ಕುಳಗೇರಿ ಕ್ರಾಸ್: ದೇಶದ ಭವಿಷ್ಯ ಹಾಗೂ ಬೆಳವಣಿಗೆ ದೃಷ್ಟಿಯಿಂದ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಪ್ರತಿಯೊಬ್ಬರೂ ಮತದಾನದ ಬಗ್ಗೆ ತಿಳಿದು ಮತ್ತೊಬ್ಬರಿಗೆ ತಿಳಿಹೇಳಬೇಕು ಎಂದು ಗ್ರಾಪಂ ಪಿಡಿಒ ಎಸ್ ಜಿ ಪರಸನ್ನವರ ಹೇಳಿದರು.
ಕುಳಗೇರಿ ಆಶ್ರಯ ಕಾಲೋನಿಯ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾ. ಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮತದಾನ ಮಾಡುವ ಹಲವು ಬಗೆಗಳನ್ನ ಜನರಿಗೆ ತಿಳಿಸಿದರು. ಜನ ಸಾಮಾನ್ಯರಲ್ಲಿ ಮತದಾನ ಕುರಿತು ಅರಿವು ಮೂಡಿಸಲು. ಅಮೂಲ್ಯ ಮತದಿಂದ ವಂಚಿತರಾಗದೆ ತಮ್ಮ ಹಕ್ಕು ಚಲಾಯಿಸಲು ಪ್ರೆರೇಪಿಸಲು ರಂಗೋಲಿ ಬಿಡಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಕಾರಣ ಎಲ್ಲರೂ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಮೇಲ್ವಿಚಾರಕಿ ಬಿ ಜಿ ಈರಣ್ಣವರ ಮಾತನಾಡಿ ಮತಗಟ್ಟೆಯಲ್ಲಿ ಬೆರಳಿಗೆ ಮಸಿ ಹಚ್ಚುವುದು. ಮತ ಹಾಕುವ ಮಸಿನ್ ಹಿಗೆ ಮತಗಟ್ಟೆಯಲ್ಲಿರುವ ಎಲ್ಲ ವಸ್ತುಗಳನ್ನ ರಂಗೋಲಿ ಮೂಲಕ ಚಿತ್ರ ಬಿಡಿಸಿ ತಮಗೆಲ್ಲ ಮತಗಟ್ಟೆಯಲ್ಲಿ ಹೇಗೆ ಮತದಾನ ಮಾಡಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಕಾರಣ ಯಾರು ಭಯಪಡದೆ ಕಡ್ಡಾಯವಾಗಿ ಮತದಾನ ಮಾಡಬೇಕು. ಸಾದ್ಯವಾದಷ್ಟು ಮತ್ತೊಬ್ಬರಿಗೆ ಮತದಾನ ಕುರಿತು ವೃದ್ಧರಿಗೆ ಮಹಿಳೆಯರಿಗೆ ತಿಳಿ ಹೇಳಬೇಕು ಎಂದರು.
ಅಂಗನವಾಡಿ ಕಾರ್ಯಕರ್ತೆಯರಾದ ಅನಿತಾ ತಳವಾರ, ಎಸ್ ಡಿ ಹಿತ್ತಲಮನಿ, ಶ್ರೀದೇವಿ ಕಮ್ಮಾರ, ಪಿ ಜೆ ಹಿರಗನ್ನವರ, ಆಶಾಕಾರ್ಯಕರ್ತೆಯರಾದ ಪ್ರೇಮಾ ಹಲಗತ್ತಿ, ಭೀಮವ್ವ ಕಂಬಾರ ಸೇರಿದಂತೆ ಗ್ರಾಮದ ಯಲ್ಲವ್ವ ಕರಡಿಗುಡ್ಡ, ಲಕ್ಷ್ಮವ್ವ ಪೂಜಾರ, ಸುಮಂಗಲಾ ಕರಲಿಗನವರ, ಭಾಗವ್ವ ಹುಳ್ಳಿ, ಶಂಕ್ರವ್ವ ಹಳಮನಿ, ರತ್ನವ್ವ ಮುಂದಲಮನಿ ಮತ್ತು ಗ್ರಾಮಸ್ಥರು ಗ್ರಾಪಂ ಸಿಬ್ಬಂದಿ ಹಾಜರಿದ್ದರು.
ಇದನ್ನೂ ಓದಿ: ಕೇರಳ ರೈಲಿಗೆ ಬೆಂಕಿ: ಎಸ್‌ಐಟಿ ತನಿಖೆಗೆ ಸಿಎಂ ಪಿಣರಾಯಿ ಆದೇಶ; ಶಂಕಿತನ ರೇಖಾಚಿತ್ರ ಬಿಡುಗಡೆ