ಕುಳಗೇರಿ ಕ್ರಾಸ್: ಹೆದ್ದಾರಿ ದಾಟುತ್ತಿದ್ದ ಪಾದಚಾರಿಯೋರ್ವನಿಗೆ ವಾಹನ ಎತ್ತುವ ಕ್ರೇನ್ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೆ ಮೃತಪಟ್ಟ ಘಟನೆ ಗ್ರಾಮದ ಬಸ್ ನಿಲ್ದಾಣದ ಎದುರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತ ಪಾದಚಾರಿಯನ್ನು ನೀರಲಕೇರಿ ಗ್ರಾಮದ ಫಕ್ಕೀರಪ್ಪ ನಿಂಗಪ್ಪ ಹಡಪದ (55)ಎಂದು ಗುರುತಿಸಲಾಗಿದೆ. ಈತ ಹೆದ್ದಾರಿ ದಾಟುತ್ತಿದ್ದ ವೆಳೆ ಬೃಹತ್ ಕ್ರೇನ್ ಢಿಕ್ಕಿ ಹೊಡೆದ ರಬಸಕ್ಕೆ ಮುಂದಿನ ಗಾಲಿಗೆ ಸಿಲುಕಿ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲೇ ಬಿದ್ದು ಒದ್ದಾಡಿ ನಂತರ ಮೃತಪಟ್ಟಿದ್ದಾನೆ.
ಸರಿಯಾದ ಸಮಯಕ್ಕೆ ಬಾರದ ಆಂಬ್ಯೂಲೆನ್ಸ: ಅಪಘಾತ ನಡೆದ ತಕ್ಷಣವೇ ಪೊಲೀಸರು 108 ವಾಹನಕ್ಕೆ ಕಾಲ್ ಮಾಡಿದ್ದಾರೆ ಆದರೆ ಸರಿಯಾದ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಬಾರದ ಕಾರಣ ತಾಸುಗಟ್ಟಲೇ ಒದ್ದಾಡಿ ಪ್ರಾಣಬಿಟ್ಟಿದ್ದಾನೆ. ಒಂದು ಗಂಟೆಗೂ ಹೆಚ್ಚು ಕಾಲ ಸ್ಥಳಿಯರು ಆತನಿಗೆ ಪ್ರಥಮ ಚಿಕಿತ್ಸೆ ಕೊಟ್ಟು ಕಾಪಾಡುವ ಪ್ರಯತ್ನ ಮಾಡಿದರೂ ಪಾದಚಾರಿ ಪ್ರಾಣ ಮಾತ್ರ ಉಳಿಯಲಿಲ್ಲ.
ಟ್ರಾಫಿಕ್ ಸಮಸ್ಯೆ: ಹೆದಾರಿಯಲ್ಲಿ ಬಾರಿ ವಾಹನ ಓಡಾಡುತ್ತವೆ ಬಸ್ ನಿಲ್ದಾಣದ ಎದುರು ರಸ್ತೆ ಮೇಲೆ ಬೈಕ್ ಕಾರ್ ನಿಲ್ಲಿಸಿ ಟ್ರಾಫೀಕ್ ಸಮಸ್ಯೆ ಮಾಡುತ್ತಿದ್ದು ಪಾದಚಾರಿಗಳು ಓಡಾಡುವುದೇ ಪರಾಕಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಟ್ರಾಫಿಕ್ ಸಮಸ್ಯೆ ಪರಿಹರಿಸುವಂತೆ ಸಾರ್ವಜನಿಕರು ಒತಾಯಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.