Advertisement

ಕುಲಭೂಷಣ್‌ ಜಾಧವ್‌ ವಿಚಾರದಲ್ಲಿ ಸೂಚನೆ ಪಾಲಿಸುತ್ತಿದ್ದೇವೆ: ಪಾಕ್‌

08:10 AM May 11, 2020 | Sriram |

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಕುಲಭೂಷಣ್‌ ಜಾಧವ್‌ರವರ ಬಗ್ಗೆ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ನೀಡಿರುವ ತೀರ್ಪನ್ನು ಪಾಲಿಸುವಲ್ಲಿ ಪಾಕಿಸ್ತಾನ ಬದ್ಧವಾಗಿದೆ ಎಂದು ಪಾಕಿಸ್ತಾನ ತಿಳಿಸಿದೆ.

Advertisement

ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಈ ಪ್ರಕರಣ ಕಾಲಿಡುವ ಮುನ್ನ ಭಾರತ, ಜಾಧವ್‌ ಬಿಡುಗಡೆಗೆ ಪಾಕಿಸ್ತಾನದ ಮನವೊಲಿಸಲು ಸಾಕಷ್ಟು ಬಾರಿ ಪ್ರಯತ್ನಿಸಿತ್ತು ಎಂದು ಐಸಿಜೆಯಲ್ಲಿ ಭಾರತದ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ ಹೇಳಿದ್ದರು. ಜೊತೆಗೆ, ಐಸಿಜೆಯು ಜಾಧವ್‌ಗೆ ರಾಜತಾಂತ್ರಿಕ ನೆರವನ್ನು ನೀಡಬೇಕು ಎಂದು ಸೂಚಿಸಿದ್ದನ್ನು ಪಾಕಿಸ್ತಾನ ಸರಿಯಾಗಿ ಪಾಲಿಸುತ್ತಿಲ್ಲ. ಈವರೆಗೂ ಭಾರತೀಯ ರಾಜತಾಂತ್ರಿಕರಿಗೆ ಜಾಧವ್‌ ಭೇಟಿಗೆ ಅವಕಾಶ ಕಲ್ಪಿಸಿಲ್ಲ ಎಂದು ಹೇಳಿದ್ದರು.

ಸಾಳ್ವೆಯವರ ಹೇಳಿಕೆ ಬಂದ ಕೆಲ ದಿನಗಳಲ್ಲೇ ಪಾಕಿಸ್ತಾನ ಈಗ ಜಾಧವ್‌ ವಿಚಾರದಲ್ಲಿ ಐಸಿಜೆ ನೀಡಿದ್ದ ಸೂಚನೆಯನ್ನು ಪಾಲಿಸಲಾಗುತ್ತಿದೆ ಎಂಬ ಸ್ಪಷ್ಟನೆಯನ್ನು ನೀಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next