Advertisement

ಕುಕ್ಕೆ: ಇಂದು ನಡೆಯಬೇಕಿದ್ದ ಅಭಿವೃದ್ದಿ ಉದ್ಘಾಟನೆ ಧಿಡೀರ್ ರದ್ದು

10:51 AM Oct 14, 2019 | Team Udayavani |

ಸುಬ್ರಹ್ಮಣ್ಯ: ಮಹತ್ವದ ಬೆಳವಣಿಗೆಯೊಂದರಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾರ್ಯನಿರ್ವಹಣಾಧಿಕಾರಿ ಆಗಿದ್ದ ರವೀಂದ್ರ ಎಂ.ಎಚ್ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಮಂಗಳೂರು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ವೆಂಕಟೇಶ್ ಅವರು ಸೋಮವಾರದಿಂದ ದೇಗುಲದ ಆಡಳಿತಾಧಿಕಾರಿಯಾಗಿ  ಅಧಿಕಾರ ಸ್ವೀಕರಿಸಲಿದ್ದಾರೆ.

Advertisement

ದೇಗುಲದ ಈಗಿನ ಆಡಳಿತ ಮಂಡಳಿ ಅವಧಿ ಅ.13ಕ್ಕೆ ಮುಕ್ತಾಯಗೊಂಡಿತ್ತು. ಆದರೆ ಅ.15ಕ್ಕೆ ನಮ್ಮ‌ ಆಡಳಿತ ಅವಧಿ ಪೂರ್ಣವಾಗುತ್ತದೆ ಎಂದು ಈಗಿನ ಆಡಳಿತ ಮಂಡಳಿ ಹೇಳಿಕೊಂಡಿತ್ತು.

ಅದರಂತೆ ಅಧಿಕಾರ ಅವಧಿ ಮುಕ್ತಾಯದ ಕೊನೆ ಕ್ಷಣದ ಒಂದು ದಿನದ ಹಿಂದೆ ಅಂದರೆ ಅ.14ರಂದು  ಕ್ಷೇತ್ರದಲ್ಲಿ ನಡೆಸಲಾಗಿದ್ದ ಹಲವು ಅಭಿವ್ರದ್ದಿ ಕಟ್ಟಡಗಳ ಲೋಕಾರ್ಪಣೆಗೆ ಸಿದ್ಧತೆಗಳನ್ನು ನಡೆಸಿತ್ತು.ಸೋಮವಾರ ಬೆಳಗ್ಗೆ ಉದ್ಘಾಟನೆಗಳು ಆಗಬೇಕಿತ್ತು. ಹಿಂದಿನ ದಿನ  ರಾತ್ರಿ ನಡೆದ ಕೆಲ ವಿದ್ಯಮಾನಗಳಿಂದ ಉದ್ಘಾಟನೆ ಕಾರ್ಯಕ್ರಮಗಳು ರದ್ದುಗೊಂಡಿವೆ.

ಈಗಿನ ಆಡಳಿತ ಸಮಿತಿಗೆ ಯಾವುದೇ ಅಧಿಕಾರ ಇಲ್ಲ ಎಂದು ಅಧಿಕಾರಿಗಳಿಂದ ಸೂಚನೆ ಬಂದ ಮೇರೆಗೆ ಅಂದು ನಡೆಯಬೇಕಿದ್ದ ಎಲ್ಲ ಉದ್ಘಾಟನೆ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.

ದಿಡೀರ್ ನಡೆದ ಈ ಬೆಳವಣಿಗೆ ಸಾಕಷ್ಟು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಈಗಿನ ಆಡಳಿತ ಮಂಡಳಿ ಆಡಳಿತ ಸ್ವೀಕರಿಸಿದ ಬಳಿಕ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದಾಗಿ ಅಸಮಧಾನಗಳು ಇದ್ದವು.ಈ ಎಲ್ಲ ಬೆಳವಣಿಗೆಗೆ ಅದೇ ಕಾರಣ ಎಂಬ ಮಾತುಗಳು ಇದೀಗ ಕೇಳಿ ಬರುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next