Advertisement

ಕುಲಾಲ ಸಮಾಜಕ್ಕೆ ಒಡಿಯೂರು ಶ್ರೀಗಳ ಸೇವೆ ಅಪಾರ: ದೇವದಾಸ್‌ ಎಲ್‌. ಕುಲಾಲ್‌

02:26 PM Sep 05, 2021 | Team Udayavani |

ನವಿಮುಂಬಯಿ: ಶ್ರೀಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಜನ್ಮ ಷಷ್ಠ್ಯಬ್ದ ಸಂಭ್ರಮದ ಜ್ಞಾನ ವಾಹಿನಿ-2021 ಪ್ರಯುಕ್ತ ನೆರೂಲ್‌ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದ ಭವಾನಿ ದೇರಣ್ಣ ಶೆಟ್ಟಿ ಜ್ಞಾನ ಮಂದಿರದ ಶ್ರೀ ಗುರುದೇವಾನಂದ ಸಭಾಗೃಹದಲ್ಲಿ ಕುಲಾಲ ಸಂಘ ಮುಂಬಯಿ ವತಿಯಿಂದ 58ನೇ ಕಾರ್ಯಕ್ರಮದ ಅಂಗವಾಗಿ ಭಕ್ತ ಕುಂಬಾರ ಹರಿಕಕಥಾ ಕಾಲಕ್ಷೇಪ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

Advertisement

ಹರಿಕಥಾ ವಿದ್ವಾನ್‌ ವಿಶ್ವೇಶದಾಸ ಕೈರಬೆಟ್ಟು ವಿಶ್ವನಾಥ್‌ ಭಟ್‌ ಅವರಿಂದ ಹರಿಕಥಾ ಕಾಲಕ್ಷೇಪ ನಡೆಯಿತು. ಜನಾರ್ದನ್‌ ಸಾಲ್ಯಾನ್‌ ತಬಲಾದಲ್ಲಿ ಹಾಗೂ ಶೇಖರ್‌ ಸಸಿಹಿತ್ಲು ಶ್ರುತಿಯಲ್ಲಿ ಸಹಕರಿಸಿದರು. ಹರಿಕಥೆ ಪ್ರಸ್ತುತಪಡಿಸಿದ ಕೈರಬೆಟ್ಟು ವಿಶ್ವನಾಥ್‌ ಭಟ್‌ ಅವರನ್ನು ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ದೇವದಾಸ್‌ ಎಲ್‌. ಕುಲಾಲ್‌ ಗೌರವಿಸಿ ಬಳಿಕ ಮಾತನಾಡಿ, ಕುಲಾಲ ಸಮಾಜದ ಮೇಲೆ ಅಪಾರ ಗೌರವ ಹೊಂದಿರುವ ಒಡಿಯೂರು ಶ್ರೀಗಳ 60ನೇ ಹುಟ್ಟುಹಬ್ಬದ ಆಚರಣೆ ಪ್ರಯುಕ್ತ ಹರಿಕಥೆ ಸೇವೆ ನೀಡುವ ಮೂಲಕ ಹುಟ್ಟುಹಬ್ಬದ ಶುಭಾಶಯದ ಸೇವೆಯನ್ನು ಕುಲಾಲ ಸಂಘವು ನೀಡಿದೆ. ಶ್ರೀಗಳ ಸಮಾಜಪರ ಕಾರ್ಯಕ್ರಮಗಳು ಅನುಪಮವಾಗಿದೆ ಎಂದು ತಿಳಿಸಿ, ಸ್ವಾಮೀಜಿಯವರು ಕುಲಾಲ ಸಮಾಜಕ್ಕೆ ನೀಡಿದ ಸೇವಾ ಕಾರ್ಯಗಳನ್ನು ಸ್ಮರಿಸಿಕೊಂಡರು.

ಇದನ್ನೂ ಓದಿ:ಕಡಿಮೆ ಅಪಾಯದ ಭೂಕಂಪ, ನಿರ್ಭಯವಾಗಿರಿ: ವಿಜಯಪುರ ಜಿಲ್ಲಾಡಳಿತದ ಅಭಯ

ಜ್ಯೋತಿ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌ ಅವರು ಒಡಿಯೂರು ಶ್ರೀಗಳ ಚಿಂತನೆ ಮತ್ತು ಸಾಧನೆಗಳನ್ನುಗಳನ್ನು ಸ್ಮರಿಸಿ ಮಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಬಹುಕೋಟಿ ರೂ. ವೆಚ್ಚದ ಕುಲಾಲ ಭವನದ ನಿರ್ಮಾಣಕ್ಕೆ ಸ್ವಾಮೀಜಿ ಶಂಕುಸ್ಥಾಪನೆ ಮಾಡಿ ನಮ್ಮನ್ನು ಹಾರೈಸಿದ್ದಾರೆ. ಅವರ ಮಾರ್ಗದರ್ಶನ ಮತ್ತು ಆಶೀರ್ವಾದದಿಂದ ನಮ್ಮ ಕುಲಾಲ ಸಂಘ ಮತ್ತು ಜ್ಯೋತಿ ಕ್ರೆಡಿಟ್‌ ಸೊಸೈಟಿ ಬೆಳೆದಿದೆ ಎಂದರು.

ಕುಲಾಲ ಸಂಘದ ಉಪಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು ಮಾತನಾಡಿ, ಶ್ರೀಗಳ ಹುಟ್ಟುಹಬ್ಬವನ್ನು ಹರಿಕಥೆ, ಭಜನೆ ಮೂಲಕ ಆಚರಿಸುವುದಕ್ಕೆ ಅವಕಾಶ ಮಾಡಿಕೊಟ್ಟ ಶ್ರೀಗಳ ಶಿಷ್ಯವೃಂದದವರಿಗೆ ಮತ್ತು ಪಾಲ್ಗೊಂಡ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Advertisement

ಈ ಸಂದರ್ಭ ಕುಲಾಲ ಸಂಘದ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್‌, ಕೋಶಾಧಿಕಾರಿ ಜಯ ಅಂಚನ್‌ ಮತ್ತು ಪದಾಧಿಕಾರಿಗಳು, ಮಹಿಳಾ ವಿಭಾಗದ ಕಾರ್ಯದರ್ಶಿ ಮಾಲತಿ ಅಂಚನ್‌ ಮತ್ತು ಪದಾಧಿಕಾರಿಗಳು, ಸಂಘದ ಮುಖವಾಣಿ ಅಮೂಲ್ಯ ಸಂಪಾದಕ ಶಂಕರ್‌ ಮೂಲ್ಯ ವಿರಾರ್‌, ಕುಲಾಲ ಸಂಘದ ನವಿಮುಂಬಯಿ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ವಾಸು ಬಂಗೇರ, ಮಾಜಿ ಕಾರ್ಯಧ್ಯಕ್ಷ ಶೇಖರ್‌ ಮೂಲ್ಯ ಪಿ., ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ ಇದರ ಪದಾಧಿಕಾರಿಗಳು ಹಾಗೂ ಸದಸ್ಯರು, ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಘಟಕ ಇದರ ಪದಾಧಿಕಾರಿಗಳು ಹಾಗೂ ಸದಸ್ಯರು, ಶ್ರೀಗಳ ಷಷ್ಠ್ಯಬ್ದ ಕಾರ್ಯಕ್ರಮದ ರೂವಾರಿ ದಾಮೋದರ ಶೆಟ್ಟಿ. ಮತ್ತು ಕಾರ್ಯಕ್ರಮ ನಿರ್ವಾಹಕರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ಗುರು ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next