Advertisement
ನಮ್ಮದು ನಾಟಕ ಕಂಪನಿಯಲ್ಲ.’-ಇದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಮಾತುಗಳು.ಅಕ್ರಮ ಗಣಿಗಾರಿಕೆ ಹಾಗೂ ಕೆಆರ್‌ಎಸ್ ಡ್ಯಾಂ ಬಿರುಕು ವಿಚಾರದಲ್ಲಿನಡೆಯುತ್ತಿ ರುವ ಮಾತಿನ ಸಮರರಾಜಕೀಯ ಸ್ವರೂಪ ಪಡೆಯುತ್ತಿದ್ದುಈ ಕುರಿತು “ಉದಯವಾಣಿ’ಗೆಸಂದರ್ಶನ ನೀಡಿದ ಅವರು, ಸಣ್ಣವಿಚಾರ ದೊಡ್ಡ ದು ಮಾಡಿ ನನ್ನನ್ನುವಿಲನ್ ಮಾಡುವ ವ್ಯವಸ್ಥಿತ ಷಡ್ಯಂತ್ರನಡೆಯುತ್ತಿದೆ. ಇದಕ್ಕೆಲ್ಲ ನಾನುತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.ಸಂದರ್ಶನ ಸಾರಾಂಶ
Related Articles
Advertisement
ಅಕ್ರಮ ಗಣಿಗಾರಿಕೆಗೆ ಪ್ರೋತ್ಸಾಹ ನೀಡಿ ದುಡ್ಡುಮಾಡುವ ಅಥವಾ ಮತ್ತೂಬ್ಬರ ಮೂಲಕ ಬ್ಲಾಕ್‌ಮೇಲ್ ದಂಧೆ ನಡೆಸುವ ಅನಿವಾರ್ಯತೆ ನನಗೆಇಲ್ಲ.zಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆಯಾ?ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳುಇಲ್ಲ ಎಂದು ಹೇಳುತ್ತಿದ್ದಾರೆ. ಸಂಸದರು ಬಿರುಕುಬಿಟ್ಟಿದೆ ಅಂತಾರೆ. ಸರ್ಕಾರ ಮತ್ತು ಅಧಿಕಾರಿಗಳುಹೇಳುತ್ತಿರುವುದು ಸುಳ್ಳಾ? ಇದೆಲ್ಲದರ ಹಿಂದೆಬೇರೆಯದೇ ಉದ್ದೇಶ ಇದೆ.
ಮನ್ಮುಲ್, ಮೈಶುಗರ್ ವಿಚಾರಗಳೆಲ್ಲಪ್ರಸ್ತಾಪವಾಗುತ್ತಿವೆ?
ಒಂದಕ್ಕೊಂದು ಸಂಬಂಧವಿಲ್ಲದ ವಿಚಾರ ಪ್ರಸ್ತಾಪಿಸಿ ಜನರಲ್ಲಿ ಗೊಂದಲ ಮೂಡಿಸುವ ತಂತ್ರ.ಯಾವುದೇ ಕಾರಣಕ್ಕೂ ಮನ್ಮುಲ್, ಮೈಶುಗರ್‌ವಿಚಾರದಲ್ಲಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಮಂಡ್ಯದಲ್ಲಿ ಜನರು ಸತ್ತಾಗ ಬರದವರುಅಕ್ರಮ ಗಣಿಗಾರಿಕೆ ತೋರಿಸಲು ಯಾಕೆ ಬಂದರು?
ಮಂಡ್ಯ ಸೋಲಿನ ನಂತರ ಕುಮಾರಸ್ವಾಮಿಹತಾಶೆಗೊಂಡಿದ್ದಾರಾ?
