Advertisement
ಬುಧವಾರ ಕುಳಾಯಿ ಜಂಕ್ಷನ್‌ನ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೊಡ್ಡ ಹೊಂಡ, ಗುಂಡಿಗಳು ಬಿದ್ದು ವಾಹನಗಳ ಬಿಡಿ ಭಾಗಗಳಿಗೆ ಹಾನಿ ಯಾಗುತ್ತಿದ್ದು, ಈ ಬಗ್ಗೆ ಸ್ಥಳೀಯ ರಿûಾ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದರು. ಸಂಸದರ ಜತೆ ಚರ್ಚಿಸಿ ಹೆದ್ದಾರಿ ಇಲಾಖೆಗೆ ಕಾಂಕ್ರೀಟ್ ಹಾಕಲು ಸೂಚಿಸಿದ್ದೆ. ಇದೀಗ ರಸ್ತೆ, ಸುಸಜ್ಜಿತ ಮಳೆ ನೀರು ಹರಿಯಲು ಒಳಚರಂಡಿ ಕಾಮಗಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಫುಟ್‌ಪಾತ್ ನಿರ್ಮಿಸಲಾಗುವುದು.ಬೈಕಂಪಾಡಿ ಕೈಗಾರಿಕಾ ತಿರುವು ಜಂಕ್ಷನ್, ಕೂಳೂರು ಹೆದ್ದಾರಿ ಬಳಿ ಕೂಡ ಇದೇ ಮಾದರಿಯಲ್ಲಿ ಅಭಿವೃದ್ಧಿಗೆ ಸೂಚಿಸಲಾಗಿದೆ ಎಂದರು.
ಕುಳಾಯಿ ಮಾರ್ಗವಾಗಿ ಎಂಆರ್‌ಪಿಎಲ್, ಎಚ್‌ಪಿಸಿಎಲ್ ಸಹಿತ ಬೃಹತ್ ಕಂಪೆನಿಗಳಿಗೆ ಭಾರೀ ಗಾತ್ರದ ಟ್ರಕ್‌ಗಳು, ಟ್ಯಾಂಕರ್ ಓಡಾಡುತ್ತಿದ್ದು, ಅಪಾಯಕಾರಿಯಾಗಿದೆ. ಈ ಪ್ರದೇಶ ಹಲವು ಬಡಾವಣೆಗಳನ್ನು ಹೊಂದಿದ್ದು, ಟ್ರಕ್, ಟ್ಯಾಂಕರ್‌ಗಳನ್ನು ನಿಷೇ ಧಿಸಬೇಕೆಂಬ ಮನವಿ ಸಾರ್ವಜನಿಕರಿಂದ ಕೇಳಿ ಬಂತು. ಸುರತ್ಕಲ್ ಜಂಕ್ಷನ್‌ನಲ್ಲಿ ವಾಹನ ಒತ್ತಡ ಅಧಿ ಕವಾಗುವುದರಿಂದ ಕುಳಾಯಿ, ಸುರತ್ಕಲ್‌ನಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡುವ ಪ್ರಸ್ತಾವ ವ್ಯಕ್ತವಾಯಿತು. ಉತ್ತರ ಸಂಚಾರ ಠಾಣೆಯ ಅ ಧಿಕಾರಿಗಳಿಗೆ ಈ ಬಗ್ಗೆ ಮುಂಜಾಗ್ರತಾ ಕ್ರಮ ಕ್ರಮಗೊಳ್ಳುವಂತೆ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಸೂಚಿಸಿದರು.