Advertisement
ಕುಲಾಲ ಸಂಘ ಮುಂಬಯಿ ಇದರ 87 ನೇ ವಾರ್ಷಿಕ ಮಹಾಸಭೆಯು ಸಂಘದ ವಡಾಲದ ಎನ್‌ಕೆಇಎಸ್ ಹೈಸ್ಕೂಲ್ ಸಭಾಂಗಣದಲ್ಲಿ ಜರಗಿದ್ದು, ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಸಮಾಜಪರ ಯೋಜನೆಗಳ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳುವಂತೆ ವಿನಂತಿಸಿದರು.
Related Articles
Advertisement
ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕಲ್ಲಮಾರು ಗೋಪಾಲ್ ಬಂಗೇರ ಅವರು ಮಾತನಾಡಿ, ಸಂಘದ ಥಾಣೆಯಲ್ಲಿರುವ ಜಾಗದಲ್ಲಿ ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಯೋಜನೆ ನಿರ್ಮಾಣವಾಗಲಿದೆ. ಮಂಗಳೂರಿನ ಕುಲಾಲ ಭವನ ಶೀಘ್ರಗತಿಯಲ್ಲಿ ಕೆಲಸ ನಡೆಯುತ್ತಿದ್ದು, ಸಮಾಜ ಬಾಂಧವರು ಸಮಾನತೆಯ ಮನಸ್ಸಿನಿಂದ ಸಂಘದ ಯೋಜನೆಗೆ ಸಹಕರಿಸಬೇಕು ಎಂದು ನುಡಿದರು.
ಅಮೂಲ್ಯ ತ್ತೈಮಾಸಿಕದ ಉಪಸಂಪಾದಕ ಶಂಕರ ವೈ. ಮೂಲ್ಯ ಅವರು ಮಾತನಾಡಿ, ಸಂಘದ ಮುಖವಾಣಿ ಅಮೂಲ್ಯ ತ್ತೈಮಾಸಿಕವು ಹಲವಾರು ವಿಶೇಷತೆಗಳಿಂದ ಕೂಡಿದ್ದು, ಹೆಚ್ಚಿನ ಸದಸ್ಯರ ವಿಳಾಸ ಸರಿಯಿಲ್ಲದೆ ವಾಪಾಸಾಗುತ್ತಿದೆ. ಸದಸ್ಯರು ಸಂಘದ ಕಚೇರಿಯಲ್ಲಿ ಸರಿಯಾದ ವಿಳಾಸವನ್ನು ನೀಡಬೇಕು. ಅಮೂಲ್ಯ ತ್ತೈಮಾಸಿಕದ ಸದಸ್ಯತನವನ್ನು ಎಲ್ಲರೂ ಪಡೆದುಕೊಳ್ಳುವಂತೆ ವಿನಂತಿಸಿದರು.