ನಾನೇಕೆ ಹತಾಶೆಯಾಗಲಿ. ಸೋಲು-ಗೆಲುವುಸಮಾನವಾಗಿ ಸ್ಪೀಕರಿಸುವವನು ನಾನು. ಆಯಿತುಬರಲಿ ನೋಡಿಯೇ ಬಿಡೋಣ. ಮಾತನಾಡಲುನನಗೂ ಬರುತ್ತದೆ. ಸೋತಿದ್ದರೂ ಆರು ಲಕ್ಷ ಮತಕೊಟ್ಟಿದಾರೆ ಜನ. ಆಗಿನ ರಾಜಕೀಯ ಚಿತ್ರಣ ಬೇರೆಯಿತ್ತು. ಈಗೀಗ ಮಂಡ್ಯ ಜನರಿಗೆ ವಾಸ್ತವಅರ್ಥವಾಗುತ್ತಿದೆ.
zಪ್ರಜ್ವಲ್ ರೇವಣ್ಣ ಹೆಸರು ಪ್ರಸ್ತಾಪವಾಗಿದ್ದೇಕೆ?
ನಮ್ಮ ಕುಟುಂಬ ಒಡೆಯುವ ಕೆಲಸ. ನಾನುಇವರಿಂದ ರಾಜಕಾರಣ ಅಥವಾ ಹೇಗೆ ನಡೆದುಕೊಳ್ಳಬೇಕು ಎಂಬುದು ಕಲಿಯಬೇಕಾ? ಒಬ್ಬಮಾಜಿ ಮುಖ್ಯಮಂತ್ರಿ ಬಗ್ಗೆ ಹೇಗೆ ಮಾತನಾಡಬೇಕು ಎಂಬುದು ಅವರಿಗೆ ಮೊದಲಿಗೆ ಗೊತ್ತಿಲ್ಲ.ಸುಮ ಲತಾ ಅವರಿಗೆ ನನ್ನ ಮೇಲೆ ಯಾಕೆ ವೈಷಮ್ಯಎಂಬುದೇ ಅರ್ಥವಾಗುತ್ತಿಲ್ಲ. ಚುನಾವಣೆಯಲ್ಲಿಗೆದ್ದಿ ದ್ದಾರೆ, ಜನರ ಕೆಲಸ ಮಾಡಲಿ. ನಾನು ಮಂಡ್ಯಕ್ಕೆಹೋದರೆ ಇವರೇಕೆ ಆತಂಕಪಡಬೇಕು. ಮಂಡ್ಯಸಂಸದರಾಗಿದ್ದಾರೆ ಎಂದ ಮಾತ್ರಕ್ಕೆ ಇವರಿಗೆ ಇಡೀಕ್ಷೇತ್ರ ಜಹಗೀರ್‌ದಾರ್ ಬರೆದುಕೊಟ್ಟಿದ್ದಾರಾ.
ಅಂಬರೀಶ್ ಹೆಸರು ಬೇಕಾದಾಗಲೆಲ್ಲಾ ಬಳಕೆಮಾಡಿಕೊಂಡಿದ್ದಾರೆ ಎಂದುಆರೋಪಿಸಿದ್ದಾರಲ್ಲಾ?
ಅಂಬರೀಶ್ ಹೆಸರಿನಲ್ಲಿ ರಾಜಕೀಯ ಲಾಭಪಡೆ ಯುವ ಮಟ್ಟಕ್ಕೆ ನಾನು ಎಂದೂ ಇಳಿದಿಲ್ಲ. ಆತನನ್ನ ಆತ್ಮೀಯ ಸ್ನೇಹಿತ. ಪದೇ ಪದೆ ಅವರೇಅಂಬರೀಷ್ ಹೆಸರು ಎಳೆದು ತರುತ್ತಿದ್ದಾರೆ. ಹೀಗಾಗಿಯೇ ನಾನು ಹೇಳಿದ್ದು ಅನುಕಂಪವೇ ಅವರಿಗೆಬಂಡವಾಳ. ಮಂಡ್ಯದ ಬಗ್ಗೆ ಮಾತನಾಡುವಇವರು ಅಂಬರೀಶ್ ನಿಧನರಾದಾಗ ಮೃತದೇಹಮಂಡ್ಯಕ್ಕೆ ಕೊಂಡೊಯ್ಯುವ ಸಂಬಂಧ ವಿಕ್ರಂಆಸ್ಪತ್ರೆಯಲ್ಲಿ ಏನು ನಡೆಯಿತು, ಮಗನನ್ನು ಯಾವಮಟ್ಟದಲ್ಲಿ ಗದರಿದರು ಎಂಬುದರ ಬಗ್ಗೆ ಹೃದಯಮುಟ್ಟಿ ಹೇಳಲಿ ಸಾಕು. ಅಭಿಮಾನಿಗಳಿಗಾಗಿ ನಾನುಆ ದಿನ ರಿಸ್ಕ್ ತೆಗೆದುಕೊಂಡಿದ್ದೆ.
