ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸದ ಲಕ್ಷದೀಪೋತ್ಸವದ ದಿನ ಕುಣಿತ ಭಜನೋತ್ಸವ ನೆರವೇರಲಿದೆ.
ನ.23ರಂದು ನಡೆಯುವ ಉತ್ಸವ ಸಂದರ್ಭ ಕುಣಿತ ಭಜನೆಯು ವಿಶೇಷ ಮೆರುಗು ನೀಡಲಿದೆ ಎಂದು ಶ್ರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಲಕ್ಷದೀಪೋತ್ಸವದ ದಿನ ಸಂಜೆ 7ರಿಂದ ರಾಜಗೋಪುರದ ಬಳಿ ಯಿಂದ ರಥಬೀದಿ,ಅಡ್ಡಬೀದಿ ಕಾಶಿಕಟ್ಟೆಯಾಗಿ ಕುಮಾರಧಾರದ ವರೆಗೆ ಕುಣಿತ ಭಜನ ಸಂಭ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಭಜನ ಸಂಭ್ರಮದಲ್ಲಿ ಸುಮಾರು 1,000 ತಂಡಗಳು ಭಾಗ ವಹಿ ಸುವ ನಿರೀಕ್ಷೆ ಇದ್ದು ಗಾಯಕ ಜಗದೀಶ ಆಚಾರ್ಯ ಪುತ್ತೂರು ಅವರು ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳು, ಊರವರು, ಭಕ್ತರು, ಸಂಘ ಸಂಸ್ಥೆಗಳು ಭಾಗವಹಿಸಲಿದ್ದಾರೆ ಎಂದರು.
ಭಜನ ಸಂಭ್ರಮದಲ್ಲಿ ಸಾರ್ವಜನಿಕರಲ್ಲದೇ ರಾಜ್ಯಾದ್ಯಂತ ಭಕ್ತರು ಸೇವೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿದ್ದು ಪ್ರತೀ ತಂಡದಲ್ಲಿ ಕನಿಷ್ಠ 10 ಮಂದಿಗೆ ಮಾತ್ರ ಅವಕಾಶವಿದೆ. ಆಸಕ್ತ ತಂಡಗಳು ನ. 20ರ ಒಳಗಾಗಿ ಶ್ರೀ ದೇಗುಲದ ಕಚೇರಿಯಲ್ಲಿ ಹೆಸರು ನೋಂದಾಯಿಸಬೇಕು ಶ್ರೀ ದೇವರು ಉತ್ಸವಕ್ಕೆ ರಥ ಬೀದಿಗೆ ಪ್ರವೇಶಗೈಯುವ ವೇಳೆ ಲಕ್ಷ ಹಣತೆ ಯನ್ನು ಬೆಳಗಿಸುವ ಕಾರ್ಯ ಕ್ರಮವು ನೆರವೇರಲಿದೆ. ದೇಗುಲದ ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ವನಜಾ ವಿ. ಭಟ್ ಉಪಸ್ಥಿತರಿದ್ದರು.