Advertisement

ಕುಲಾಲ ಸಂಘದ ಜ್ಯೋತಿ ಕೋ ಆಪ್‌. ಕ್ರೆಡಿಟ್‌ ಸೊಸೈಟಿ  ಮಹಾಸಭೆ

04:05 PM Aug 16, 2018 | |

ಮುಂಬಯಿ: ಕುಲಾಲ ಸಂಘ ಮುಂಬಯಿ ಸಂಚಾಲಕತ್ವದಲ್ಲಿರುವ ಆರ್ಥಿಕ ಸಂಸ್ಥೆ ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯು ಇಂದು ಮುಂಬಯಿ ತುಳು-ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇದಕ್ಕೆ ಗ್ರಾಹಕರು, ಶೇರುದಾರರ ಸಹಕಾರ ಹಾಗೂ ಬೆಂಬಲವೇ ಪ್ರಮುಖ ಕಾರಣವಾಗಿದೆ. ನಮ್ಮ ಸದಸ್ಯರುಗಳ ಸಂಖ್ಯೆಯನ್ನು ಹೆಚ್ಚಿಸಿ ವ್ಯವಹಾರಗಳನ್ನು ಅಧಿಕಗೊಳಿಸುವುದು, ಶಾಖೆಗಳನ್ನು ವಿಸ್ತರಿಸುವುದು ಇನ್ನಿತರ ಯೋಜನೆಗಳು ನಮ್ಮ ಮುಂದಿದ್ದು, ಇದಕ್ಕೆ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ ಎಂದು ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌ ಅವರು ನುಡಿದರು.
ಆ. 13 ರಂದು ಸಯಾನ್‌ ನಿತ್ಯಾನಂದ ಸಭಾಗೃಹದಲ್ಲಿ ನಡೆದ ಕುಲಾಲ ಸಂಘ ಮುಂಬಯಿ ಸಂಚಾಲಕತ್ವದ ಪ್ರತಿಷ್ಠಿದ ಆರ್ಥಿಕ ಸಂಸ್ಥೆ ಜ್ಯೋತಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ 37 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಲ ಪಡೆದವರು ಸಾವನ್ನು ಸರಿಯಾದ ಸಮಯಕ್ಕೆ ಹಿಂತಿರುಗಿಸಬೇಕು. ಆಗ ಸಂಸ್ಥೆ ಬಲಗೊಳ್ಳುತ್ತದೆ. ಈ ವರ್ಷ ಶೇ. 12 ರಷ್ಟು ಲಾಭಾಂಶವನ್ನು ಗ್ರಾಹಕರಿಗೆ ನೀಡಲಾಗುವುದು. ಇದನ್ನು ಹೆಚ್ಚಿಸುವುದರ ಬಗ್ಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

Advertisement

ಪ್ರಾರಂಭದಲ್ಲಿ ಕಾರ್ಯಾಧ್ಯಕ್ಷರು ಹಾಗೂ ನಿರ್ದೇಶಕರು ದೀಪಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಕಾರ್ಯದರ್ಶಿ ದೇವದಾಸ್‌ ಎಲ್‌. ಕುಲಾಲ್‌ ಅವರು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯು ವರದಿ ಮತ್ತು ಲೆಕ್ಕಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಿತು. ಇದೇ ಸಂದರ್ಭದಲ್ಲಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಸಮ್ಮಾನಿಸಲಾಯಿತು.
ಲೆಕ್ಕ ಪರಿಶೋಧಕರಾಗಿ ಆರ್‌ಎವಿ ಆ್ಯಂಡ್‌ ಕಂಪೆನಿಯನ್ನು ಪುನ:ರಾಯ್ಕೆಗೊಳಿಸಲಾಯಿತು. ಸಭಿಕರ ಪರವಾಗಿ ಎಂ. ಪಿ. ಪೈ, ಜಿ. ಎಸ್‌. ನಾಯಕ್‌, ಶಂಕರ್‌ ವೈ. ಮೂಲ್ಯ, ಜಯ ಎಸ್‌. ಅಂಚನ್‌, ರಾಘು ಎ. ಮೂಲ್ಯ, ಸದಾನಂದ ಐ. ಸಾಲ್ಯಾನ್‌, ಲಕ್ಷ¾ಣ್‌ ಸಿ. ಮೂಲ್ಯ, ಮಮತಾ ಎಸ್‌. ಗುಜರನ್‌ ಹಾಗೂ ನಿರ್ದೇಶಕರಾದ ನ್ಯಾಯವಾದಿ ಉಮಾನಾಥ್‌ ಮೂಲ್ಯ, ಎಚ್‌. ಎಂ. ಥೋರತ್‌, ನ್ಯಾಯವಾದಿ ಸವಿನಾ ಎಸ್‌. ಕುಲಾಲ್‌ ಅವರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ವೇದಿಕೆಯಲ್ಲಿ ಸಂಸ್ಥೆಯ ಉಪ ಕಾರ್ಯಾಧ್ಯಕ್ಷ ಪಿ. ಶೇಖರ್‌ ಮೂಲ್ಯ, ಕೋಶಾಧಿಕಾರಿ ಭಾರತಿ ಪಿ. ಆಕ್ಯಾìನ್‌, ಡೊಂಬಯ್ಯ ಐ. ಮೂಲ್ಯ, ಚಂದು ಕೆ. ಮೂಲ್ಯ, ಬಾಬು ಜಿ. ಅಂಚನ್‌, ಸುರೇಖಾ ಆರ್‌. ಕುಲಾಲ್‌, ಗಿರೀಶ್‌ ವಿ. ಕರ್ಕೇರ, ರಾಜೇಶ್‌ ಎಸ್‌. ಬಂಜನ್‌, ಕರುಣಾಕರ ಬಿ. ಸಾಲ್ಯಾನ್‌ ಮೊದಲಾದವರು ಉಪಸ್ಥಿತರಿದ್ದರು. ಕುಲಾಲ ಸಂಘ ಮುಂಬಯಿ ಹಾಗೂ ಸಂಘದ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಗ್ರಾಹಕರು, ಶೇರುದಾರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.  

