Advertisement

ಕುಲಶೇಖರ-ಮೂಡಬಿದಿರೆ ಹೈವೇಗೆ ಕೊನೆಗೂ ಮುಕ್ತಿ ?

09:10 AM Nov 30, 2017 | |

ಮಂಗಳೂರು: ಕಳೆದೊಂದು ದಶಕದಿಂದ ಡಾಮರನ್ನೇ ಕಾಣದೆ ಮೃತ್ಯುಕೂಪದಂತಿದ್ದ ಕುಲಶೇಖರ- ಮೂಡಬಿದಿರೆ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಕೊನೆಗೂ ಹೆದ್ದಾರಿ ಇಲಾಖೆ ಮುಂದಾಗಿದೆ. ಸುಮಾರು 17.5 ಕೋಟಿ ರೂ. ವೆಚ್ಚದಲ್ಲಿ 35 ಕಿ.ಮೀ. ದೂರದ ಈ ರಸ್ತೆ ಅಭಿವೃದ್ಧಿಯಾಗಲಿದೆ. 

Advertisement

ಈ ಪ್ರಮುಖ ರಸ್ತೆ ನಿರ್ವಹಣೆ ಇಲ್ಲದೆ ಅಪಾಯಕಾರಿ ಸ್ಥಿತಿ ತಲುಪಿತ್ತು. ರಸ್ತೆ ಕೆಟ್ಟಿದ್ದರಿಂದ ಈಗಾಗಲೇ ಅನೇಕ ಅಮಾಯಕ ವಾಹನ ಸವಾರರು ಪ್ರಾಣವನ್ನೂ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ “ಉದಯವಾಣಿ’ಯಲ್ಲಿ “ಜನಪ್ರತಿನಿಧಿಗಳೇ ಈ ರಸ್ತೆ ರಿಪೇರಿಗೆ ಇನ್ನೆಷ್ಟು ದುರಂತಗಳು ಬೇಕು?’ ಎಂಬ ತಲೆಬರಹದೊಂದಿಗೆ ಎರಡು ದಿನಗಳ ಹಿಂದೆಯಷ್ಟೇ ಸಚಿತ್ರ ವರದಿ ಪ್ರಕಟಿಸಿತ್ತು. 

ಕಿತ್ತುಹೋಗಿರುವ ಡಾಮರು, ಕಾಂಕ್ರೀಟ್‌ ಮತ್ತು ಅಪಾಯಕಾರಿ ಸ್ಥಿತಿಯಲ್ಲಿರುವ ಗುರುಪುರ ಸೇತುವೆ ದುರಸ್ತಿಗೆ ಸ್ಥಳೀಯರು ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಏನೇ ಆದರೂ ಹೆದ್ದಾರಿ ಇಲಾಖೆ  ಇದಕ್ಕೆ ತಲೆಕೆಡಿಸಿ ಕೊಂಡಿರ ಲಿಲ್ಲ. ಆದರೆ ವರದಿ ಪ್ರಕಟಗೊಂಡ ಕೂಡಲೇ ಇಲಾಖೆ ಎಚ್ಚೆತ್ತು ದುರಸ್ತಿಗೊಳಿಸುವ ಜತೆಗೆ ಕುಲಶೇಖರ- ಮೂಡಬಿದಿರೆ ರಸ್ತೆ  ಪೂರ್ಣ ಡಾಮರೀಕರಣಕ್ಕೆ ಯೋಜನೆ ರೂಪಿಸಿದೆ.   

17.5 ಕೋ.ರೂ. ಪ್ರಸ್ತಾವನೆ
ದ.ಕ. ಸಂಸದ ನಳಿನ್‌ಕುಮಾರ್‌ ಕಟೀಲು ಅವರು ಮಂಗಳೂರು- ಮೂಡಬಿದಿರೆ ವರೆಗಿನ 35 ಕಿ.ಮೀ.ಉದ್ದದ ಹೆದ್ದಾರಿಗೆ ಪೂರ್ತಿ ಡಾಮರೀ ಕರಣ ಕ್ಕಾಗಿ ಹೆದ್ದಾರಿ ಇಲಾಖೆಯ ಮೂಲಕ 17.5 ಕೋ.ರೂ. ಪ್ರಸ್ತಾವನೆ ಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿ ದ್ದಾರೆ. ಸಾರಿಗೆ ಇಲಾಖೆ ಅನುದಾನ ನೀಡಿದ ತತ್‌ಕ್ಷಣ ಟೆಂಡರ್‌ ಕಾರ್ಯ ನಡೆದು ಕಾಮಗಾರಿ ಆರಂಭಗೊಳ್ಳಲಿದೆ. ಇದರ ಜತೆಗೆ ಗುರುಪುರದಲ್ಲಿ ಎನ್‌ಎಚ್‌ಎಐ ನಿರ್ಮಿಸುವ ಸೇತುವೆಯ ಜತೆಗೆ ಹೆದ್ದಾರಿ ಇಲಾಖೆಯ ಮೂಲಕವೂ ಒಂದು ಹೊಸ ಸೇತುವೆ ನಿರ್ಮಾಣ ವಾಗಲಿದೆ. ಇದಕ್ಕಾಗಿ ಕೇಂದ್ರ ಸರ ಕಾರ 50 ಕೋ.ರೂ. ಅನು ದಾನ ವನ್ನು ಮೀಸಲಿಟ್ಟಿದೆ’ ಎಂದು ಹೆದ್ದಾರಿ ಇಲಾಖೆಯ ಸ. ಕಾರ್ಯ ನಿರ್ವಾ ಹಕ ಎಂಜಿನಿಯರ್‌ ಯಶವಂತ ಕುಮಾರ್‌ “ಉದಯವಾಣಿ’ಗೆ ತಿಳಿಸಿದ್ದಾರೆ. 

ನ. 30: ರಾತ್ರಿ ಸೇತುವೆ ಬಂದ್‌
ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಂಗಳೂರು ಉಪ ವಿಭಾಗದ ವತಿಯಿಂದ ಹೆದ್ದಾರಿಯ ತೇಪೆ ಕಾರ್ಯ ಕುಲಶೇಖರದಿಂದ ಆರಂಭ ಗೊಂಡಿದ್ದು, ಪ್ರಸ್ತುತ ಕಾಮಗಾರಿ ಗುರುಪುರ ಸೇತುವೆಯ ಬಳಿ ತಲುಪಿದೆ. ಈ ಕಾರಣ ನ. 30ರಂದು ರಾತ್ರಿ 10ರಿಂದ 12ರ ವರೆಗೆ ಸೇತುವೆ ಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್‌ ಆಗ ಲಿದೆ. ಈ ವೇಳೆ ಯಲ್ಲಿ  ಜನರು ಪರ್ಯಾಯ ರಸ್ತೆಯಲ್ಲಿ ಸಂಚರಿಸ ಬೇಕಿದೆ ಎಂದು ಇಲಾಖೆಯ ಎಂಜಿ ನಿಯರ್‌ಗಳು ತಿಳಿಸಿದ್ದಾರೆ. 

Advertisement

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next