Advertisement

ಕುಲಶೇಖರ ಹೋಲಿಕ್ರಾಸ್‌ ಚರ್ಚ್‌ : ಸ್ವಚ್ಛ ಕೋರ್ಡೆಲ್‌ ಅಭಿಯಾನ

10:00 AM Mar 12, 2018 | Team Udayavani |

ಮಹಾನಗರ: ಕುಲಶೇಖರದ (ಕೋರ್ಡೆಲ್‌) ಹೋಲಿ ಕ್ರಾಸ್‌ ಚರ್ಚ್‌ ಆಶ್ರಯದಲ್ಲಿ, ಕಿರು ಕ್ರೈಸ್ತ ಸಮುದಾಯದ ಸೇವಾ ಕಾರ್ಯಕ್ರಮಗಳ ಪ್ರಯುಕ್ತ, ‘ನಮ್ಮ ನಡೆ ಸ್ವಚ್ಛತೆಯ ಕಡೆ’ ಎಂಬ ಧ್ಯೇಯದೊಂದಿಗೆ ‘ಸ್ವಚ್ಛ ಕೋರ್ಡೆಲ್‌ ಅಭಿಯಾನ – 2018’ ರವಿವಾರ ನಡೆಯಿತು. ಬೆಳಗ್ಗೆ 7 ಗಂಟೆಗೆ ಕುಲಶೇಖರ ಚರ್ಚ್‌ ಮಹಾದ್ವಾರದ ಬಳಿ, ಧರ್ಮಗುರು ವಂ| ವಿಕ್ಟರ್‌ ಮಚಾದೊ ಅವರ ನೇತೃತ್ವದಲ್ಲಿ ಮೇಯರ್‌ ಭಾಸ್ಕರ್‌ ಕೆ. ಅವರು ಕಾರ್ಯಕ್ರಮ ಉದ್ಘಾಟಿಸಿದರು.

Advertisement

ಅಭಿಯಾನದ ಅಂಗವಾಗಿ ಬಿಕರ್ನಕಟ್ಟೆ ಬಾಲಯೇಸು ಪುಣ್ಯ ಕ್ಷೇತ್ರದ ಮಹಾದ್ವಾರದಿಂದ ಪ್ರಾರಂಭಗೊಂಡು ಚೌಕಿ ವರೆಗಿನ ರಾಷ್ಟ್ರೀಯ ಹೆದ್ದಾರಿ 169ರ ಎರಡೂ ಬದಿಗಳನ್ನು ಶುಚಿಗೊಳಿಸಲಾಯಿತು. ಮೇಯರ್‌ ಭಾಸ್ಕರ್‌ ಕೆ. ಮಾತನಾಡಿ, ಕುಲಶೇಖರ ಚರ್ಚ್‌ನ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡ ಕುಲಶೇಖರ ಪರಿಸರದ ನಾಗರಿಕರನ್ನು ಅಭಿನಂದಿಸಿದರು.

ಚರ್ಚ್‌ ಪಾಲನಾ ಮಂಡಳಿಯ ಉಪಾಧ್ಯಕ್ಷ ಲೋಯ್‌ ನೊರೋನ್ಹಾ, ಕಾರ್ಯದರ್ಶಿ ಸತುರ್ನಿನ್‌ ಮೊಂತೇರೊ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 500ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಡೋಲ್ಫಿ ಡಿ’ಸೋಜಾ ನಿರ್ವಹಿಸಿದರು. 

ಸ್ವಚ್ಛತೆ ಎಲ್ಲರ ಆದ್ಯ ಕರ್ತವ್ಯ
ಶಾಸಕ ಜೆ. ಆರ್‌. ಲೋಬೋ ಮಾತನಾಡಿ, ಸ್ವಚ್ಛತೆಯು ದೇವರ ಭಕ್ತಿಗೆ ಸಮಾನ; ಮಂಗಳೂರನ್ನು ಸ್ವಚ್ಛವಾಗಿರಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಇಂತಹ ಕಾರ್ಯಕ್ಕೆ ಜನತೆ ಸಹಕರಿಸುವುದರಿಂದ ನಗರದ ಪ್ರಗತಿಗೆ ಪ್ರೇರಣೆ ದೊರೆಯುತ್ತದೆ. ಇಂತಹ ಸ್ವಚ್ಛತಾ ಅಭಿಯಾನವು ಮುಂದುವರಿಯಲಿ ಎಂದು ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next