Advertisement
ಮಧ್ಯಾಹ್ನ ಪಲ್ಲಪೂಜೆ, ರಾತ್ರಿ ವಿಶೇಷ ಪಾಲಕಿ ಉತ್ಸವ ಮತ್ತು ಬಂಡಿ ಉತ್ಸವ ಹೊರಾಂಗಣದಲ್ಲಿ ಜರಗಲಿದೆ. ರಥೋತ್ಸವದ ಬಳಿಕ ಸವಾರಿ ಕಟ್ಟೆಯಲ್ಲಿ ಕಟ್ಟೆ ಪೂಜೆ ಮತ್ತು ಆಕರ್ಷಣೀಯ “ಕುಕ್ಕೆ ಬೆಡಿ’ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ ಷಣ್ಮುಖ ಪ್ರಸಾದ ಮಾತ್ರವಲ್ಲದೆ ಆದಿಸುಬ್ರಹ್ಮಣ್ಯ ಭೋಜನ ಶಾಲೆಯಲ್ಲೂ ಭೋಜನ ಪ್ರಸಾದವನ್ನು ವಿತರಿಸಲಾಗುತ್ತದೆ.
ಚಂಪಾ ಷಷ್ಠಿ ಉತ್ಸವದ ಪ್ರಧಾನ ಮೂರು ದಿನಗಳಾದ ಚೌತಿ, ಪಂಚಮಿ ಹಾಗೂ ಷಷ್ಠಿ ಯಂದು ದೇವಸ್ಥಾನದಲ್ಲಿ ರಾತ್ರಿ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಪಂಚಾಮೃತ ಮಹಾ ಭಿಷೇಕ ಸೇವೆ ಕೂಡ ಈ ದಿನಗಳಲ್ಲಿ ನಡೆ ಯುವುದಿಲ್ಲ. ಷಷ್ಠಿಯಂದು ಆಶ್ಲೇಷಾ ಬಲಿ ಹಾಗೂ ನಾಗಪ್ರತಿಷ್ಠೆ ಸೇವೆಗಳೂ ಇರುವುದಿಲ್ಲ. ರಥಗಳಿಗೆ ಶಿಖರ ಮುಹೂರ್ತ
ಕ್ಷೇತ್ರದ ಚಂಪಾಷಷ್ಠಿ ಮಹೋತ್ಸವ ಸಂದರ್ಭ ಎಳೆಯುವ ಎರಡು ರಥಗಳಿಗೆ ಶಿಖರ ಮುಹೂರ್ತ ಮಂಗಳವಾರ ನೆರವೇರಿತು. ದೇವಸ್ಥಾನದ ಪುರೋಹಿತ ಮಧೂಸೂದನ ಕಲ್ಲೂರಾಯ ಪೂಜಾ ವಿಧಿ ನೆರವೇರಿಸಿದರು. ಬಳಿಕ ಎರಡು ರಥಗಳಿಗೆ ಶಿಖರ ಅಳವಡಿಸಲಾಯಿತು.
Related Articles
Advertisement
ಇದನ್ನೂ ಓದಿ:ಕೋವಿಡ್ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆ ಪರಾರಿ : ಖಾಸಗಿ ಹೋಟೆಲ್ ವಿರುದ್ಧ ಎಫ್ಐಆರ್
ಮದ್ಯ ಮಾರಾಟ ನಿಷೇಧಮಂಗಳೂರು: ಷಷ್ಠಿ ಮಹೋತ್ಸವ ಪ್ರಯುಕ್ತ ಕುಕ್ಕೆಯಲ್ಲಿ ಅಪಾರ ಭಕ್ತರು ಸೇರುವುದರಿಂದ ಪರಿಸರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಸುಬ್ರಹ್ಮಣ್ಯ ಗ್ರಾ.ಪಂ. ವ್ಯಾಪ್ತಿಯ ಇಂಚಾಡಿ ಬಳಿಯ ಮದ್ಯ ಮಾರಾಟದ ಕೇಂದ್ರಗಳನ್ನು ಡಿ. 8ರ ಬೆಳಗ್ಗೆ 6ರಿಂದ ಡಿ. 9ರ ಮಧ್ಯರಾತ್ರಿ 12 ಗಂಟೆಯವರೆಗೆ ಮುಚ್ಚುವಂತೆ ಆದೇಶಿಸಿದ್ದಾರೆ.