ಇಂಗ್ಲೆಡ್‌ನಲ್ಲಿರುವ ಪಿಚ್‌ಗಳು ಪ್ರಮುಖವಾಗಿ ವೇಗದ ಬೌಲರ್‌ಗಳಿಗೆ ಹೇಳಿ ಮಾಡಿಸಿದಂತಿರುತ್ತದೆ. ಜತೆಗೆ ಈವರೆಗೆ ಭಾರತೀಯ ಸ್ಪಿನ್ನರ್‌ಗಳು ಯಾರೂ ಸಹ ವಿದೇಶಿ ಪಿಚ್‌ಗಳಲ್ಲಿ ಮಿಂಚಿದಿಲ್ಲ. ಆದರೆ, ಮಂಗಳವಾರ ವಿದೇಶದಲ್ಲಿ ಆಡಿದ ತಮ್ಮ ಮೊದಲ ಪಂದ್ಯದಲ್ಲಿಯೇ ಬಲಿಷ್ಠ ಇಂಗ್ಲೆಂಡ್ ತಂಡದ ಐವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಮೂಲಕ ಮೂಲಕ ತಮ್ಮ ಸಾಮರ್ಥಯ ಸಾಬೀತುಪಡಿಸಿದ್ದಾರೆ.
Advertisement
ಆ ಮೂಲಕ ಸ್ಪಿನ್ನರ್‌ಗಳ ಆಟ ಇಂಗ್ಲೆಂಡ್‌ನಲ್ಲಿ ನಡೆಯುವುದಿಲ್ಲ ಎಂಬ ಭಾವನೆಯಲ್ಲಿದ್ದ ಇಂಗ್ಲೆಂಡ್ ಆಟಗಾರರಿಗೆ ಎಚ್ಚರಿಕೆಯ ಸಂದೇಶ ಕಳುಹಿಸಿದ್ದಾರೆ. ಮೊದಲ ಪಂದ್ಯದಲ್ಲೇ ಕುಲದೀಪ್ ದಾಳಿಗೆ ಹೆದರಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಇದೀಗ ಕುಲದೀಪ್ ಬೌಲಿಂಗ್ ಎದುರಿಸಲು ಹಲವು ತಂತ್ರಗಳನ್ನು ರೂಪಿಸುತ್ತಿದ್ದಾರೆ. ಇದರೊಂದಿಗೆ ಮಂಗಳವಾರ ಓಲ್ಡ್ ಟ್ರಾಪೋರ್ಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಐದು ವಿಕೆಟ್ ಪಡೆದ ಮೊದಲ ರಿಸ್ಟ್ ಬೌಲರ್ ಎಂಬ ಹೆಗ್ಗಳಿಕೆಗೆ ಕುಲದೀಪ್ ಪಾತ್ರವಾಗಿದ್ದಾರೆ. ಜತೆಗೆ ಟಿ20 ಕ್ರಿಕೆಟ್ ಮಾದರಿಯಲ್ಲಿ ಐದು ವಿಕೆಟ್ ಪಡೆದ 3ನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಈ ಮೊದಲು ಯಜುವೇಂದ್ರ ಚಾಹಲ್ ನಾಲ್ಕು ಓವರ್‌ಗಳಲ್ಲಿ 25 ರನ್ ನೀಡಿ 6 ವಿಕೆಟ್ ಪಡೆದಿದ್ದರು. ನಂತರದಲ್ಲಿ ವೇಗಿ ಭುವನೇಶ್ವರ್ ಕುಮಾರ್ 24 ರನ್ ನೀಡಿ 5 ವಿಕೆಟ್ ಪಡೆದಿದ್ದರು.
Related Articles
Advertisement
ದಿಗ್ಗಜರಿಂದ ಮೆಚ್ಚುಗೆ: ಎಲ್ಲ ಮಾದರಿಯಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕುಲದೀಪ್ ಯಾದವ್ ದಿಗ್ಗಜ ಆಟಗಾರರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಮಂಗಳವಾರ ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಪಡೆದ ಹಿನ್ನೆಲೆಯಲ್ಲಿ ಹಲವಾರು ಹಿರಿಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕುಲದೀಪ್ ಯಾದವ್ ಸ್ಪಿನ್ ಮೋಡಿಗೆ ಬೆರಗಾಗಿದ್ದ ಸ್ಪಿನ್ ದಿಗ್ಗಜ ಶೇನ್ ವಾರ್ನ್, ಕುಲದೀಪ್ ಯಾದವ್ ಬೌಲಿಂಗ್ ನಿಜಕ್ಕೂ ಅತ್ಯುತ್ತಮವಾಗಿದ್ದು, ಇದೇ ರೀತಿಯಾಗಿ ಅವರು ಬೌಲಿಂಗ್ ಮಾಡಿದ್ರೆ ಜಗತ್ತಿನ ಮತ್ತೂರ್ವ ಲೆಗ್ ಸ್ಪಿನ್ನರ್ ಪಾಕ್‌ನ ಯಾಸೀರ್ ಅವರಿಗೆ ಸವಾಲಾಗಬಲ್ಲರು ಎಂದು ಈ ಹಿಂದೆ ಟ್ವೀಟ್ ಮಾಡಿದ್ದರು.
ವೆಂ.ಸುನೀಲ್ ಕುಮಾರ್