Advertisement

Kukke Subramanya: ಚಂಪಾಷಷ್ಠಿ ಮಹೋತ್ಸವ ಬೀದಿ ಉರುಳು ಸೇವೆ ಆರಂಭ

12:52 AM Dec 14, 2023 | Team Udayavani |

ಸುಬ್ರಹ್ಮಣ್ಯ: ಚಂಪಾಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಟ ಸೇವೆಯಲ್ಲೊಂದಾದ ಬೀದಿ ಉರುಳು ಸೇವೆ ಮಂಗಳವಾರ ರಾತ್ರಿ ಲಕ್ಷದೀಪೋತ್ಸವ ರಥೋತ್ಸವ ಬಳಿಕ ಆರಂಭವಾಯಿತು.

Advertisement

ಕ್ಷೇತ್ರದಲ್ಲಿ ಚಂಪಾಷಷ್ಠಿಯ ಲಕ್ಷದೀಪೋತ್ಸವದ ರಥೋತ್ಸವ ಬಳಿಕ ಆರಂಭಗೊಳ್ಳುವ ಬೀದಿ ಉರುಳು ಸೇವೆಯು ಮಹೋರಥೋತ್ಸವದ ತನಕ ನಡೆಯುತ್ತದೆ. ಪ್ರಧಾನ ದಿನವಾದ ಚೌತಿ, ಪಂಚಮಿಯಂದು ಅಧಿಕ ಸಂಖ್ಯೆಯಲ್ಲಿ ಈ ಸೇವೆ ನೆರವೇರುತ್ತದೆ.

ಭಕ್ತರು ಕುಮಾರಧಾರೆಯಲ್ಲಿ ಮಿಂದು ರಾಜ ರಸ್ತೆ, ರಥಬೀದಿಯಲ್ಲಿ ಉರುಳುತ್ತಾ ಬಂದು ದೇವಸ್ಥಾನದ ಅಂಗಣದಲ್ಲಿ ಪ್ರದಕ್ಷಿಣೆ ಹಾಕಿ ಮೂಡು ಬಾಗಿಲಿನಲ್ಲಿ ಹೊರ ಹೋಗಿ ಎದುರಿನ ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಬಂದು ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸೇವೆಗೆ ಯಾವುದೇ ರಶೀದಿ ಇಲ್ಲ.

ಭಕ್ತರಿಗೆ ಬೀದಿ ಉರುಳು ಸೇವೆಗೆ ಪೂರಕವಾಗುವಂತೆ ದೇವಸ್ಥಾನದ ವತಿಯಿಂದ ಪ್ರತ್ಯೇಕ ಪಥ ಸೇರಿದಂತೆ ವಿವಿಧ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕಾಂಕ್ರೀಟ್‌ ರಸ್ತೆಯಲ್ಲಿ ಉರುಳು ಸೇವೆ ಮಾಡಬೇಕಾಗಿರುವುದರಿಂದ ಸಂಜೆ ಅಥವಾ ಮುಂಜಾನೆ ವೇಳೆ ಸೇವೆ ಆರಂಭವಿಸುವಂತೆ ಮನವಿ ಮಾಡಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next