದುದ್ದಕ್ಕೂ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾಕರು, ದಲಿತರು, ಕ್ರೈಸ್ತರು ಎಲ್ಲದಕ್ಕೂ ಹೆಚ್ಚಾಗಿ ರಾಜ್ಯದ ರೈತರು  ಕುಮಾರ ಸ್ವಾಮಿಯವರನ್ನು ಆಶೀರ್ವದಿಸಲು ದೃಢ ಸಂಕಲ್ಪ ಮಾಡಿಕೊಂಡ ಪರಿಣಾಮವಾಗಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಂದಿನ ಮುಖ್ಯಮಂತ್ರಿಯಾಗುವುದು ಖಚಿತ ಎಂದಿದ್ದಾರೆ.

ಕಾಂಗ್ರೆಸ್‌ ಮತ್ತು ಬಿಜೆಪಿಯ ಮುಸುಕಿನ ಗುದ್ದಾಟ, ಭಿನ್ನಾಭಿಪ್ರಾಯ ಹಾಗೂ ಗುಂಪುಗಾರಿಗೆ ರಾಜ್ಯ ಮಟ್ಟದಲ್ಲಿ ನಡೆಯುತ್ತಿದ್ದು, ಕೊಡಗಿನಲ್ಲೂ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ಎರಡು ಪಕ್ಷಗಳ ಅತೃಪ್ತರನ್ನು ನಮ್ಮ ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಮುಖ್ಯವಾಗಿ ಅವರೆಲ್ಲರೂ ಸ್ವ ಇಚ್ಛೆಯಿಂದ ನಮ್ಮ ಪಕ್ಷದತ್ತ ಒಲವು  ತೋರಿ ಸೇರಲಿದ್ದಾರೆ. ಈ ಎರಡೂ ಪಕ್ಷಗಳ ಕಚ್ಚಾಟದಿಂದ ನಮ್ಮ ಪಕ್ಷಕ್ಕೆ ಹೆಚ್ಚಿನ ಲಾಭವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಮಾಜಿ ಸಂಸದ ಅಡಗೂರು ವಿಶ್ವನಾಥ್‌ ನಮ್ಮ ಪಕ್ಷಕ್ಕೆ ಸೇರ್ಪಡೆ ಗೊಳ್ಳುವುದರಿಂದ ಆನೆಬಲ ಬಂದಂತಾಗಿ ಜೆಡಿಎಸ್‌ ಇನ್ನಷ್ಟು ಸದೃಢವಾಗುವುದು. ಕೊಡಗಿನಲ್ಲಿ ಅವರ ಹಿತೈಷಿ ಗಳು, ಬೆಂಬಲಿಗರು, ಅಭಿಮಾನಿಗಳು ಸಾಕಷ್ಟಿದ್ದು ಇವರೆಲ್ಲರಿಂದ ಜೆಡಿಎಸ್‌ಗೆ ವರದಾನವಾಗಲಿದೆ. ಕೊಡಗು ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಜನನಾಯಕ ರಾಗಿರುವ ವಿಶ್ವನಾಥ್‌ ಹಿತೈಷಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಜೆಡಿಎಸ್‌ ಬಾಗಿಲು ಬಡಿಯುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಜೆಡಿಎಸ್‌ ಪ್ರಬಲ ರಾಜಕೀಯ ಪಕ್ಷವಾಗಿ ಬೆಳೆಯಲಿದೆ ಎಂದು ಭರತ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಕೊಡಗು ಜೆಡಿಎಸ್‌ನಲ್ಲಿ ಹೊಸ ಹುಮ್ಮಸ್ಸು ಕಂಡು ಬಂದಿದ್ದು, ಜಿಲ್ಲೆಯ ಎರಡನೇ ಹಂತದ ಎಲ್ಲಾ ನಾಯಕರು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಈ ಬಾರಿ ಕೊಡಗಿನ ಎರಡೂ ಕ್ಷೇತ್ರಗಳನ್ನು ಗೆಲ್ಲುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಎಚ್‌. ವಿಶ್ವನಾಥ್‌ ಅವರ ಆಗಮನದಿಂದ ಜೆಡಿಎಸ್‌ನ ಕಾರ್ಯಕರ್ತರು ಹರ್ಷಗೊಂ ಡಿದ್ದು, ಮುಂದಾಳತ್ವದ ಬಗ್ಗೆ ನಿರೀಕ್ಷೆಯಲ್ಲಿ ದ್ದಾರೆ ಎಂದು ಪಿ.ಎಸ್‌. ಭರತ್‌ ತಿಳಿಸಿದ್ದಾರೆ.

ಕೊಡಗಿನಲ್ಲಿ ಕಾಂಗ್ರೆಸ್‌ನ ಮಡಿಕೇರಿ ಬ್ಲಾಕ್‌ ಅಧ್ಯಕ್ಷ ಕೆ.ಎಂ. ಗಣೇಶ್‌ ಮತ್ತು ಅವರ ನೂರಾರು ಬೆಂಬಲಿಗರು ಕಾಂಗ್ರೆಸ್‌ ಪಕ್ಷವನ್ನು ತೊರೆದು ನಮ್ಮ ಪಕ್ಷವನ್ನು ಸೇರ್ಪಡೆಗೊಳ್ಳುವುದರಿಂದ ಜೆಡಿಎಸ್‌ ಇನ್ನಷ್ಟು ಬಲಿಷ್ಟವಾಗಿ ಬೆಳೆಯಲಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಮಾಜಿ ಸಚಿವರುಗಳಾದ ಎಂ.ಸಿ. ನಾಣಯ್ಯ ಮತ್ತು ಬಿ.ಎ. ಜೀವಿಜಯ ಇವರಿಬ್ಬರ ಒಗ್ಗಟ್ಟಿನ ನೇತೃತ್ವಲ್ಲಿ ಸೃಷ್ಟಿಯಾಗಲಿರುವ ಒಂದೇ ವೇದಿಕೆ ನಿರ್ಮಾಣವಾಗುವ ದಿನ ದೂರವಿಲ್ಲ, ಆ ಭರವಸೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊಡಗಿನಲ್ಲೂ ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ತೊರೆದು ಜೆಡಿಎಸ್‌ನ್ನು ಸೇರ್ಪಡೆಗೊಳ್ಳುವವರ ಸಂಖ್ಯೆ ಹೆಚ್ಚಾಗುತ್ತ ಇದೆ, ಇವರೆಲ್ಲರೂ ಮುಂದಿನ ದಿನಗಳಲ್ಲಿ ಮಾಜಿ ಸಚಿವರುಗಳಾದ ಎಂ.ಸಿ.ನಾಣಯ್ಯ ಮತ್ತು ಬಿ.ಎ. ಜೀವಿಜಯ ಇವರಿಬ್ಬರ ಒಗ್ಗಟ್ಟಿನ ನೇತೃ ತ್ವಲ್ಲಿ ಸೃಷ್ಟಿಯಾಗಲಿರುವ ಒಂದೇ ವೇದಿಕೆಯಲ್ಲಿ ಅಧಿಕೃತ ವಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಸೂಚ್ಯವಾಗಿ ಹೇಳಿದರು.
 

Advertisement

Udayavani is now on Telegram. Click here to join our channel and stay updated with the latest news.

Next