ಎಡದಪವು: ಗಂಜಿಮಠ, ಅನಿಲ್ ಕುಮಾರ್ ಉಪಸ್ಥಿತರಿದ್ದರು. ಕುಕ್ಕಟ್ಟೆ, ತಾರೆಮಾರ್ ಮೂಲಕ ಮಾರ್ಗದಂಗಡಿಯನ್ನು ಸಂಪರ್ಕಿಸುವ ಕುಕ್ಕಟ್ಟೆ ರಸ್ತೆಯಲ್ಲಿ ನಿರ್ಮಿಸಿದ ಕಿರು ಸೇತುವೆಯ ತಡೆಗೋಡೆ ಕುಸಿದು ಅಪಾಯಕಾರಿ ಸ್ಥಿತಿಯಲ್ಲಿದೆ. ಸೇತುವೆ ಹಾಗೂ ರಸ್ತೆ ಸೇರುವ ಜಾಗದಲ್ಲಿ ಕಟ್ಟಿರುವ ತಡೆಗೋಡೆ ಹಾಗೂ ರಸ್ತೆಯ ಬದಿ ಕುಸಿದಿದೆ. ಇದು ಸವಾರರ ಗಮನಕ್ಕೆ ಬಾರದ ಸ್ಥಿತಿಯಲ್ಲಿರುವುದರಿಂದ ಅಪಾಯಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಕುಸಿದಿರುವ ಜಾಗದಲ್ಲಿ ವಾಹನ ಚಲಿಸಿದರೆ ವಾಹನ ತೋಡಿಗೆ ಉರುಳುವ ಅಪಾಯ ಎದುರಾಗಿದೆ.
ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಇದಾಗಿದ್ದು, ಇದರ ಅಗಲೀಕರಣಕ್ಕೆ ಹಾಗೂ ಹೊಸ ಸೇತುವೆ ನಿರ್ಮಾಣಕ್ಕೆ ಒಂದೂವರೆ ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದರೂ, ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ಮಳೆ ನೀರು ಹರಿದುಹೋಗಲು ಚರಂಡಿ ವ್ಯವಸ್ಥೆ ಇರದೆ ನೀರು ರಸ್ತೆಯಲ್ಲೇ
ಹರಿದು ತಡೆಗೋಡೆ ಮುಖಾಂತರ ತೋಡಿಗೆ ಹರಿದುಹೋಗುವುದರಿಂದ ತಡೆಗೋಡೆ ಕುಸಿಯಲು ಕಾರಣವಾಗಿದೆ.
ಮಳೆಗಾಲದಲ್ಲಿ ಕುಸಿತ ಇನ್ನೂ ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಇನ್ನಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆಯಲ್ಲಿನ ಅಪಾಯವನ್ನು ತಿಳಿಸಲು ಸೂಚನಾಫಲಕವನ್ನೂ ಅಳವಡಿಸಲಾಗಿಲ್ಲ. ಹಳೆಸೇತುವೆಗೆ ಶಾಶ್ವತ ಮುಕ್ತಿ ನೀಡಿ, ಹೊಸ ರಸ್ತೆ ನಿರ್ಮಿಸಲು ಇಲಾಖೆ ಮುಂದಾಗಬೇಕಿದೆ.
ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ
ಚರಂಡಿಯ ಅಭಾವದಿಂದ ಮಳೆ ನೀರು ಹರಿದು ರಸ್ತೆ ಕುಸಿತಗೊಂಡಿದೆ. ಚರಂಡಿ ದುರಸ್ತಿ ಗೊಳಿಸಲು ಪಿಡಬ್ಲ್ಯೂಡಿಗೆ ಒತ್ತಾಯಿಸಲಾಗಿದೆ. ಮಳಲಿ ಕ್ರಾಸ್ ಬಳಿ ಚರಂಡಿ ದುರಸ್ತಿ ನಡೆಯುತ್ತಿದ್ದು, ಇಲ್ಲಿ ಹೊಸಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
– ನಾಗೇಶ್ ಶೆಟ್ಟಿ
ಕುಪ್ಪೆಪದವು ಕ್ಷೇತ್ರ ತಾಲೂಕು
ಪಂಚಾಯತ್ ಸದಸ್ಯರು