Advertisement

ನಾನು ಬಂಡೆನೂ ಅಲ್ಲ, ಜಲ್ಲಿನೂ ಅಲ್ಲ: ಕುಮಾರಸ್ವಾಮಿ ಈಗಲೂ ನನ್ನ ಸ್ನೇಹಿತರು: ಡಿಕೆಶಿ

03:07 PM Dec 23, 2020 | Mithun PG |

ಬೆಂಗಳೂರು: ಕುಮಾರಸ್ವಾಮಿ ಈಗಲೂ ನನ್ನ ಸ್ನೇಹಿತರು, ಮುಂದೆಯೂ ನನ್ನ ಸ್ನೇಹಿತರು. ನಾನು ಯಾರನ್ನೂ ದ್ವೇಷ ಮಾಡಲ್ಲ, ಅವರ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಬಂಡೆನೂ ಅಲ್ಲ, ಮರಳು ಅಲ್ಲ, ಜಲ್ಲಿಯೂ ಅಲ್ಲ.  ಉಪಯೋಗಿಸಿಕೊಂಡಿದ್ದಾರೆ ಬಿಡಿ ಎಂದು ಸದಾಶಿವನಗರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

Advertisement

ಸಂಪದ್ಭರಿತ ಖಾತೆ ಕಾರಣಕ್ಕಾಗಿ ಸಮ್ಮಿಶ್ರ ಸರ್ಕಾರ ಇರಬೇಕು ಎಂದು ಡಿಕೆಶಿ ಬಯಸಿದ್ದರು ಎಂಬ ಹೆಚ್ ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ ಬಗ್ಗೆ ನಾನೇಕೆ ಮಾತಾಡಲಿ, ಅವರದ್ದು ಒಂದು ಪಕ್ಷ, ಅವರನ್ನು ಏಕೆ ಡಿಗ್ರೇಡ್ ಮಾಡುವುದು. ಸಿಎಂ ಯಡಿಯೂರಪ್ಪ  ಮತ್ತು ಅವರ ಅಡ್ಜೆಸ್ಟ್ ಮೆಂಟ್ ಏನೇನಿದೆಯೋ ಗೊತ್ತಿಲ್ಲ ಎಂದು ತಿಳಿಸಿದರು.

ಶಾಲೆಗಳ ವಿಚಾರದಲ್ಲಿ ಪ್ರತಿ ನಿಮಿಷ ಕೂಡ ಗೊಂದಲ ಆಗುತ್ತಿದೆ.  ಶಿಕ್ಷಣ ಸಚಿವರು ಸಿಎಂ ಜೊತೆ, ಪೋಷಕರ ಜೊತೆ ಮಾತನಾಡುತ್ತೇನೆ ಎಂದು ಹೇಳುತ್ತಾರೆ. ಸರ್ಕಾರ ಆ ಗೊಂದಲವನ್ನು ಮೊದಲು ನಿವಾರಣೆ ಮಾಡಬೇಕು. ಮಕ್ಕಳನ್ನು ರಕ್ಷಣೆ ಮಾಡಬೇಕು, ಟೀಚರ್ಸ್ ಗೂ ಸಂಬಳ ನೀಡಬೇಕು

ಬರೀ ಶಾಲೆಯನ್ನು ತೆಗೆಯಬೇಕು, ಮುಚ್ಚಬೇಕು ಎನ್ನುವುದೇ ಗೊಂದಲವಾಗುತ್ತಿದೆ.  ತಜ್ಞರು ಕೂಡ ಇದಕ್ಕೆ ಸಲಹೆ ನೀಡಲು ಇದ್ದಾರೆ. ಮಕ್ಕಳು ಭವಿಷ್ಯ, ಪರೀಕ್ಷೆ ಎಲ್ಲವೂ ಮುಖ್ಯ. ಒಂದು ಪಾಲಿಟಿಕಲ್ ಪಾರ್ಟಿಯಾಗಿ ನಮ್ಮ ಅಭಿಪ್ರಾಯಕ್ಕಿಂತ ಸರ್ಕಾರದಲ್ಲಿ ಸ್ಪಷ್ಟತೆ ಇಲ್ಲ. ನನಗೂ ಕೂಡ ಸರ್ಕಾರದ ನಿರ್ಧಾರದ ಕುರಿತು ಗಾಬರಿಯಾಗುತ್ತಿದೆ.

ಸರ್ಕಾರದ ಬಳಿ ಪಂಡಿತರಿದ್ದಾರೆ, ಬಹಳ ದೊಡ್ಡ ದೊಡ್ಡ ತಜ್ಞರಿದ್ದಾರೆ. ಸರ್ಕಾರ ನಮ್ಮ ಮಾತು, ಸಲಹೆಯನ್ನಂತೂ ಕೇಳುವುದಿಲ್ಲ. ಏನೇ ಗಲಾಟೆಯಾಗಲಿ ಕಾಂಗ್ರೆಸ್ ನವರೇ ಕಾರಣ ಎನ್ನುತ್ತಾರೆ. ಸರ್ಕಾರಕ್ಕೆ ಕೋವಿಡ್  ವಿಚಾರದಲ್ಲೂ ಹಿಡನ್ ಅಜೆಂಡಾ ಇದೆ. ನಾನು ತಜ್ಞರ ಜೊತೆ ಚರ್ಚೆ ಮಾಡಿ ಮುಂದೆ ಮಾತನಾಡುತ್ತೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next