Advertisement

ಮೋದಿ-ಎಚ್ ಡಿಕೆ ಭೇಟಿ; ಇನ್ನೂ ಮುಗಿಯದ ಖಾತೆ ಹಂಚಿಕೆ ಬಿಕ್ಕಟ್ಟು

06:21 PM May 28, 2018 | Sharanya Alva |

ನವದೆಹಲಿ: ಪ್ರಮುಖ ಖಾತೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್, ಜೆಡಿಎಸ್ ನಡುವೆ ಸೋಮವಾರವೂ ದೆಹಲಿಯಲ್ಲಿ ಕಸರತ್ತು ಮುಂದುವರಿದಿದ್ದು, ಹಣಕಾಸು ಖಾತೆಗಾಗಿ ಕಾಂಗ್ರೆಸ್ ಬಿಗಿ ಪಟ್ಟು ಹಿಡಿದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಬೇಷರತ್ತಾಗಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ಎಂದು ಕಾಂಗ್ರೆಸ್ ಈ ಮೊದಲು ಹೇಳಿತ್ತಾದರೂ ಇದೀಗ ಹಣಕಾಸು, ಜಲಸಂಪನ್ಮೂಲ, ಬೃಹತ್ ಕೈಗಾರಿಕೆ, ಅಬಕಾರಿ, ಸಾರಿಗೆ, ಇಂಧನ ಖಾತೆ ಹಾಗೂ ಸಿಎಂ ಪಟ್ಟಕ್ಕೂ ಬೇಡಿಕೆ ಇಟ್ಟಿದೆ ಎಂದು ಹೇಳಲಾಗುತ್ತಿದೆ.

ಏತನ್ಮಧ್ಯೆ ಖಾತೆ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ನಾನು ರಾಜ್ಯದ ಆರು ಕೋಟಿ ಜನರ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ ಎಂದು ಮಾಧ್ಯಮಗಳ ಜತೆ ಮಾತನಾಡುತ್ತ ಪ್ರತಿಕ್ರಿಯೆ ನೀಡಿದ್ದಾರೆ.

30-30 ತಿಂಗಳ ಆಧಾರದಲ್ಲಿ ಅಧಿಕಾರ ಹಂಚಿಕೊಳ್ಳಲು ಚರ್ಚೆ ನಡೆದಿದೆ ಎಂದು ವರದಿ ಹೇಳಿದೆ. ನವದೆಹಲಿಯ ಗುಲಾಂ ನಬಿ ಆಜಾದ್ ಅವರ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರು ಸಮ್ಮಿಶ್ರ ಸರ್ಕಾರದಲ್ಲಿನ ಒಡಂಬಡಿಕೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ರಾಜ್ ಘಾಟ್ ಗೆ ಸಿಎಂ ಭೇಟಿ:

Advertisement

ದೆಹಲಿಯಲ್ಲಿರುವ ಕುಮಾರಸ್ವಾಮಿ ಸೋಮವಾರ ರಾಜ್ ಘಾಟ್ ಗೆ ಭೇಟಿ ನೀಡಿ ಮಹಾತ್ಮಗಾಂಧಿ ಅವರ ಸಮಾಧಿಗೆ ಪುಪ್ಪಗುಚ್ಛ ಇಟ್ಟು ನಮನ ಸಲ್ಲಿಸಿದರು.

ಪ್ರಧಾನಿ ಭೇಟಿಯಾದ ಎಚ್ ಡಿಕೆ:

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಹದಾಯಿ, ಸಾಲಮನ್ನಾ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಬೆಂಬಲ ಕೋರಿದ್ದೇನೆ. ಮಹದಾಯಿಗೆ ಸಂಬಂಧಿಸಿದಂತೆ ಮೂರು ರಾಜ್ಯಗಳ ಸಿಎಂಗಳ ಸಭೆ ಕರೆಯಲು ಪ್ರಧಾನಿ ಅವರಲ್ಲಿ ಮನವಿ ಮಾಡಿದ್ದೇನೆ. ಮೋದಿ ಅವರು ಕೂಡಾ ಸುದೀರ್ಘವಾಗಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರು, ಅವರು ಕೂಡಾ ಈ ಸಂದರ್ಭದಲ್ಲಿ ನನಗೆ ಹಲವಾರು ಸಲಹೆಗಳನ್ನು ನೀಡಿದ್ದು, ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next