ನಿಮ್ಮಿಬ್ಬರ ಮಾತಿನ ಸಮರಕ್ಕೆ ಅಂತ್ಯ ಇಲ್ವಾ?
ಆಯ್ಯೋ ನಾನ್ಯಾಕೆ ಪದೇಪದೆ ಅವರ ಬಗ್ಗೆಮಾತನಾಡಲಿ? ಅವರ ಬಗ್ಗೆ ಮಾತನಾಡುವುದರಿಂದ ನನಗೆ ಆಗಬೇಕಾಗಿದ್ದು ಏನೂಇಲ್ಲ. ಮಂಡ್ಯದಲ್ಲಿ ಜನಪ್ರಿಯತೆ ಕಡಿಮೆಆಗಿರುವುದಕ್ಕೆ ಈ ಇಶ್ಯೂ ದೊಡ್ಡದಾಗಿಮಾಡಲಾಗುತ್ತಿದೆ. ಕೊಡಗು-ಮೈಸೂರುಸಂಸದರೇ ಹೇಳಿದ್ದಾರಲ್ಲಾ ಸಾಕು ಬಿಡಿ. ನಾನೇನೂಮಾತನಾಡಲ್ಲ. ಬಡ ಮಹಿಳೆಯರ ಕಷ್ಟದ ಬಗ್ಗೆಮಾತನಾಡುತ್ತೇನೆ. ಬೇರೆ ವಿಚಾರ ಬೇಕಿಲ್ಲ.ಉಳಿದದ್ದೆಲ್ಲಾ ಮಂಡ್ಯ ಜನರಿಗೆ ಬಿಡುತ್ತೇನೆ.ನಮ್ಮದು ನಾಟಕ ಕಂಪನಿ ಅಲ್ಲ.
ಆದರೂ, ಡ್ಯಾಂಗೆ ಅಡ್ಡಲಾಗಿ ಮಲಗಿಸಿ ಎಂಬ ಮಾತು ಸರಿಯಾ?
ನಾನು ಪ್ರಜ್ಞಾಪೂರ್ವಕವಾಗಿ ಯಾವುದೇ ಕೆಟ್ಟ ಉದ್ದೇಶದಿಂದಹೇಳಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಸಾವಿರಾರು ಹೆಣ್ಣು ಮಕ್ಕಳಕಣ್ಣೀರು ಒರೆಸಿದ್ದೇನೆ. ಕಷ್ಟದಲ್ಲಿದ್ದವರಿಗೆ ನನ್ನ ಗೃಹ ಕಚೇರಿಯಲ್ಲಿಕೆಲಸ ಕೊಟ್ಟಿದ್ದೇನೆ. ನಾನೆಂದೂ ಹೆಣ್ಣು ಮಕ್ಕಳ ಬಗ್ಗೆ ಸಣ್ಣತನದಮಾತನ್ನು ಆಡುವವನಲ್ಲ. ಹಳ್ಳಿ ಭಾಷೆ ಪ್ರಯೋಗಿಸಿದೆ ಅದನ್ನೇದೊಡ್ಡದು ಮಾಡಿ ರಾಜಕಾರಣ ಮಾಡಲಾಗುತ್ತಿದೆ. ಮಂಡ್ಯಜನರೇ ಅದಕ್ಕೆ ಉತ್ತರ ನೀಡಲಿದ್ದಾರೆ.
ಎಸ್. ಲಕ್ಷ್ಮಿನಾರಾಯಣ