Advertisement
ಮುಜರಾಯಿ ಇಲಾಖೆ 300 ಕೋ.ರೂ. ವೆಚ್ಚದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ಇಂಜಾಡಿ ಬಳಿ 50 ಎಕರೆ ಪ್ರದೇಶದಲ್ಲಿ 100 ಕೋ.ರೂ. ವೆಚ್ಚದಲ್ಲಿ ಪರಿಸರ ಸ್ನೇಹಿ ಕುಟೀರ (“ಹಟ್’)ಗಳನ್ನು ಸ್ಥಾಪಿಸಲಾಗುತ್ತಿದೆ. ಅಲ್ಲಿ ಮನಃ ಶಾಂತಿ ದೊರಕಿಸುವ ಯೋಗ, ಥೆರಪಿ, ಧ್ಯಾನ, ಆಯು ರ್ವೇದ ಚಿಕಿತ್ಸೆ ಇತ್ಯಾದಿ ಸೌಲಭ್ಯ ಗಳಿರಲಿವೆ. ವಿಷ ಚಿಕಿತ್ಸೆಯ ಆಸ್ಪತ್ರೆಯೂ ಅದರಲ್ಲೊಂದು. ಹಾವು ಕಡಿತಕ್ಕೊಳಗಾದವರನ್ನು ದಾಖ ಲಿಸಿಕೊಳ್ಳಲು 5ರಿಂದ 6 ಬೆಡ್ ವ್ಯವಸ್ಥೆ ಇರಲಿದೆ. ಆಯುರ್ವೇದ ವೈದ್ಯರು, ದಾದಿಯರು ಇರಲಿದ್ದು ಗಿಡಮೂಲಿಕೆ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.
ಹಾವಿನ ಕಡಿತಕ್ಕೆ ತ್ವರಿತ ಚಿಕಿತ್ಸೆ ಅಗತ್ಯ. ಸ್ವಲ್ಪ ಎಚ್ಚರ ತಪ್ಪಿದರೂ ಅಡ್ಡ ಪರಿಣಾಮಗಳಾಗುತ್ತವೆ. ಆಧುನಿಕ ವೈದ್ಯ ವಿಜ್ಞಾನ ಎಷ್ಟೇ ಮುಂದುವರಿ ದರೂ ವೈದ್ಯರು ಚಿಕಿತ್ಸೆ ನೀಡಲು ಹಿಂಜರಿಯುತ್ತಾರೆ. ಹೀಗಾಗಿ ಹೆಚ್ಚು ಸಾವು ಸಂಭವಿಸುತ್ತಿರುತ್ತದೆ. ಹಾವು ಕಡಿತದಿಂದ ದೇಶದಲ್ಲಿ ವರ್ಷವೊಂದಕ್ಕೆ 20 ಸಾವಿರದಿಂದ 50 ಸಾವಿರದಷ್ಟು ಸಾವು ಸಂಭ ವಿಸುತ್ತಿದೆ. ಗಿಡಮೂಲಿಕೆಗಳ ಔಷಧವೇ ಈಗಲೂ ಹೆಚ್ಚಿನ ಕಡೆ ಬಳಕೆಯಾಗುತ್ತಿದೆ. ಕರಾವಳಿ ನಾಗರಾಧನೆಗೆ ಪ್ರಸಿದ್ಧಿ. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಾದ ದ.ಕ., ಉಡುಪಿ ಜಿಲ್ಲೆಗಳಲ್ಲಿ ಅಸಂಖ್ಯಾಕ ನಾಗಬನ ಗಳು ಕೂಡ ಇದ್ದು, ಅವು ಹಾವುಗಳ ಆವಾಸ ಸ್ಥಾನಗಳಾಗಿವೆ. ನಾಗರಹಾವು, ಕಾಳಿಂಗ ಸರ್ಪ, ಕಡಂಬಳ, ಕನ್ನಡಿ, ಕೊಳಕು ಮಂಡಲ, ಬಳೆ ಒಡಕ ಮೊದಲಾದ ಹಾವುಗಳು ವಿಷಪೂರಿತವಾಗಿರುತ್ತವೆ. ಕೇರೆ, ನೀರೊಳ್ಳೆಯಂತಹ ವಿಷರಹಿತ ಹಾವುಗಳೂ ಇವೆ. ದೇಶದಲ್ಲಿ 270ಕ್ಕೂ ಅಧಿಕ ಪ್ರಬೇಧದ ಹಾವುಗಳಿವೆ.
Related Articles
ಕೇರಳದ ಕಣ್ಣೂರು ಜಿಲ್ಲೆಯ ಪರಶ್ಶಿನಕಡವು ಸಮೀಪ ಪಾಪ್ಪಿನಶೆÏàರಿಯಲ್ಲಿ ವಿಷದ ಹಾವು ಕಡಿತದ ಚಿಕಿತ್ಸಾ ಕ್ಲಿನಿಕ್ ಇದೆ. ಅದನ್ನು ಹೊರತುಪಡಿಸಿದರೆ ದಕ್ಷಿಣ ಭಾರತದಲ್ಲಿ ಇಂತಹ ಆಸ್ಪತ್ರೆ ಇಲ್ಲ. ಆರಂಭದಲ್ಲಿ ಆ್ಯಂಟಿಬ್ಯಾಟಿಕ್ ಚುಚ್ಚುಮದ್ದು ಕೊಟ್ಟು ಬಳಿಕ ಆಯುರ್ವೇದ ಪದ್ಧತಿಯ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಕ್ಲಿನಿಕ್‌ನ ಡಾ| ಹರಿಕೃಷ್ಣ ತಿಳಿಸಿದ್ದಾರೆ.
Advertisement
ಇಂಜಾಡಿ ಬಳಿ ವಿಷ ಚಿಕಿತ್ಸಾಲಯವನ್ನು ತೆರೆಯಲು ಉದ್ದೇಶಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಡಿಪಿಆರ್ ಸಿದ್ಧವಾಗಲಿದೆ. ಈಗಿನ ನೈಸರ್ಗಿಕ ಪರಿಸರವನ್ನು ಹಾಗೆಯೇ ಉಳಿಸಿಕೊಂಡು ಪರಿಸರ ಸ್ನೇಹಿಯಾಗಿ, ನಿರ್ಮಿಸಲಾಗುತ್ತಿದೆ.– ಮೋಹನ್ ರಾಂ ಸುಳ್ಳಿ , ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ, ಕುಕ್ಕೆ ಸುಬ್ರಹ್ಮಣ್ಯ -ಬಾಲಕೃಷ್ಣ ಭೀಮಗುಳಿ