Advertisement

ಕೂಳೂರು ಸೇತುವೆ ದುರಸ್ತಿ: ಪ್ರಯಾಣಿಕರಿಗೆ ಟ್ರಾಫಿಕ್‌ ಜಾಮ್‌ ಬಿಸಿ

10:03 AM Mar 18, 2020 | sudhir |

ಪಣಂಬೂರು: ತುಂಬಾ ಹಳೆಯದಾದ ಕೂಳೂರು ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಮಾನು ಸೇತುವೆಯು ಶಿಥಿಲಾ ವ್ಯವಸ್ಥೆಯಲ್ಲಿರುವ ಕಾರಣ ಸೇತುವೆಯ ಹಾಗೂ ರಸ್ತೆಯ ರಿಪೇರಿಯನ್ನು ನಡೆಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು, ಪ್ರಾಧಿಕಾರದ ಮನವಿ ಮೇರೆಗೆ ಮಾ.16ರಿಂದ ವಾಹನ ಸಂಚಾರ ಸೋಮವಾರ ಸಂಜೆಯಿಂದ ನಿಷೇಧಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಟ್ರಾಫಿಕ್‌ ಜಾಮ್‌ನ ಬಿಸಿ ತಟ್ಟತೊಡಗಿದೆ.

Advertisement

ಉಡುಪಿ-ಮಂಗಳೂರು, ಮಂಗಳೂರು-ಉಡುಪಿ ಎರಡೂ ಕಡೆಗಳಲ್ಲಿಯೂ ವಾಹನವನ್ನು ಸರತಿ ಸಾಲಿನಲ್ಲಿ ಬಿಡಲಾಗುತ್ತಿರುವುದರಿಂದ ಕಚೇರಿ, ಕಂಪೆನಿಗಳು ಬಿಡುವ ಸಮಯದಲ್ಲಿ ಸಂಚಯದಲ್ಲಿ ಕಳೆದ ಎರಡು ದಿನಗಳಿಂದ ವ್ಯತ್ಯಯವಾಗುತ್ತಿದೆ. ತುರ್ತು ಆ್ಯಂಬುಲೆನ್ಸ್‌ ಸಾಗಾಟಕ್ಕೂ ತೊಡಕಾಗಿದ್ದು ಇಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲವಾಗಿದೆ.

ಟ್ರಾಫಿಕ್‌ ವಿಭಾಗದ ಐವತ್ತಕ್ಕೂ ಮಿಕ್ಕೂ ಅಧಿಕಾರಿಗಳು, ಪೊಲೀಸರು ವಾಹನ ಸಂಚಾರ ಸುಗಮ ಗೊಳಿಸಲು ಶ್ರಮಿಸುತ್ತಿದ್ದಾರೆ. ಪರೀಕ್ಷೆ ಸಮಯವಾಗಿರುವುದರಿಂದ ಈಗಲೇ ದುರಸ್ತಿ ಕಾರ್ಯಕ್ಕೆ ಇಳಿದಿರುವುದಕ್ಕೆ ವಿದ್ಯಾರ್ಥಿಗಳ ಹೆತ್ತವರಿಂದ ಅಸಮಾಧಾನ ವ್ಯಕ್ತವಾಗಿದೆ. ಟ್ರಾಫಿಕ್‌ ಜಾಮ್‌ ನಲ್ಲಿ ಅವಸರದ ಡ್ರೈವಿಂಗ್‌ನಿಂದಾಗಿ ಸಣ್ಣ ಪುಟ್ಟ ಅಪಘಾತಗಳು ನಡೆಯುತ್ತಿವೆ. ದುರಸ್ತಿಗೆ ಇನ್ನೂ ಒಂದು ತಿಂಗಳು ಹಿಡಿಯುವ ಸಾಧ್ಯತೆಯಿದ್ದು ಯಾವುದೇ ಕೆಲಸಕ್ಕೆ ಹೊರಡುವವರು ಕೂಳೂರು ಸೇತುವೆ ದಾಟಲು ಒಂದು ಗಂಟೆ ಮುಂಚೆ ಹೊರಡುವುದು ಉತ್ತಮ ಎಂಬುದು ಸ್ಥಳೀಯರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next