27 ರಂದು ಸಯಾನ್‌ನ ಆಜಾದ್ ಮಹಿಳಾ ಸಂಘದ ಸಭಾಗೃಹದಲ್ಲಿ ನಡೆಯಿತು.
Advertisement
ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್ ಕುಲಾಲ್ ಅವರು ಸುರೇಶ್ ಬಂಜನ್ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ನುಡಿನಮನಗೈದು, ಸಮಾಜದ ಸಂಘದ ಯಾವುದೇ ಸೇವಾ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ ಸುರೇಶ್ ಬಂಜನ್ ಅವರು ಸ್ಥಳೀಯ ಸಮಿತಿಯಲ್ಲಿಜವಾಬ್ದಾರಿಯುತ ಪದವಿಯನ್ನು ಪಡೆದು ಎಲ್ಲರೊಂದಿಗೂ ಅನ್ಯೋನ್ಯತೆಯಿಂದ ಬೆಳೆದವರು. ಅತೀ ಕಿರಿಯ ವಯಸ್ಸಿನಲ್ಲಿ ದೈವಾಧೀನರಾಗಿರುವ ಬಂಜನ್ ಅವರ ಸಾಮಾಜಿಕ ಸೇವಾ ಕಾರ್ಯಗಳು ಸಮಾಜದಲ್ಲಿ ಅಜರಾಮರವಾಗಿರುತ್ತವೆ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ. ಆವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ. ಅವರ ಸೇವಾತತ್ಪರತೆ ಇತರರಿಗೆ ಮಾದರಿಯಾಗಿ ಇರಲಿದೆ ಎಂದು ನುಡಿದರು.
ಪ್ರೀತಿಯ ಕೊಂಡಿಯಾಗಿದ್ದು ಸಮಾಜದ ಯಾವುದೇ ಕೆಲಸ ಕಾರ್ಯಗಳನ್ನು ತಿಳಿಸಿದರೆ, ಸ್ಪಂದಿಸುವಂತಹ ಮನೋ ಭಾವನೆ ಉಳ್ಳವರಾಗಿದ್ದರು. ಅವರು ಸಂಘಕ್ಕೆ ನೀಡಿದ ಕೊಡುಗೆಗಳು ಅನುದಿನವೂ ಸ್ಮರಿಸು ವಂಥದ್ದಾಗಿದೆ ಎಂದರು. ಸಿಎಸ್‌ಟಿ ಮುಲುಂಡ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶೇಖರ ಮೂಲ್ಯ ಅವರು ಪುಷ್ಪಾಂಜಲಿಯನ್ನು ಸಮರ್ಪಿಸಿ ಸ್ಥಳೀಯ ಸಮಿತಿಯ ಚಟುವಟಿಕೆಗಳು ವೇಗದಲ್ಲಿ ಸಾಗುವಂತಾಗಲು ಸುರೇಶ್
ಬಂಜನ್ ಅವರ ಸೇವಾ ಕಾರ್ಯದ ಅನುಭವಗಳು ಕಾರಣವಾಗಿದೆ. ಇತ್ತೀಚೆಗೆ ನಡೆದ ಕ್ರೀಡಾಕೂಟದಲ್ಲಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ನೆನಪು ಸಮಾಜದಲ್ಲಿ ಉಳಿಯುವಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು.
Related Articles
ಸಲ್ಲಿಸಿ, ಸಮಾಜದಲ್ಲಿ ತನ್ನ ಕರ್ತವ್ಯ ನಿಷ್ಠೆ ಏನಿದೆ, ತಾನು ಹುಟ್ಟಿದ ಸಮಾಜಕ್ಕೆ ತನ್ನ
ಕೊಡುಗೆ ಯಾವ ರೀತಿ ಸಲ್ಲಿಸಬೇಕು ಎನ್ನುವಂಥದ್ದನ್ನು ಸುರೇಶ್ ಬಂಜನ್ ಅವರು
ತನ್ನ ಬಾಲ್ಯದಲ್ಲಿಯೇ ಅರಿತುಕೊಂಡಿದ್ದರು. ಬಹಳ ವರ್ಷಗಳಿಂದ ಸಂಘದ ಮತ್ತು
ಜ್ಯೋತಿ ಕ್ರೆಡಿಟ್ ಸೊಸೈಟಿಯ ಸಂಬಂಧವನ್ನು ಸಕ್ರಿಯವಾಗಿ ಬೆಳೆಸಿಕೊಂಡವರು. ಅವರ
ಅಗಲುವಿಕೆ ಸಮಾಜದ ಬಂಧುಗಳಿಗೆ ದುಃಖವನ್ನು ನೀಡಿದೆ. ದುಃಖವನ್ನು ಸಹಿಸಿ
ಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಅವರ ಆತ್ಮಕ್ಕೆ ಶಾಂತಿ ಲಭಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜೇಶ್ ಬಂಜನ್, ಸುಂದರ ಎನ್. ಮೂಲ್ಯ, ಎಲ್. ಆರ್. ಮೂಲ್ಯ, ಸುಂದರ ತೊಕ್ಕೊಟ್ಟು, ಡಿ. ಐ. ಮೂಲ್ಯ, ಜಯ ಎಸ್. ಅಂಚನ್, ಆನಂದ ಬಿ. ಮೂಲ್ಯ, ಸಂಜೀವ ಬಂಗೇರ, ದಯಾನಂದ ಮೂಲ್ಯ, ಶಂಕರ ವೈ. ಮೂಲ್ಯ, ಲೀಲಾ ಬಂಜನ್, ಸುನೀತಾ ಜಿ. ಸಾಲ್ಯಾನ್
ಮೊದಲಾದವರು ಸುರೇಶ್ ಬಂಜನ್ ಅವರ ಸಿದ್ಧಿ-ಸಾಧನೆಗಳನ್ನು ವಿವರಿಸಿ ನುಡಿನಮನ
ಸಲ್ಲಿಸಿದರು.
Advertisement
ಕುಲಾಲ ಸಂಘ ಮುಂಬಯಿ, ಸಂಘದ ಸಿಎಸ್‌ಟಿ-ಮುಲುಂಡ್ ಸ್ಥಳೀಯ ಸಮಿತಿಯ ಸದಸ್ಯರು, ಇನ್ನಿತರ ಸ್ಥಳೀಯ ಸಮಿತಿಗಳ ಪದಾಧಿ ಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಸದಸ್ಯೆಯರು, ಯುವ ವಿಭಾಗದ ಸದಸ್ಯರು ಮೃತರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ಶ್ರದ್ಧಾಂಜಲಿ ಸಲ್ಲಿಸಿದರು.