Advertisement

ಕುಮಾರಸ್ವಾಮಿ ಯೋಗ್ಯತೆ ಇಲ್ಲದ ಸಿಎಂ: ಈಶ್ವರಪ್ಪ

09:25 AM Apr 09, 2019 | Lakshmi GovindaRaju |

ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಮುಗಿಸಿದ್ದಾರೆ. ಜೆಡಿಎಸ್‌ ಮುಗಿಸಲು ತಯಾರಿ ನಡೆಸಿದ್ದಾರೆ ಎಂದು ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಆರೋಪಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಒಬ್ಬ ಅಯೋಗ್ಯ ಮುಖ್ಯಮಂತ್ರಿ ಎಂದು ನಾನು ಹೇಳಿದ್ದೆ. ಅದಕ್ಕೆ ಅವರು ಬೇಜಾರಾಗಿದ್ದಾರೆ. ಆ ಪದವನ್ನು ನಾನು ಹಿಂದೆ ಪಡೆಯುತ್ತೇನೆ. ಆದರೆ, ಕುಮಾರಸ್ವಾಮಿ ಅವರು ಯೋಗ್ಯತೆ ಇಲ್ಲದ ಮುಖ್ಯಮಂತ್ರಿ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಎಂಬ ಶಬ್ದ ಅಪವಿತ್ರವಾಗಿದೆ.

ಆ ಮೈತ್ರಿ ಶಬ್ದವನ್ನು ಅವರು ಕೈ ಬಿಡಬೇಕು. ಹೆಲಿಕಾಪ್ಟರ್‌ ಲಭ್ಯವಾಗದಂತೆ ಬಿಜೆಪಿಯಿಂದ ಕುತಂತ್ರ ನಡೆದಿದೆ ಎಂಬ ಕುಮಾರಸ್ವಾಮಿ ಹೇಳಿಕೆ ಹಾಸ್ಯಾಸ್ಪದ. ಪ್ರಚಾರದ ಬಗ್ಗೆ ಮೊದಲೇ ಎಲ್ಲವನ್ನೂ ಸಿದ್ಧಪಡಿಸಿಕೊಳ್ಳಬೇಕು. ಅದು ಬಿಟ್ಟು ಈ ರೀತಿ ಹೇಳುವುದು ಸರಿಯಲ್ಲ ಎಂದರು.

“ಮಂಡ್ಯದಲ್ಲಿ ನನ್ನ ಮಗನ ಸೋಲಿಸುವ ಮೂಲಕ ನನ್ನನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಲಾಗಿದೆ’ ಎನ್ನುತ್ತಿದ್ದಾರೆ. ಆದರೆ, ಅದು ಸಂಚಲ್ಲ, ರಾಜಕೀಯ. ನಿಖೀಲ್‌ ಕುಮಾರಸ್ವಾಮಿ ಅವರನ್ನು ಸೋಲಿಸಲೆಂದೇ ಸುಮಲತಾಗೆ ಬಿಜೆಪಿ ಬೆಂಬಲ ಕೊಟ್ಟಿದೆ. ಜೆಡಿಎಸ್‌-ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹೊಂದಾಣಿಕೆಯಿಲ್ಲ.

ಅವರನ್ನು ಇವರು, ಇವರನ್ನು ಅವರು ಸೋಲಿಸಲು ನಿಂತಿದ್ದಾರೆ. ಮಂಡ್ಯ ಚುನಾವಣೆಯ ಬಗ್ಗೆ ಸ್ವತ: ಕುಮಾರಸ್ವಾಮಿ ಹತಾಶರಾಗಿದ್ದಾರೆ. ಮಂಡ್ಯದಲ್ಲಿ ಸೋಲಿನ ಭೀತಿಯಿಂದ ಇಡೀ ಕುಟುಂಬ ಪ್ರಚಾರ ಮಾಡುತ್ತಿದೆ. ಅದೂ ಸಾಲದಂತೆ ಸಿದ್ದರಾಮಯ್ಯ ಅವರನ್ನೂ ಪ್ರಚಾರಕ್ಕೆ ಕರೆದಿದ್ದಾರೆ. ಜತೆಗೆ ಸೋಲಿನ ಭೀತಿಯಿಂದ ರಾಹುಲ್‌ ಗಾಂಧಿ ಅವರನ್ನು ಕರೆಸುತ್ತಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next