Advertisement

ಕುಲದೀಪ್‌ ಸಿಂಗ್‌ ಸೆಂಗಾರ್‌ಗೆ 10 ವರ್ಷ ಜೈಲು

09:52 AM Mar 14, 2020 | Hari Prasad |

ಹೊಸದಿಲ್ಲಿ: ಅಪ್ರಾಪ್ತ ವಯಸ್ಕಳನ್ನು ಅತ್ಯಾಚಾರಕ್ಕೊಳಪಡಿಸಿದ ಆರೋಪದಲ್ಲಿ ಈಗಾಗಲೇ ಅಜೀವ ಜೈಲುಶಿಕ್ಷೆಗೊಳಗಾಗಿರುವ ಉತ್ತರಪ್ರದೇಶದ ಬಿಜೆಪಿಯ ಉಚ್ಚಾಟಿತ ಶಾಸಕ ಕುಲದೀಪ್‌ ಸಿಂಗ್‌ ಸೆಂಗಾರ್‌ ಪರಿಸ್ಥಿತಿ ಈಗ ಇನ್ನೂ ಬಿಗಡಾಯಿಸಿದೆ.

Advertisement

ಸಂತ್ರಸ್ತೆಯ ತಂದೆಯ ಸಾವಿನ ಪ್ರಕರಣದಲ್ಲಿ ಸೆಂಗಾರ್‌ಗೆ 10 ವರ್ಷ ಕಠಿನ ಜೈಲು ಶಿಕ್ಷೆ ಜತೆಗೆ, 10 ಲಕ್ಷ ರೂ. ದಂಡ ವಿಧಿಸಿ, ದಿಲ್ಲಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಅಲ್ಲದೇ ಸೆಂಗಾರ್‌ ಸಹೋದರ ಅತುಲ್‌ ಸಿಂಗ್‌ಗೂ 10 ವರ್ಷ ಜೈಲು ಶಿಕ್ಷೆ, 10 ಲಕ್ಷ ರೂ. ದಂಡ ವಿಧಿಸಲಾಗಿದೆ.

ದಂಡದ 20 ಲಕ್ಷ ರೂ. ಮೊತ್ತವನ್ನು ಮೃತ ವ್ಯಕ್ತಿಯ ಕುಟುಂಬಕ್ಕೆ ನೀಡಲು ಆದೇಶಿಸಲಾಗಿದೆ. 2017ರಲ್ಲಿ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಸೆಂಗಾರ್‌ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಸಿಲುಕಿಸಿದ್ದಲ್ಲದೆ, ಪೊಲೀಸ್‌ ವಶದಲ್ಲಿದ್ದಾಗಲೇ ಆ ವ್ಯಕ್ತಿಯ ಮೇಲೆ ಗಂಭೀರ ಹಲ್ಲೆ ನಡೆಸಿ ಕೊಲೆಗೈಯ್ಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next