Advertisement
ಸುದ್ದಿಗಾರರೊಂದಿಗೆ ಮಾತನಾಡಿ, ವರದಿಯಲ್ಲಿ ಉಲ್ಲೇಖೀಸಿದ ಎಲ್ಲ ಅಂಶಗಳ ಜಾರಿ ಅಸಾಧ್ಯ. ನಿರೀಕ್ಷೆಗೂ ಮೀರಿದ ಕೆಲವೊಂದು ಬೇಡಿಕೆಗಳಿವೆ. ಹೀಗಾಗಿ ಅವಶ್ಯವಿರುವ ಕೆಲ ಅಂಶಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದರು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆಯಂಥ ಅಕ್ರಮದಲ್ಲಿ ಭಾಗಿಯಾದವರಿಗೆ ಹಾಗೂ ಅದನ್ನು ಪಡೆದ ವಿದ್ಯಾರ್ಥಿಗಳಿಗೂ ಆರು ವರ್ಷ ನಿರ್ಬಂಧ ಹೇರಲು ಅವಕಾಶ ಇರುವ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು. ವಿದ್ಯಾರ್ಥಿಗಳು ಅವರ ಶಾಲೆಯ ಪರೀಕ್ಷಾ ಕೇಂದ್ರ ಬಿಟ್ಟು ಬೇರೆ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಿದೆ. ಅಕ್ರಮ ತಡೆಗಾಗಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. 2015ರಲ್ಲಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ 268 ಅಭ್ಯರ್ಥಿಗಳಿಗೆ ವಯೋಮಿತಿ ಮೀರುತ್ತಿದ್ದು, ಅವರಿಗೆ ಹೊಸ ನೇಮಕಾತಿ ವೇಳೆ ಪರಿಗಣಿಸಲಾಗುವುದು.