ಸಭಿಕರ ಪರವಾಗಿ ಲಕ್ಷಣ್ ಪಿ. ಮೂಲ್ಯ ಮತ್ತು ಮಮತಾ ಜಿ. ಸಾಲ್ಯಾನ್ ಮಾತನಾಡಿ ಸಲಹೆ-ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ಸಂಘದ ಇತರ ಪದಾಧಿಕಾರಿಗಳಾದ ಸುನೀಲ… ಕುಲಾಲ್, ರಾಘು ಬಿ. ಮೂಲ್ಯ, ಚಂದ್ರಹಾಸ ಎನ್. ಸಾಲ್ಯಾನ್, ಸದಸ್ಯರಾದ ಪಿ. ಶೇಖರ ಮೂಲ್ಯ, ಕೆ. ಗೋಪಾಲ… ಬಂಗೇರ, ರಾಘು ಮೂಲ್ಯ, ಪಿ. ಉಮೇಶ್ ಬಂಗೇರ, ಜಗದೀಶ್ ಆರ್. ಬಂಜನ್, ಹರೀಶ್ ಜಿ. ಬಂಗೇರ, ಆಶೀಶ್ ವಿ. ಕರ್ಕೇರ, ಶಂಕರ್ ವೈ. ಮೂಲ್ಯ, ಕರುಣಾಕರ ಬಿ. ಸಾಲ್ಯಾನ್, ಬಿ. ಅಣ್ಣಿ ಮೂಲ್ಯ, ಸುರೇಶ್ ಕೆ. ಕುಲಾಲ್, ಶೀನ ಮೂಲ್ಯ, ನ್ಯಾಯವಾದಿ ಉಮಾನಾಥ್ ಕೆ. ಮೂಲ್ಯ, ಅಶ್ವಿನ್ ಎ. ಬಂಗೇರ, ಸ್ಥಳೀಯ ಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಸುಂದರ್ ಮೂಲ್ಯ, ಆನಂದ ಬಿ. ಮೂಲ್ಯ, ಪಿ. ಶೇಖರ್ ಮೂಲ್ಯ, ರಘು ಆರ್. ಮೂಲ್ಯ, ಶೇಖರ ಬಿ. ಮೂಲ್ಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್. ಗುಜರನ್, ಉಪಕಾರ್ಯಾಧ್ಯಕ್ಷೆ ಸುಚೇತಾ ಬಂಜನ್, ಕಾರ್ಯದರ್ಶಿ ಮಾಲತಿ ಜಯ ಅಂಚನ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಡಿ. ಐ. ಮೂಲ್ಯ ಅವರು ವಂದಿಸಿದರು.
ಸಂಘಕ್ಕೆ ದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಸದಸ್ಯರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡಮಾಡುವ ಸ್ಮಾರಕ ಪ್ರಶಸ್ತಿಗಳಾದ ದಿ| ಡಾ. ಎಚ್. ಎಂ. ಸುಬ್ಬಯ್ಯ ಸ್ಮರಣಾರ್ಥ ಟ್ರೋಫಿ, ದಿ| ಬಂಟ್ವಾಳ ಬಾಬು ಸಾಲ್ಯಾನ್ ಸ್ಮರಣಾರ್ಥ ರೋಲಿಂಗ್ ಟ್ರೋಫಿ, ದಿ| ಸುಂದರ ಕರ್ಮರನ್ ಸ್ಮರಣಾರ್ಥ ಟ್ರೋಫಿ, ದಿ| ಪಿ. ಕೆ. ಸಾಲ್ಯಾನ್ ಸ್ಮರಣಾರ್ಥ ಟ್ರೊಫಿಯನ್ನು ಕ್ರಮವಾಗಿ ಸೀನ ಜಿ. ಮೂಲ್ಯ, ಮಾಲತಿ ಜೆ. ಅಂಚನ್, ಶ್ರುತಿ ಜಯ ಅಂಚನ್ ಮತ್ತು ದಯಿತ ಹರೀಶ್ ಬಂಗೇರ ಇವರಿಗೆ ನೀಡಿ ಗೌರವಿಸಲಾಯಿತು. ಸಂಘದ ಹಿರಿಯರಾದ ಭೋಜ ಬಂಗೇರ, ಪನ್ವೇಲ್ ಶೀನ ಮೂಲ್ಯ ದಂಪತಿಯನ್ನು, ಜಯಲಕ್ಷ್ಮಿ, ಪದ್ಮನಾಭ ಮತ್ತು ಹೇಮಲತಾ ಕರುಣಾಕರ ಮೂಲ್ಯ ಇವರನ್ನೂ ಸಮ್ಮಾನಿಸಲಾಯಿತು. ದೇವದಾಸ್ ಕುಲಾÇ, ರಾಘು ಡಿ. ಮೂಲ್ಯ ಸಮ್ಮಾನಿತರನ್ನು ಪರಿಚಯಿಸಿದರು.