Advertisement

ಪಾಕ್ ಗೆ ಮುಖಭಂಗ, ಜಾಧವ್ ಗೆ ವಿಧಿಸಿದ್ದ ಗಲ್ಲುಶಿಕ್ಷೆಗೆ ICJ ತಡೆ

03:54 PM May 18, 2017 | Team Udayavani |

ಹೇಗ್(ನೆದರ್ಲೆಂಡ್):ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಪ್ರಕರಣದಲ್ಲಿ ಭಾರತಕ್ಕೆ ಭಾರೀ ಗೆಲುವು ಸಿಕ್ಕಿದ್ದು, ಜಾಧವ್ ಗೂಢಚಾರನೆಂಬ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ. ಅಲ್ಲದೇ ಈ ಕೇಸ್ ಐಸಿಜೆ ವ್ಯಾಪ್ತಿಗೆ ಬರುವುದಿಲ್ಲ ಎಂಬ ಪಾಕಿಸ್ತಾನದ ವಾದವನ್ನು ಅಂತಾರಾಷ್ಟ್ರೀಯ ಕೋರ್ಟ್ ಸಾರಸಗಟಾಗಿ ತಿರಸ್ಕರಿಸಿ, ಪಾಕಿಸ್ತಾನ ಸೇನಾ ಕೋರ್ಟ್ ಜಾಧವ್ ಗೆ ವಿಧಿಸಿದ್ದ ಗಲ್ಲುಶಿಕ್ಷೆಗೆ ಅಂತಿಮ ತೀರ್ಪು ನೀಡುವರೆಗೂ ತಡೆಯಾಜ್ಜೆ ನೀಡಿದೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಭಾರೀ ಮುಖಭಂಗಕ್ಕೊಳಗಾಗಿದೆ.

Advertisement

ನೆದರ್ಲೆಂಡ್ ನ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ 11 ಮಂದಿ ನ್ಯಾಯಮೂರ್ತಿಗಳ ಪೀಠವು ತೀರ್ಪನ್ನು ಗುರುವಾರ ಪ್ರಕಟಿಸಿದೆ. 2017ರ ಆಗಸ್ಟ್ ನಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಜಾಧವ್ ಕುರಿತು ಅಂತಿಮ ತೀರ್ಪು ಪ್ರಕಟಿಸಲಿದೆ. ಪಾಕಿಸ್ತಾನ ಜಾಧವ್ ಭೇಟಿಗೆ ಅವಕಾಶ ನೀಡದೆ ನಿಯಮ ಉಲ್ಲಂಘಿಸಿದೆ. ಹಾಗಾಗಿ ಜಾಧವ್ ಗೆ ಗಲ್ಲುಶಿಕ್ಷೆ ಜಾರಿಯಾಗದಂತೆ ಪಾಕಿಸ್ತಾನ ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕೆಂದು ಐಸಿಜೆ ಆದೇಶ ನೀಡಿದೆ.

ಸೋಮವಾರವಷ್ಟೇ ಭಾರತ ಮತ್ತು ಪಾಕಿಸ್ತಾನದ ಪರ ವಕೀಲರು ಅಂತಾರಾಷ್ಟ್ರೀಯ ಕೋರ್ಟ್‌ ಮುಂದೆ ತಮ್ಮ
ವಾದಗಳನ್ನು ಮಂಡಿಸಿದ್ದರು. ವಿಚಾರಣೆ ವೇಳೆ ಭಾರತವನ್ನು ಪ್ರತಿನಿಧಿಸಿದ ನ್ಯಾಯವಾದಿ ಹರೀಶ್‌ ಸಾಳ್ವೆ ಅವರು,
ಕುಲಭೂಷಣ್‌ಗೆ ನೀಡಿರುವ ಶಿಕ್ಷೆಯನ್ನು ಕೂಡಲೇ ರದ್ದು ಮಾಡುವಂತೆ ಮತ್ತು ಪಾಕಿಸ್ತಾನದ ಕ್ರಮವನ್ನು ಅಕ್ರಮ
ಎಂದು ಘೋಷಿಸುವಂತೆ ಮನವಿ ಮಾಡಿದ್ದರು.

ಏತನ್ಮಧ್ಯೆ, ಭಾರತ ಮತ್ತು ಪಾಕಿಸ್ತಾನ ನಡುವಣ ಶಾಂತಿ ಮಾತುಕತೆಗೆ ಭಾರತ ಸಹಕರಿಸುತ್ತಿಲ್ಲ. ಪಾಕ್‌ ಮಾತುಕತೆಗೆ ಸಿದ್ಧವಿದೆ. ಆದರೆ ಭಾರತ ಹಳಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಅಮೆರಿಕದಲ್ಲಿನ ಪಾಕ್‌ ರಾಯಭಾರಿ ಐಜಾಜ್‌ ಅಹಮದ್‌ ಚೌಧರಿ ಆರೋಪಿಸಿದ್ದರು.

