Advertisement

ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆ: ಬಿಜೆಪಿ

09:33 AM Jan 09, 2018 | Team Udayavani |

ಮಂಗಳೂರು: ದೀಪಕ್‌ ಹತ್ಯೆಗೆ ಸ್ಥಳೀಯ ಬಿಜೆಪಿ ಕಾರ್ಪೊರೇಟರ್‌ ಸುಪಾರಿ ನೀಡಿದ್ದಾ ರೆಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬೇಜವಾಬ್ದಾರಿ ಹೇಳಿಕೆಯನ್ನು  ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಇದಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ  ಡಾ| ಭರತ್‌ ಶೆಟ್ಟಿ  ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

Advertisement

ಈ ಹಿಂದೆ ಚುನಾವಣೆಗಳಲ್ಲಿ  ಎಸ್‌ಡಿಪಿಐ ಜತೆ ಜೆಡಿಎಸ್‌  ಮೈತ್ರಿ ಮಾಡಿಕೊಂಡಿತ್ತು. ಶಾಸಕ ಮೊದಿನ್‌ ಬಾವಾ ಅವರು ಜೆಡಿಎಸ್‌ನಲ್ಲಿರುವ  ತನ್ನ ಸಹೋದರನ ಮೂಲಕ ಕುಮಾರಸ್ವಾಮಿ ಅವರಲ್ಲಿ  ಈ ರೀತಿಯ ಹೇಳಿಕೆ ಕೊಡಿಸಿದ್ದಾರೆ. ಶಾಸಕ ಬಾವಾ ಹಾಗೂ  ಕುಮಾರಸ್ವಾಮಿ  ಅವರನ್ನೇ ತನಿಖೆಗೊಳಪಡಿಸಬೇಕು ಎಂದರು. ಮನಪಾ ಸದಸ್ಯರಾದ ತಿಲಕ್‌ ರಾಜ್‌,  ವಿಪಕ್ಷ ನಾಯಕ ಗಣೇಶ್‌ ಹೊಸಬೆಟ್ಟು, ಬಿಜೆಪಿ ಮುಖಂಡರಾದ ವಿಕಾಸ್‌ ಪುತ್ತೂರು, ಕಿಶೋರ್‌ ರೈ ಮತ್ತಿತರರು ಉಪಸ್ಥಿತರಿದ್ದರು.

ಯಾವುದೇ ತನಿಖೆಗೆ ಸಿದ್ಧ: ತಿಲಕ್‌ರಾಜ್‌ 
ದೀಪಕ್‌ ರಾವ್‌ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಕಲ್ಪಿಸಲಸಾಧ್ಯವಾದ ಆರೋಪವನ್ನು ಕುಮಾರಸ್ವಾಮಿ ಮಾಡಿದ್ದಾರೆ. ಈ ಬಗ್ಗೆ ನಾನು ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಪಾಲಿಕೆಯ ಸ್ಥಳೀಯ ಬಿಜೆಪಿ  ಸದಸ್ಯ ತಿಲಕ್‌ ರಾಜ್‌  ಹೇಳಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ ಒಳಒಪ್ಪಂದ: ನಳಿನ್‌
ದೀಪಕ್‌ ಹತ್ಯೆ ಪ್ರಕರಣದ  ತನಿಖೆಯ  ಹಾದಿತಪ್ಪಿಸಿ ಹಂತಕರನ್ನು  ರಕ್ಷಿಸುವ ಕಾರ್ಯವನ್ನು  ಜೆಡಿಎಸ್‌  ಹಾಗೂ ಕಾಂಗ್ರೆಸ್‌ ಮಾಡುತ್ತಿದೆ .
ಕುಮಾರ ಸ್ವಾಮಿ ಅವರು ಮೈಸೂರಿ ನಲ್ಲಿ ನೀಡಿರುವ ಹೇಳಿಕೆ  ಕಾಂಗ್ರೆಸ್‌  ಮತ್ತು  ಜೆಡಿಎಸ್‌ ನಡುವೆ  ಒಳ ಒಪ್ಪಂದ ಮಂಗಳೂರಿನಿಂದಲೇ ಆರಂಭವಾಗಿರುವ ಸೂಚನೆಯಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next