Advertisement

ಸಿದ್ದು ಭಯದಲ್ಲಿ ಕುಮಾರಸ್ವಾಮಿ: ಜೋಶಿ

10:15 AM May 08, 2019 | Suhan S |

ಧಾರವಾಡ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಮ್ಮ ಮಕ್ಕಳು ಚುನಾವಣೆಯಲ್ಲಿ ಗೆಲ್ತಾರೋ ಇಲ್ಲವೋ, ಸಿದ್ದರಾಮಯ್ಯನವರು ಸರ್ಕಾರಕ್ಕೆ ಏನು ಮಾಡ್ತಾರೋ ಎಂಬ ಗಾಬರಿಯಲ್ಲಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸರ್ಕಾರ ಹೇಗೆ ಉಳಿಸಿಕೊಳ್ಳಬೇಕು ಎಂಬ ಚಿಂತೆಯಲ್ಲಿ ಸಿಎಂ ಇದ್ದರೆ, ಅವರನ್ನು ಕೆಡವಿ ನಾವು ಹೇಗೆ ಬರೋದು? ಎಂಬ ಚಿಂತೆಯಲ್ಲಿ ಸಿದ್ದರಾಮಯ್ಯನವರು ಇದ್ದಾರೆ. ಸಿಎಂಗೆ ರಾಜ್ಯದ ಬರದ ಬಗ್ಗೆ ಚಿಂತೆ ಇಲ್ಲ. ಸಿಎಂ ಸೇರಿ ಯಾರೂ ಬರಗಾಲದ ಬಗ್ಗೆ ಚಿಂತೆ ಮಾಡುತ್ತಿಲ್ಲ. ದುರ್ದೈವವೆಂದರೆ ಮಳೆ ಬರಲಿ ಅಥವಾ ಒಳ್ಳೆಯದಾಗಲಿ ಎಂದು ಎಲ್ಲರೂ ಪೂಜೆ ಮಾಡಿಸುತ್ತಾರೆ. ಆದರೆ ಇವರು ತಮ್ಮ ಮಕ್ಕಳು ಚುನಾವಣೆಯಲ್ಲಿ ಗೆಲ್ಲಲಿ ಸಿಎಂ ಹೋಮ-ಹವನ ಮಾಡಿಸುತ್ತಾರೆ. ಇಂತಹ ಮೋಜು ಮಸ್ತಿ ಮಾಡುವ ಸರ್ಕಾರದ ನೀತಿಯನ್ನು ನಾವು ಖಂಡಿಸುತ್ತೇವೆ ಎಂದರು.

ಸಿದ್ದರಾಮಯ್ಯನವರು ಪ್ರಧಾನಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಚೋರ್‌ ಎಂದು ಕರೆದಿದ್ದಾರೆ. ರಾಜೀವಗಾಂಧಿ ಬಗ್ಗೆ ಮಾತನಾಡಿದ್ದಕ್ಕೆ ಕಾಂಗ್ರೆಸ್‌ನವರಿಗೆ ಬೆಂಕಿ ಹತ್ತಿದೆ. ನಕಲಿ ಗಾಂಧಿಗಳು ಈ ದೇಶವನ್ನು ಲೂಟಿ ಮಾಡಿದ್ದಾರೆ. ಕಳ್ಳರ ಪಕ್ಷ ಅಂದರೆ ಅದು ಕಾಂಗ್ರೆಸ್‌ ಪಕ್ಷ ಎಂದರು.

ಸಿದ್ದರಾಮಯ್ಯನವರಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಹಿಂದೆ ಜೆ.ಎಚ್. ಪಟೇಲರು ಹಾಗೂ ನೀವು ಸೋನಿಯಾ ಗಾಂಧಿ ಹಾಗೂ ರಾಜೀವಗಾಂಧಿಗೆ ಯಾವ ರೀತಿ ಮಾತನಾಡಿದ್ದೀರಿ ಅಂತಾ ನೆನಪಿಟ್ಟುಕೊಳ್ಳಿ. ಅವರಿಗೆ ಕಳ್ಳರು-ಸುಳ್ಳರು ಅಂತ ಹೇಳಿದ್ರಿ. ಈಗ ಒಬ್ಬ ಧೀಮಂತ ವ್ಯಕ್ತಿಗೆ ಏಕವಚನದಲ್ಲಿ ಮಾತನಾಡಿದ್ದು, ಇದಕ್ಕೆ ಜನ ತಕ್ಕ ಉತ್ತರ ನೀಡುತ್ತಾರೆ. ನಿಮ್ಮಂತೆ ನಮಗೂ ಮಾತನಾಡೋಕೆ ಬರುತ್ತೆ, ಆದರೆ ಅದು ನಮ್ಮ ಸಂಸ್ಕೃತಿ ಅಲ್ಲ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಸ್ಥಾನ ಗೆಲ್ಲುತ್ತೇವೆ, ದೇಶದಲ್ಲಿ ನಿಚ್ಚಳ ಬಹುಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next