ಏನಿದು ಪ್ರಕರಣ:
ಗೂಢಚಾರಿಕೆ ಆರೋಪದಲ್ಲಿ ಪಾಕಿಸ್ತಾನ ಸೇನಾ ನ್ಯಾಯಾಲಯ ಕುಲಭೂಷಣ್ ಜಾಧವ್ ಗೆ ಗಲ್ಲುಶಿಕ್ಷೆ ವಿಧಿಸಿತ್ತು. ಈ ಸಂಬಂಧ ಜಾಧವ್ ಗೆ ಗಲ್ಲುಶಿಕ್ಷೆ ನೀಡಬಾರದೆಂದು ಕೋರಿ ಭಾರತ ಸರ್ಕಾರ ನೆದರ್ಲಾಂಡ್ ನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾ.ರೋನಿ ಅಬ್ರಹಾಂ ನೇತೃತ್ವದ 11 ನ್ಯಾಯಮೂರ್ತಿಗಳ ಪೀಠ ವಾದ, ವಿವಾದ ಆಲಿಸಿದ ಬಳಿಕ ಮೇ9ರಂದು ಜಾಧವ್ ಗಲ್ಲುಶಿಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. 

Advertisement

ಐಸಿಜೆ ತೀರ್ಪಿನಲ್ಲಿ ಹೇಳಿರುವುದೇನು?
ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿರುವ ಸಂದರ್ಭ ವಿವಾದಾತ್ಮಕವಾಗಿದೆ. ಜಾಧವ್ ಪ್ರಕರಣ ಅಂತಾರಾಷ್ಟ್ರೀಯ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂಬ ಪಾಕ್ ಹೇಳಿಕೆಯನ್ನು ಐಸಿಜೆ ತಿರಸ್ಕರಿಸಿದೆ.  ಜಾಧವ್ ಗೂಢಚಾರನೆಂಬ ಆರೋಪ ಸಾಬೀತಾಗುವುದಿಲ್ಲ. ವಿಯೆನ್ನಾ ಒಪ್ಪಂದದ ಬಗ್ಗೆ ಭಾರತ ಮತ್ತು ಪಾಕ್ ಗಮನ ಸೆಳೆದ ನ್ಯಾಯಾಧೀಶರು, ಜಾಧವ್ ಭೇಟಿಗೆ ಪಾಕಿಸ್ತಾನ ರಾಜತಾಂತ್ರಿಕ ಅವಕಾಶವನ್ನು ನೀಡಬೇಕಿತ್ತು ಎಂದು ತಿಳಿಸಿದೆ.

ಭಾರತದ ವಾದ:
2016ರಲ್ಲಿ ಜಾಧವ್ ಅವರನ್ನು ಇರಾನ್ ನಲ್ಲಿ ಬಂಧಿಸಲಾಗಿತ್ತು.
ಬೇಹುಗಾರಿಕೆ ಆರೋಪ ಸುಳ್ಳು, ಬಂಧನದ ಬಗ್ಗೆ ಮಾಹಿತಿಯೇ ಕೊಟ್ಟಿಲ್ಲ
ಭಾರತ 16 ಬಾರಿ ಮನವಿ ಸಲ್ಲಿಸಿದರೂ ಪಾಕ್ ತಿರಸ್ಕರಿಸಿತ್ತು
ಸುಳ್ಳು ಆರೋಪದಲ್ಲಿ ಬಂಧಿಸಲಾಗಿದೆ, ಪಾಕ್ ವಿಯೆನ್ನಾ ಒಪ್ಪಂದ ಉಲ್ಲಂಘಿಸಿದೆ.
ಕಾನ್ಸುಲರ್ ಕಾನೂನಿನ ಹಕ್ಕಿನ ಆಧಾರದ ಮೇಲೆ ಮನವಿ
ಯಾವುದೇ ದಾಖಲೆ ನೀಡಿಲ್ಲ 
ವಿಚಾರಣೆ ಮುಗಿಯುವ ಮುನ್ನವೇ ಗಲ್ಲುಶಿಕ್ಷೆ

ಪಾಕಿಸ್ತಾನದ ವಾದ:
ಜಾಧವ್ ಪಾಸ್ ಪೋರ್ಟ್ ನಲ್ಲಿ ಮುಸ್ಲಿಂ ಸೇರಿ 2 ಹೆಸರು ಇರುವುದು ಪತ್ತೆ.
ಭಾರತೀಯ ಎಂಬುದನ್ನೇ ಸಾಬೀತುಪಡಿಸಿಲ್ಲ
ಭಾರತ ಆರೋಪ ಸಾಬೀತುಪಡಿಸುವಲ್ಲಿ ವಿಫಲವಾಗಿದೆ
ಅಪಹರಿಸಲಾಗಿದೆ ಎಂಬ ಆರೋಪ ಸುಳ್ಳು
ನಾವು ದೇಶದ ಹಿತಾಸಕ್ತಿ ಕಾಪಾಡಿದ್ದೇವೆ, ಇದು ನಮ್ಮ ದೇಶದ ಭದ್ರತೆಯ ವಿಚಾರ
ವಿಯೆನ್ನಾ ಒಪ್ಪಂದ ಇದಕ್ಕೆ ಅನ್ವಯವಾಗಲ್ಲ, ಹಾಗಾಗಿ ಜಾಧವ್ ಗಲ್ಲುಶಿಕ್ಷೆ ಪ್ರಕರಣ ಐಸಿಜೆ ಕೋರ್ಟ್ ವ್ಯಾಪ್ತಿಗೆ ಬರಲ್ಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next