Advertisement

ಕುಕ್ಕೆ ಸುಬ್ರಹ್ಮಣ್ಯ:  ಮರಳಿ ಧರ್ಮಸಮ್ಮೇಳನಕ್ಕೆ ನಿರ್ಧಾರ

07:46 AM Dec 15, 2017 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಈ ಬಾರಿ ಕಿರುಷಷ್ಠಿಯಂದು ಧರ್ಮಸಮ್ಮೇಳನ ಇರುವುದಿಲ್ಲ ಎಂದು ಹೇಳಿದ್ದ ಆಡಳಿತ ಮಂಡಳಿ ಇದೀಗ ನಿರ್ಧಾರ ಬದಲಿಸಿದೆ. ಅದರಂತೆ ಡಿ. 24ರ ಕಿರುಷಷ್ಠಿ ವೇಳೆ ಧರ್ಮಸಮ್ಮೇಳನ ನಡೆಯಲಿದೆ.

Advertisement

ಈ ಬಾರಿ ಡಿ. 19ರಿಂದ 24ರ ತನಕ ನಡೆಯುವ ಕಿರುಷಷ್ಠಿ ಮಹೋತ್ಸವದಲ್ಲಿ ಕೇವಲ ಸಾಂಸ್ಕೃತಿಕ ಪ್ರದರ್ಶನವನ್ನಷ್ಟೇ ನಡೆಸಲು ಆಡಳಿತ ಮಂಡಳಿ ಆರಂಭದಲ್ಲಿ ನಿರ್ಧರಿಸಿತ್ತು. ಕಿರುಷಷ್ಠಿ ಅನಂತರ ಶಾಸಕರು, ಸಚಿವರು, ಯತಿಗಳು, ಉಪನ್ಯಾಸಕರನ್ನು ಕರೆಸಿ ಪ್ರತ್ಯೇಕ ಸಭೆ ನಡೆಸುವ ಕುರಿತು ಅದು ಆಸಕ್ತಿ ತೋರಿತ್ತು. ಆದರೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಸಂಪ್ರದಾಯದಂತೆ ಧರ್ಮಸಮ್ಮೇಳನ ನಡೆಸಲು ಆಗ್ರಹಿಸಿದ್ದವು. ಇದೀಗ ಮಂಡಳಿಯ ನಿರ್ಣಯ ಬದಲಾಗಿದ್ದು, ಡಿ. 24ರಂದು ಧರ್ಮಸಮ್ಮೇಳನ ನಡೆಸಲಾಗುತ್ತಿದೆ ಎಂದು ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.

2017ರ ಜು.8ರಂದು ನಡೆದ ಮಾಸ್ಟರ್‌ ಪ್ಲಾನ್‌ ಯೋಜನೆಯಡಿ ಕಾಮಗಾರಿಗಳ ಉದ್ಘಾಟನಾ ಸಮಾ
ರಂಭದಲ್ಲಿ ಶಿಷ್ಟಾಚಾರ ಪ್ರಕಾರ ತನ್ನನ್ನು ಅಧ್ಯಕ್ಷರನ್ನಾಗಿ ಮಾಡದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದರಿಂದ ತನ್ನ ಹಕ್ಕಿಗೆ ಚ್ಯುತಿ ಬಂದಿದೆ ಎಂದು ಶಾಸಕ ಎಸ್‌. ಅಂಗಾರ ವಿಧಾನ ಸಭಾಧ್ಯಕ್ಷರಿಗೆ ದೂರು ಸಲ್ಲಿಸಿದ್ದರು. ದೇಗುಲ ಆಡಳಿತ ಮಂಡಳಿಯ ನಿರ್ಧಾರವನ್ನು ಬಿಜೆಪಿ ಖಂಡಿಸಿತ್ತು. ಆದಿವಾಸಿ ಮಲೆಕುಡಿಯ ಜನಾಂಗದ, ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.

ಬುಧವಾರದಂದು ಸುಬ್ರಹ್ಮಣ್ಯದ ಹಿಂದೂಪರ ಸಂಘಟನೆಗಳು ವ್ಯವಸ್ಥಾಪನ ಮಂಡಳಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಸಮ್ಮೇಳನವನ್ನು ರೂಢಿಯಂತೆ ಮುಂದುವರಿಸಲು ಅವಕಾಶ ಮಾಡಿಕೊಡುವಂತೆ ವಿನಂತಿಸಿದ್ದವು. ಈ ಎಲ್ಲ ವಿದ್ಯಮಾನ ಹಿನ್ನೆಲೆಯಲ್ಲಿ ನಿರ್ಧಾರ ಬದಲಿಸಿದ ಆಡಳಿತ ಮಂಡಳಿ ಧರ್ಮ ಸಮ್ಮೇಳನಕ್ಕೆ ನಿರ್ಧರಿಸಿದೆ. ಇದರಿಂದ ಗೊಂದಲಗಳಿಗೆ ತೆರೆ ಬಿದ್ದಿದೆ. ಧರ್ಮಸಮ್ಮೇಳನ ಅಧ್ಯಕ್ಷತೆ ಬಗ್ಗೆ ಆಮಂತ್ರಣ ಮುದ್ರಣವಾದ ಬಳಿಕ ವಷ್ಟೇ ತಿಳಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next