Advertisement
ಕುದ್ರೋಳಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 10ರಂದು ಬೆಳಗ್ಗೆ 9 ಗಂಟೆಗೆ ಉತ್ಸವ ಆರಂಭವಾಗಲಿದೆ. 11.50ಕ್ಕೆ ನವದುರ್ಗೆ ಮತ್ತು ಶಾರದೆ ಪ್ರತಿಷ್ಠಾಪನೆ ನಡೆಯಲಿದ್ದು, ಇದರ ಉದ್ಘಾ ಟನೆಯನ್ನು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಅವರು ನೆರವೇರಿ ಸು ವರು. ಅನಂತರ ಪ್ರತಿ ದಿನವೂ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 19ರಂದು ಸಂಜೆ 4ಕ್ಕೆ ಶೋಭಾ ಯಾತ್ರೆ ನಡೆಯಲಿದೆ ಎಂದರು.
Related Articles
ಪತ್ರಿಕಾಗೋಷ್ಠಿಯಲ್ಲಿ ಜನಾರ್ದನ ಪೂಜಾರಿ ಅವರು, “ನಾನು ನಿಮಗೊಂದು ವಿಷಯ ಹೇಳಬೇಕು ಎಂದುಕೊಂಡಿ¨ªೇನೆ. ಹೇಳಬಾರದು ಎಂದಿದ್ದೆ… ಹೇಳಬೇಕೋ… ಬೇಡವೋ?’ ಎಂದು ಕೇಳಿದರು. “ಹೇಳಿ ಸರ್’ ಎಂದು ಸುದ್ದಿಗಾರರು ವಿನಂತಿಸಿದರು. ಮೈಕ್ ಕೈಗೆತ್ತಿಕೊಂಡ ಪೂಜಾರಿ ಅವರು ಒಂದು ಕ್ಷಣ ಏನೋ ಯೋಚಿಸಿ, “ಬೇಡ… ಬೇಡ… ಹೇಳುವುದಿಲ್ಲ’ ಎಂದು ಸುಮ್ಮನಾದರು. “ಹೇಳಿ’ ಎಂದು ಸುದ್ದಿಗಾರರು ಒತ್ತಾಯಿಸಿದರೂ ಪೂಜಾರಿಯವರು ಹೇಳಬೇಕಾದ ವಿಷಯವನ್ನು ಹೇಳದೆ ಮೌನ ವಹಿಸಿರುವುದು ಕುತೂಹಲ ಸೃಷ್ಟಿಸಿದೆ.
Advertisement
ಪ್ರತಿ ಜಿಲ್ಲೆಯಿಂದ ಕಲಾತಂಡಮಂಗಳೂರು ದಸರಾ ಮೆರವಣಿಗೆ ಯಲ್ಲಿ ಈ ಬಾರಿ ಸ್ತಬ್ಧ ಚಿತ್ರಗಳ ಜತೆಗೆ ರಾಜ್ಯದ 30 ಜಿಲ್ಲೆಗಳಿಂದ ವಿವಿಧ ಕಲಾತಂಡಗಳು ಕೂಡ ಭಾಗವಹಿಸಲಿವೆ. ಈ ಮೂಲಕ ರಾಜ್ಯದ ಎಲ್ಲ ಕಲಾಪ್ರಕಾರಗಳು ದಸರಾ ಮೆರವಣಿಗೆಯಲ್ಲಿ ಸಂಗಮಿಸಲಿವೆ. ವೇದಕುಮಾರ್ ಮೆರವಣಿಗೆಯನ್ನು ಸಂಘಟಿಸ ಲಿದ್ದು, 75ಕ್ಕೂ ಅಧಿಕ ಕಲಾ ತಂಡಗಳು, ಸ್ತಬ್ಧಚಿತ್ರಗಳು ಇರಲಿವೆ. ನಗರವನ್ನು ವಿದ್ಯುತ್ ದೀಪಗಳಿಂದ ಶೃಂಗರಿಸುವಂತೆ ವಿನಂತಿಸ ಲಾಗಿದ್ದು, ಸರ್ವರೂ ಸ್ಪಂದಿಸು ತ್ತಿದ್ದಾರೆ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.