ವಿವಿಧ ಯೋಜನೆಗಳು  
ವರದಿ ವರ್ಷದಲ್ಲಿ ಸೊಸೈಟಿಯು ಸಿಬಂದಿ ವರ್ಗದವರಿಗೆ ಸ್ಟಾಫ್‌ ವೆಲ್ಫೆàರ್‌  ಸ್ಕೀಮ್‌ನಲ್ಲಿ ಲೀವ್‌ ಫೇಯರ್‌  ಕನ್‌ಸಿಷನನ್ನು ಪ್ರಾರಂಭಿಸಿದೆ. ಸೊಸೈಟಿಯಲ್ಲಿ 1 ಲಕ್ಷದಿಂದ 35 ಲಕ್ಷ ರೂ. ಗಳವರೆಗೆ ಸಾಲ ನೀಡುವ ವ್ಯವಸ್ಥೆಯಿದ್ದು, ಠೇವಣಿಗೆ ಶೇ. 8 ರಷ್ಟು ಬಡ್ಡಿದರ ಹಾಗೂ ಹಿರಿಯರಿಗೆ ಶೇ. 8.50 ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ಅದಲ್ಲದೆ ಕಡಿಮೆ ದರದ ಬಡ್ಡಿಯಲ್ಲಿ ಗೃಹಸಾಲ, ಶಿಕ್ಷಣಕ್ಕೆ ಸಾಲ ಇನ್ನಿತರ ಸೌಲಭ್ಯಗಳನ್ನು ನೀಡುತ್ತಿದೆ. ಜ್ಯೋತಿ ಡೈಲಿ ಡೆಪೋಸಿಟ್‌ ಸ್ಕೀಮ್‌ ಮತ್ತು ಮಾಸಿಕ ಡೆಪೋಸಿಟ್‌ ಮತ್ತು ಸೇವಿಂಗ್‌ ಬ್ಯಾಂಕ್‌ ಮುಖಾಂತರವೂ ಶೇ. 4 ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ಸೊಸೈಟಿಯ ಎಲ್ಲಾ ಯೋಜನೆಗಳನ್ನು ಸಮಾಜ ಬಾಂಧವರು, ತುಳು-ಕನ್ನಡಿಗರು ಮುಕ್ತವಾಗಿ ಪಡೆಯಬಹುದು ಎಂದು ಸಭೆಯಲ್ಲಿ ತಿಳಿಸಲಾಯಿತು.

5240 ಮಂದಿ ಸದಸ್ಯರು 
ಸೊಸೈಟಿಯಲ್ಲಿ ಒಟ್ಟು 5240 ಮಂದಿ ಸದಸ್ಯರಿದ್ದು, ಒಟ್ಟು ಶೇರು ಬಂಡವಾಳವು 292.76 ಲಕ್ಷ ರೂ. ಗಳನ್ನು ಹೊಂದಿದೆ. ಅಡ್ವಾನ್ಸ್‌ ವಿಭಾಗದಲ್ಲಿ 142.64 ಲಕ್ಷ ರೂ., ಡೆಪೋಸಿಟ್‌ ವಿಭಾಗದಲ್ಲಿ 237.35 ಲಕ್ಷ ರೂ. ಗಳನ್ನು ಹೊಂದಿದೆ. ಸೊಸೈಟಿಯ ಒಟ್ಟು ವ್ಯವಹಾರ 3162.80 ಲಕ್ಷ ರೂ. ಗಳಲ್ಲಿದ್ದು, ಎನ್‌ಪಿಎ ಶೇ. 4.98 ಹೊಂದಿರುವುದಲ್ಲದೆ, ಸೊಸೈಟಿಯ ನೆಟ್‌ ಪ್ರಾಫಿಟ್‌ 39.48 ಲಕ್ಷ ರೂ. ಗಳನ್ನು ಹೊಂದಿ, ವರದಿ ವರ್ಷದಲ್ಲಿ ಶೇ. 12 ರಷ್ಟು ಲಾಭಾಂಶವನ್ನು ಪಡೆದಿದೆ. ಸೊಸೈಟಿಯ ಕಾರ್ಯವ್ಯಾಪ್ತಿಯು ಮುಂಬಯಿ, ಥಾಣೆ, ನವಿಮುಂಬಯಿ, ಪುಣೆಯವರೆಗೆ  ವಿಸ್ತಾರಗೊಂಡಿದೆ.

Advertisement

  ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next